ದರ ದರನೆ ಏರುತ್ತಲೇ ಇದೆ ಪೆಟ್ರೋಲ್, ಡೀಸೆಲ್ ದರ.. ಮುಂದೇನಾಗುತ್ತೆ?
ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ದರಕ್ಕೆ ವಾಹನ ಸವಾರರು ಫುಲ್ ಟೆನ್ಶನ್ ಆಗಿದ್ದಾರೆ. ಪ್ರಸಕ್ತ ಒಂದು ಲೀಟರ್ ಪೆಟ್ರೋಲ್ ದರ 85.09 ರೂಪಾಯಿ ಹಾಗೂ ಲೀಟರ್ ಡಿಸೇಲ್ ದರ 76.77 ರೂಪಾಯಿ ಇದೆ.
ಬೆಂಗಳೂರು: ಮಹಾಮಾರಿ ಕೊರೊನಾದಿಂದ ತತ್ತರಿಸಿರುವ ಜನರಿಗೆ ಪೆಟ್ರೋಲ್, ಡೀಸೆಲ್ ದರ ಬಿಸಿ ಮುಟ್ಟಿಸಿದಂತಾಗಿದೆ. ನಿರಂತರವಾಗಿ ಇಂಧನ ದರ ಏರಿಕೆಯಾಗುತ್ತಿರುವುದರಿಂದ ವಾಹನ ಸವಾರರು ಫುಲ್ ಟೆನ್ಶನ್ ಆಗಿದ್ದಾರೆ.
ಅಂತಾರಾಷ್ಟ್ರೀಯ ಮಾರ್ಕೆಟ್ನಲ್ಲಿ ಕಚ್ಚಾ ತೈಲ ದರ ಏರಿಕೆ ಹಿನ್ನೆಲೆಯಲ್ಲಿ ದೇಶಾದ್ಯಂತ ಪೈಸೆ ಲೆಕ್ಕದಲ್ಲಿ ಪೆಟ್ರೋಲ್ ಏರಿಕೆ ಆಗ್ತಿದೆ. ದೇಶದಲ್ಲಿ ಇಂಧನ ಕಂಪನಿಗಳು ಪ್ರತಿದಿನ ದರ ಹೆಚ್ಚಿಸ್ತಾ ಇವೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಕಳೆದ ಒಂದು ವಾರದಿಂದ ಇಂಧನ ದರ ಹೆಚ್ಚಿಸಿವೆ.
ಒಂದು ವಾರದಲ್ಲಿ ಒಂದು ಲೀಟರ್ ಪೆಟ್ರೋಲ್ ದರ 1.11ರಷ್ಟು ಏರಿಕೆಯಾಗಿದೆ. ಹಾಗೂ ಡೀಸೆಲ್ ದರ 1.77 ಪೈಸೆ ಏರಿಕೆಯಾಗಿದೆ. ಪ್ರಸಕ್ತ ಒಂದು ಲೀಟರ್ ಪೆಟ್ರೋಲ್ ದರ 85.09 ರೂಪಾಯಿ ಹಾಗೂ ಲೀಟರ್ ಡಿಸೇಲ್ ದರ 76.77 ರೂಪಾಯಿ ಇದೆ.
ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಆದ್ರೆ ಮಾತ್ರ ಪೆಟ್ರೋಲ್ ಡಿಸೇಲ್ ಬೆಲೆಯೂ ಇಳಿಕೆ ಆಗುತ್ತೆ. ಇಲ್ಲ ಅಂದ್ರೆ ಚಿನ್ನದ ರೀತಿಯಲ್ಲಿ ಇಂಧನ ದರವೂ ಏರಿಕೆ ಆಗುತ್ತೆ ಎಂದು ಪೆಟ್ರೋಲ್, ಡಿಸೇಲ್ ಅಸೋಸಿಯೇಷನ್ ಅಧ್ಯಕ್ಷ ಬಾಲಾಜಿ ಟಿವಿ9 ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸಕೋಟೆ ಪೆಟ್ರೋಲ್ ಬಂಕ್‌ನಲ್ಲಿ ವಂಚನೆ ಆರೋಪ, ಗ್ರಾಹಕರಿಂದ ಮುತ್ತಿಗೆ
48 ದಿನಗಳ ನಂತರ ಹೆಚ್ಚಳವಾಯ್ತು ಪೆಟ್ರೋಲ್ ದರ.. ಟ್ವಿಟರ್ನಲ್ಲಿ ಹರಿಯಿತು ಮೀಮ್ ಮಹಾಪೂರ..
Published On - 10:32 am, Mon, 30 November 20