ಹಸುಗಳ ಹಾಲು ಕರೆಯುವ ಸ್ಪರ್ಧೆ: ನಾ ಮುಂದು ತಾ ಮುಂದು ಎಂದು ಬಂದ ಪಶುಪಾಲಕರು

|

Updated on: Mar 09, 2021 | 11:09 AM

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಯಲಿಯೂರು ಗ್ರಾಮದಲ್ಲಿ ಪಶುಸಂಗೋಪನೆ ಇಲಾಖೆ ಹಾಲಿನ ಉತ್ಪಾದನೆಯನ್ನ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಹಾಲಿನ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಜಿಲ್ಲಾ ಮಟ್ಟದ ಹಸುಗಳ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನ ಏರ್ಪಡಿಸಿತ್ತು.

ಹಸುಗಳ ಹಾಲು ಕರೆಯುವ ಸ್ಪರ್ಧೆ: ನಾ ಮುಂದು ತಾ ಮುಂದು ಎಂದು ಬಂದ ಪಶುಪಾಲಕರು
ರಾಜ್ಯ ಮಟ್ಟದ ಹಾಲು ಕರೆಯುವ ಸ್ಪರ್ಧೆ
Follow us on

ದೇವನಹಳ್ಳಿ: ಇತ್ತೀಚಿನ ದಿನಗಳಲ್ಲಿ ರೈತರಿಗೆ ಆರ್ಥಿಕ ಬೆನ್ನೆಲುಬಾಗಿ ನಿಂತಿರುವುದು ಪಶುಪಾಲನೆ. ಇನ್ನೂ ಪಶುಪಾಲನೆಯಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುತ್ತಿದ್ದು, ಇದನ್ನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಶುಸಂಗೋಪನೆ ಇಲಾಖೆ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನು ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ ನೋಂದಣಿ ಮಾಡಿಕೊಂಡಿದ್ದ ಪಶುಪಾಲಕರು ನಾ ಮುಂದು ತಾ ಮುಂದು ಅಂತಾ ಹಾಲು ಕರೆದು ದಾಖಲೆಯನ್ನ ನಿರ್ಮಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಯಲಿಯೂರು ಗ್ರಾಮದಲ್ಲಿ ಪಶುಸಂಗೋಪನೆ ಇಲಾಖೆ ಹಾಲಿನ ಉತ್ಪಾದನೆಯನ್ನ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಹಾಲಿನ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಜಿಲ್ಲಾ ಮಟ್ಟದ ಹಸುಗಳ ಅಧಿಕ ಹಾಲು ಕರೆಯುವ ಸ್ಪರ್ಧೆಯನ್ನ ಏರ್ಪಡಿಸಿತ್ತು. ಜಿಲ್ಲೆಯ ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ ಹಾಗೂ ಹೊಸಕೋಟೆ ತಾಲೂಕಿನಿಂದ ಹತ್ತಾರು ಗೋಪಾಲಕರು ಅಧಿಕ ಹಾಲು ಕೊಡುವ ಹಸುಗಳನ್ನ ಸ್ಪರ್ಧೆಗೆ ತಂದಿದ್ದರು. ಹಾಲು ಕರೆಯಲು 20 ನಿಮಿಷಗಳ ಅವಧಿಯನ್ನ ಇಡಲಾಗಿತ್ತು.

1.70 ಲಕ್ಷ ಹಸುಗಳ ಪಾಲನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯು ರಾಜ್ಯದಲ್ಲಿಯೇ ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಸುಮಾರು 1.70 ಲಕ್ಷ ಹಸುಗಳನ್ನು ಜಿಲ್ಲೆಯಲ್ಲಿ ರೈತರು ಪಾಲನೆ ಮಾಡುತ್ತಿದ್ದಾರೆ. ಒಂದು ದಿನಕ್ಕೆ ಜಿಲ್ಲೆಯಲ್ಲಿ 7 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದ್ದು, ಯಲಿಯೂರು ಗ್ರಾಮದಲ್ಲಿ ಒಂದು ದಿನಕ್ಕೆ 4 ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದೆ. ಹೀಗಾಗಿಯೇ ಇದೇ ಗ್ರಾಮದಲ್ಲಿ ಜಿಲ್ಲಾ ಪಶುಸಂಗೋಪನೆ ಇಲಾಖೆ ಅಧಿಕ ಹಾಲು ಕರೆಯುವ ಸ್ಪರ್ಧೆ ಏರ್ಪಡಿಸಿದ್ದು, ಬೆಳಗ್ಗೆಯೇ ಜಿಲ್ಲೆಯಿಂದ ಪಶುಪಾಲಕರು ಸ್ಪರ್ಧೆಗೆ ಆಗಮಿಸಿದ್ದರು. ಈ ಸ್ಪರ್ಧೆಯಲ್ಲಿ ಯಾರು 20 ನಿಮಿಷಗಳಲ್ಲಿ ಅತಿ ಹೆಚ್ಚು ಹಾಲನ್ನ ಕರೆಯುತ್ತಾರೋ ಅಂತಹ ರೈತರಿಗೆ ಮೊದಲನೆಯ ಬಹುಮಾನವಾಗಿ 25 ಸಾವಿರ, ಎರಡನೇ ಬಹುಮಾನವಾಗಿ 20, ಮೂರನೇದಾಗಿ 10 ಸಾವಿರ ನಗದನ್ನ ನೀಡಿ ಗೆದ್ದ ಪಶುಪಾಲಕರನ್ನ ಸನ್ಮಾನ ಮಾಡಿ ಉತ್ತೇಜಿಸಲಾಯಿತು.

ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆ

ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಆರ್ಥಿಕ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಟ್ಟ ಹಸುಗಳ ಹಾಲಿನ ಉತ್ಪಾದನೆಯನ್ನ ಹೆಚ್ಚಿಸಲು ಪಶುಸಂಗೋಪನೆ ಇಲಾಖೆ ಜಿಲ್ಲೆಯಲ್ಲಿ ರೈತರಿಗೆ ಸ್ಪರ್ಧೆಯನ್ನ ಏರ್ಪಡಿಸುವ ಮೂಲಕ ಉತ್ತೇಜಿಸಿದೆ. ಇನ್ನೂ ಈ ಮೂಲಕ ಹಾಲಿನ ಉತ್ಪಾದನೆ, ಗುಣಮಟ್ಟ ಹಾಗೂ ಹಾಲಿನ ಉತ್ಪಾದನಾ ವೆಚ್ಚವನ್ನ ಕಡಿಮೆ ಮಾಡುವ ನಿಟ್ಟಿನಲ್ಲಿ ಗೋಪಾಲಕರಿಗೆ ಇಂತಹ ಸ್ಪರ್ಧೆಗಳು ಸಹಕಾರಿಯಾಗಲಿದೆ.

ಇನ್ನು ಈ ಸ್ಪರ್ಧೆಯಲ್ಲಿ ನಾರಾಯಣಪ್ಪ 37 ಕೆಜಿ ಹಾಲನ್ನು ಕರೆದು ಮೊದಲ ಸ್ಥಾನ ಗಿಟ್ಟಿಸಿಕೊಂಡರೆ, 35 ಕೆಜಿ ಹಾಲನ್ನು ಕರೆದ ಟಿ.ಲೋಕೇಶ್ ಎರಡನೇ ಸ್ಥಾನ ಪಡೆದರು. ಜೊತೆಗೆ 34 ಕೆಜಿ ಹಾಲನ್ನು ಕರೆದ ರಾಮಚಂದ್ರಪ್ಪ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಮೇವು ತಿನ್ನುತ್ತಿರುವ ಹಸುಗಳು

ಇದನ್ನೂ ಓದಿ

BSSK ಕಾರ್ಖಾನೆ ಪುನ:ಶ್ಚೇತನ ಚರ್ಚೆಗೆ ಮುಖ್ಯಮಂತ್ರಿ ಬಳಿಗೆ ನಿಯೋಗ: ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್

ಉಡುಪಿಯಲ್ಲೊಂದು ಚಿಕ್ಕ ಪ್ರಾಣಿ ಸಂಗ್ರಹಾಲಯ: ಮಾಜಿ ಸೈನಿಕನ ಮನೆಯಲ್ಲಿದೆ ಅಪರೂಪ ತಳಿಯ ಶ್ವಾನಗಳು

Published On - 11:04 am, Tue, 9 March 21