AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರಲ್ಲಿ ಫೇಕ್​ ಫೇಸ್​ಬುಕ್ ಅಕೌಂಟ್: ಹಣಕ್ಕೆ ಬೇಡಿಕೆ

ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ರಚಿಸಿರುವ ಕೆಲ ದುಷ್ಕರ್ಮಿಗಳು ಹಣ ನೀಡುವಂತೆ ಹಲವರಿಗೆ ಫೇಸ್​ಬುಕ್ ಮೆಸೆಂಜರ್ ಮೂಲಕವೇ ಸಂದೇಶ ಕಳಿಸುತ್ತಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರಲ್ಲಿ ಫೇಕ್​ ಫೇಸ್​ಬುಕ್ ಅಕೌಂಟ್: ಹಣಕ್ಕೆ ಬೇಡಿಕೆ
ಬಿ. ಎಲ್ ಸಂತೋಷ್
ಪೃಥ್ವಿಶಂಕರ
|

Updated on:Nov 30, 2020 | 11:55 AM

Share

ಬಾಗಲಕೋಟೆ: ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ರಚಿಸಿರುವ ಕೆಲ ದುಷ್ಕರ್ಮಿಗಳು ಹಣ ನೀಡುವಂತೆ ಹಲವರಿಗೆ ಫೇಸ್​ಬುಕ್ ಮೆಸೆಂಜರ್ ಮೂಲಕವೇ ಸಂದೇಶ ಕಳಿಸುತ್ತಿದ್ದಾರೆ.

Santhosh ಹೆಸರಿನಲ್ಲಿರುವ ಫೇಸ್​ಬುಕ್ ಖಾತೆಯ ಡಿಸ್​ಪ್ಲೇ ಇಮೇಜ್​ನಲ್ಲಿ ಬಿ.ಎಲ್.ಸಂತೋಷ್ ಅವರ ಜನಪ್ರಿಯ ಚಿತ್ರವನ್ನೇ ಬಳಕೆ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಬಿ.ಎಲ್.ಸಂತೋಷ್ ಅವರದ್ದೇ ಫೇಸ್​ಬುಕ್ ಖಾತೆ ಇರಬಹುದು, ಅವರೇ ಹಣ ಕೇಳುತ್ತಿರಬಹುದು ಎಂಬ ಭಾವ ಬರುವಂತೆ ಬಿಂಬಿಸಲಾಗಿದೆ. ಬಿ.ಎಲ್.ಸಂತೋಷ್ ಅವರ ಅಧಿಕೃತ ಖಾತೆಯಲ್ಲಿರುವ ಫ್ರೆಂಡ್ಸ್​ಲಿಸ್ಟ್​ ಗಮನಿಸಿಯೇ ಹಣ ಬೇಕೆನ್ನುವ ಸಂದೇಶ ರವಾನಿಸಲಾಗುತ್ತಿದೆ.

ಸಂತೋಷ್ ಹಣ ಕೇಳಿರುವ ಖದೀಮರು, ಅರ್ಜೆಂಟ್ ಇದೆ ಹದಿನೈದು ಸಾವಿರ ಹಣ ಕಳಿಸಿ. ಎರಡು ತಾಸಿನಲ್ಲಿ ನಿಮಗೆ ಮರಳಿ ಹಾಕುತ್ತೇನೆ ಎಂದು ಮೆಸೆಂಜರ್​ನಲ್ಲಿ‌ ಮೆಸೇಜ್ ಮಾಡಿದ್ದಾರೆ. ಪೋನ್ ಪೇ ಇದೆಯೇ? ಗೂಗಲ್ ಪೇ ಇದೆಯೇ? ಬೇಗ ಹಣ ಕಳಿಸಿ ಎಂದೆಲ್ಲಾ ಮೆಸೇಜ್ ಮಾಡಿದ್ದಾರೆ.

ಕೆರೊಡಿ ಹೆಸರಿನಲ್ಲಿಯೂ ನಕಲಿ ಅಕೌಂಟ್

ಬಾಗಲಕೋಟೆಯ ಖ್ಯಾತ ವೈದ್ಯ ಸೋಮಶೇಖರ ಕೆರೂಡಿ ಅವರ ಹೆಸರಲ್ಲಿಯೂ ಇದೇ ರೀತಿ ನಕಲಿ ಫೇಸ್​ಬುಕ್ ಖಾತೆ ತೆರೆದು ಹಣಕ್ಕಾಗಿ ಗಾಳಹಾಕಲಾಗಿದೆ.

ಈ ವಿಷಯ ತಿಳಿಸಿರುವ ಮುಖಂಡ ಅಭಯ್ ಮನಗೂಳಿ, ಹಣ ಕಳಿಸುವ ಮೊದಲು ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ. ಇದು ಆನ್​ಲೈನ್​ ಮೋಸದ ಮತ್ತೊಂದು ರೂಪ ಇರಬಹುದು ಎಂದು ಶಂಕಿಸಿದ್ದಾರೆ.

ಇದನ್ನೂ ಓದಿ: ಬಯಲಿಗೆ ಬಿತ್ತು ಇಬ್ಬರು ಅಧಿಕಾರಿಗಳ ಮುಸುಕಿನ ಗುದ್ದಾಟ, ನೊಂದ ಅಧಿಕಾರಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದೇನು?

Published On - 11:46 am, Mon, 30 November 20

Follow Us
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್