ಹಟ್ಟಿ ಚಿನ್ನದ ಗಣಿಯಲ್ಲಿ ಅದಿರು‌ ತೆಗೆಯೋದನ್ನು ಖಾಸಗಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ, ಕಾರಣವೇನು?

|

Updated on: Mar 20, 2021 | 7:32 PM

ಉತ್ತಮ ನಿರ್ವಹಣೆ, ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮತ್ತು ಕಾರ್ಮಿಕರ ಸಂಖ್ಯೆ ಹೆಚ್ಚು ಮಾಡಿಕೊಳ್ಳಬಹುದೆಂಬ ಕಾರಣಕ್ಕೆ ಹಟ್ಟಿ ಚಿನ್ನದ ಗಣಿಯನ್ನು ಖಾಸಗಿಗೆ ವಹಿಸಲು ಗಣಿ ಇಲಾಖೆ ಚಿಂತನೆ ನಡೆಸಿದೆ. ಸಿಎಂ ಬಿ.ಎಸ್‌.ಯಡಿಯೂರಪ್ಪ ಜೊತೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.

ಹಟ್ಟಿ ಚಿನ್ನದ ಗಣಿಯಲ್ಲಿ ಅದಿರು‌ ತೆಗೆಯೋದನ್ನು ಖಾಸಗಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ, ಕಾರಣವೇನು?
ಹಟ್ಟಿ ಚಿನ್ನದ ಗಣಿಯಲ್ಲಿ ಅದಿರು‌ ತೆಗೆಯೋದನ್ನು ಖಾಸಗಿಗೆ ವಹಿಸಲು ರಾಜ್ಯ ಸರ್ಕಾರ ಚಿಂತನೆ
Follow us on

ರಾಯಚೂರು: ಹಟ್ಟಿ ಚಿನ್ನದ ಗಣಿಯಲ್ಲಿ ಅದಿರು‌ ತೆಗೆಯುವುದನ್ನು ಖಾಸಗಿಗೆ ವಹಿಸಲು ರಾಜ್ಯ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಪ್ರಸ್ತುತ ಹಟ್ಟಿ ಚಿನ್ನದ ಗಣಿ ನಿರ್ವಹಿಸಲಿರುವ ರಾಜ್ಯ ಸರ್ಕಾರ ಪ್ರಸಕ್ತ ವರ್ಷಾಂತ್ಯಕ್ಕೆ 5 ಸಾವಿರ ಕೆ.ಜಿ ಚಿನ್ನ ಉತ್ಪಾದನೆ ಗುರಿಯನ್ನು ನಿಗದಿಮಾಡಿದೆ. ಪ್ರಸಕ್ತ ವರ್ಷಾಂತ್ಯಕ್ಕೆ 5 ಸಾವಿರ ಕೆ.ಜಿ ಚಿನ್ನ ಉತ್ಪಾದನೆ ಗುರಿಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿಗದಿಮಾಡಿದೆ. ಆದರೆ ಮುಂದೆ, ಉತ್ತಮ ನಿರ್ವಹಣೆ, ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮತ್ತು ಕಾರ್ಮಿಕರ ಸಂಖ್ಯೆ ಹೆಚ್ಚು ಮಾಡಿಕೊಳ್ಳಬಹುದೆಂಬ ಕಾರಣಕ್ಕೆ ಹಟ್ಟಿ ಚಿನ್ನದ ಗಣಿಯನ್ನು ಖಾಸಗಿಗೆ ವಹಿಸಲು ಗಣಿ ಇಲಾಖೆ ಚಿಂತನೆ ನಡೆಸಿದೆ. ಸಿಎಂ ಬಿ.ಎಸ್‌.ಯಡಿಯೂರಪ್ಪ ಜೊತೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು.

ಹಟ್ಟಿ ಚಿನ್ನದ ಗಣಿ

ಕಲ್ಯಾಣ ಕರ್ನಾಟಕದಲ್ಲಿ ಜ್ಯುವೆಲ್ಲರಿ ಪಾರ್ಕ್​​ ಪ್ರಾರಂಭಿಸಲು ನಿರ್ಧಾರ
ಇತ್ತ, ಕಲ್ಯಾಣ ಕರ್ನಾಟಕದಲ್ಲಿ ಜ್ಯುವೆಲ್ಲರಿ ಪಾರ್ಕ್​​ಗೆ ನಿರ್ಧಾರ ಮಾಡಲಾಗಿದೆ. ಜ್ಯುವೆಲ್ಲರಿ ಪಾರ್ಕ್​​ ಪ್ರಾರಂಭಿಸಲು ಸರ್ಕಾರ ನಿರ್ಧಾರ ಮಾಡಿದೆ. ವಿಕಾಸಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆಭರಣ ತಯಾರಿಕಾ ಸಂಘಟನೆಗಳ ಮುಖ್ಯಸ್ಥರ ಜೊತೆ ಸಚಿವ ಮುರುಗೇಶ್ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸದ್ಯ, ಬೀದರ್ ಅಥವಾ ಕಲಬುರಗಿಯಲ್ಲಿ ಜ್ಯುವೆಲ್ಲರಿ ಪಾರ್ಕ್ ಸ್ಥಾಪಿಸಲು ಚಿಂತನೆ ನಡೆದಿದೆ. 50ರಿಂದ 75 ಎಕರೆ ಜಮೀನಿನಲ್ಲಿ ಜ್ಯುವೆಲ್ಲರಿ ಪಾರ್ಕ್ ಪ್ರಾರಂಭಿಸುವ ಯೋಚನೆ ಇದೆ. ಪಾರ್ಕ್ ಸ್ಥಾಪನೆಗೆ ಮುಂದಾಗಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಜ್ಯುವೆಲ್ಲರಿ ಪಾರ್ಕ್​ಗೆ ಸರ್ಕಾರ ಚಿಂತನೆ ನಡೆಸಿದೆ.

ಅಂದ ಹಾಗೆ, ಈ ಹಿಂದೆ, ಹಟ್ಟಿ ಗೋಲ್ಡ್​​ ಮೈನ್ ಹೆಸರು ಬದಲಾವಣೆಗೆ ಚಿಂತಿಸಲಾಗ್ತಿದೆ. ಕರ್ನಾಟಕ ಸ್ಟೇಟ್ ಗೋಲ್ಡ್ ಮೈನ್ ಎಂದು ಹೆಸರಿಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದರು.

ಹಟ್ಟಿ ಚಿನ್ನದ ಗಣಿಯಲ್ಲಿ ಪ್ರತಿ ವರ್ಷ ಕೇವಲ 1,700 ಕೆ.ಜಿ ಮೈನ್ ಮಾಡಿ ಗೋಲ್ಡ್ ಮಾಡುತ್ತಿದ್ದಾರೆ. ಹಟ್ಟಿ ಚಿನ್ನದ ಗಣಿಯಿಂದ ಪ್ರತಿವರ್ಷ 250 ಕೋಟಿ ರೂ. ಲಾಭ ಸಿಗುತ್ತಿದೆ. ಈ 250 ಕೋಟಿ ಇನ್ವೆಸ್ಟ್ ಮಾಡಿದ್ರೆ ಹೆಚ್ಚು ಉತ್ಪಾದನೆ ಮಾಡ್ಬಹುದು. ನಮ್ಮಲ್ಲಿ ಮೈನ್ಸ್ ಇದೆ, ಮಾಡುವುದಕ್ಕೆ ಟೆಕ್ನಾಲಜಿ ಇದೆ. ತಯಾರು ಮಾಡಿದ ಗೋಲ್ಡ್‌ಗೆ ಮಾರ್ಕೆಟ್ ಇದೆ ಎಂದು ನಿರಾಣಿ ಹೇಳಿದ್ದರು.

ಹೀಗಾಗಿ, 1,700 ರಿಂದ 5,000 ಕೆ.ಜಿಗೆ 2 ಹಂತದಲ್ಲಿ ವಿಸ್ತರಣೆಗೆ ನಿರ್ಧಾರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗೋಲ್ಡ್‌ಗೆ ವ್ಯಾಲ್ಯೂ ಎಡಿಷನ್ ಮಾಡುತ್ತೇವೆ ಎಂದು ಗಣಿ ಹಾಗೂ ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದರು.

ಇದನ್ನೂ ಓದಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ: ಸತೀಶ್​ ಜಾರಕಿಹೊಳಿ ಹೆಸರೇ ಬಹುತೇಕ ಫೈನಲ್​ ಎಂದ ಸಿದ್ದರಾಮಯ್ಯ