ರಾಜ್ಯದಲ್ಲಿ ನಾಳೆಯಿಂದ ಮೆಡಿಕಲ್ ಕಾಲೇಜುಗಳ ಆರಂಭ, ಆಫ್​ಲೈನ್​ ಜೊತೆಗೆ ಆನ್​ಲೈನ್​ ತರಗತಿಗಳೂ ಇರುತ್ತವೆ

|

Updated on: Nov 30, 2020 | 11:24 AM

ನಾಳೆಯಿಂದ ಹೆಲ್ತ್ ಸೈನ್ಸ್ ಕೋರ್ಸ್​ಗಳು ಅನ್ ಲಾಕ್ ಆಗಲಿದ್ದು, ರಾಜೀವ್ ಗಾಂಧಿ ವಿವಿಯ ಎಲ್ಲಾ ಕೋರ್ಸ್​ಗಳು ಪುನರ್ ಆರಂಭವಾಗಲಿವೆ. ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ಯ, ಪ್ಯಾರಾ ಮೆಡಿಕಲ್, ನರ್ಸಿಂಗ್ ಹಾಗೂ ಫಾರ್ಮಸಿ ಕೋರ್ಸ್​ಗಳು ಆರಂಭವಾಗುತ್ತಿವೆ.

ರಾಜ್ಯದಲ್ಲಿ ನಾಳೆಯಿಂದ ಮೆಡಿಕಲ್ ಕಾಲೇಜುಗಳ ಆರಂಭ, ಆಫ್​ಲೈನ್​ ಜೊತೆಗೆ ಆನ್​ಲೈನ್​ ತರಗತಿಗಳೂ ಇರುತ್ತವೆ
Follow us on

ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಕಳೆದ 8 ತಿಂಗಳಿಂದ ಮೆಡಿಕಲ್ ಕಾಲೇಜುಗಳು ಬಂದ್​ ಆಗಿದ್ದವು. ನಾಳೆಯಿಂದ (ಡಿ1) ಮೆಡಿಕಲ್ ಕಾಲೇಜುಗಳ ಆರಂಭವಾಗಲಿವೆ.

ವೈದ್ಯಕೀಯ ವಿಜ್ಞಾನ ಕೋರ್ಸ್​ಗಳು ನಾಳೆಯಿಂದ ಅನ್​ಲಾಕ್ ಆಗಲಿದ್ದು, ರಾಜೀವ್ ಗಾಂಧಿ ವಿವಿಯ ಎಲ್ಲಾ ಕೋರ್ಸ್​ಗಳು ಮತ್ತೆ ಆರಂಭವಾಗಲಿವೆ. ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್, ಪ್ಯಾರಾ ಮೆಡಿಕಲ್, ನರ್ಸಿಂಗ್ ಹಾಗೂ ಫಾರ್ಮಸಿ ಕೋರ್ಸ್​ಗಳು ಆರಂಭವಾಗುತ್ತಿವೆ.

ಈಗಾಗಲೇ ಪ್ರಕಟ ಮಾಡಿರೋ ಗೈಡ್​ಲೈನ್ಸ್​ ಅನ್ವಯ ಮಾಡಿಕೊಂಡು ಕಾಲೇಜುಗಳು ತೆರೆಯಲಿವೆ. ಇಷ್ಟು ದಿನ ಅನ್​ಲೈನ್​ನಲ್ಲಿ ಪಾಠ ಮಾಡಲಾಗುತ್ತಿತ್ತು. ಈಗ ಕಷ್ಟಕರವಾದ ವಿಷಯಗಳು ಹಾಗೂ ಲ್ಯಾಬ್​ ಕ್ಲಾಸ್​ಗಳನ್ನು ಆರಂಭ ಮಾಡಲಾಗುತ್ತಿದೆ. ಭೌತಿಕ ಕ್ಲಾಸ್​ಗಳಿಗೆ ಅವಕಾಶ ಇದ್ದರೂ ಆನ್​ಲೈನ್ ಪಾಠಗಳು ಕೂಡ ಮುಂದುವರಿಯುತ್ತವೆ. ಲ್ಯಾಬ್​ಕ್ಲಾಸ್​ಗಳು ಮುಗಿಯುತ್ತಿದಂತೆ ವೈದ್ಯಕೀಯ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಇದನ್ನೂ ಓದಿ: ವೈದ್ಯಕೀಯ ಶಿಕ್ಷಣ ಇಲಾಖೆ -ಕಾಲೇಜು ನಡುವಿನ ತಿಕ್ಕಾಟ: ವಿದ್ಯಾರ್ಥಿಗಳಿಗೆ ಎದುರಾಯ್ತು ಸಂಕಷ್ಟ

Published On - 11:22 am, Mon, 30 November 20