AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುಕ್ಲ ಪಕ್ಷದ ಕಾರ್ತಿಕ ಮಾಸದ ಹುಣ್ಣಿಮೆ: ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಹರಿದು ಬರುತಿದೆ ಭಕ್ತ ಸಾಗರ

ಶುಕ್ಷಪಕ್ಷದ ಕಾರ್ತಿಕ ಮಾಸದ ಹುಣ್ಣಿಮೆ ಹಿನ್ನೆಲೆಯಲ್ಲಿ ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಭಕ್ತರು ಎಣ್ಣೆ, ತುಪ್ಪದ ದೀಪಗಳನ್ನು ಹಚ್ಚಿ ದೀಪರಲ್ಲಿ ತಮ್ಮ ಬೇಡಿಕೆಗಳನ್ನು ಸಲ್ಲಿಸುತ್ತಿದ್ದಾರೆ.

ಶುಕ್ಲ ಪಕ್ಷದ ಕಾರ್ತಿಕ ಮಾಸದ ಹುಣ್ಣಿಮೆ: ಕಾಡು ಮಲ್ಲೇಶ್ವರ ದೇವಸ್ಥಾನಕ್ಕೆ ಹರಿದು ಬರುತಿದೆ ಭಕ್ತ ಸಾಗರ
ಕಾಡು ಮಲ್ಲೇಶ್ವರ ದೇವಸ್ಥಾನ
ಆಯೇಷಾ ಬಾನು
|

Updated on:Nov 30, 2020 | 12:48 PM

Share

ಬೆಂಗಳೂರು: ಕತ್ತಲನ್ನು ಹೋಗಲಾಡಿಸಿ ಬೆಳಕಿನ ಕಡೆ ಕರೆದೊಯ್ಯುವ ಶ್ರೇಷ್ಠ ಮಾಸವೇ ಕಾರ್ತಿಕ ಮಾಸ. ಈ ಮಾಸದ ಅಧಿಪತಿಯೇ ಸಂಕಟಗಳ ಹರನಾಗಿರುವ ಶಂಕರ. ಇಂದು ಶುಕ್ಲ ಪಕ್ಷದ ಕಾರ್ತಿಕ ಮಾಸದ ಹುಣ್ಣಿಮೆ ಹಿನ್ನೆಲೆಯಲ್ಲಿ ನಗರದ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಮಲ್ಲೇಶ್ವರಂನ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಿನ್ನೆಲೆಯಲ್ಲಿ ಅಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ. ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಭಕ್ತರು ತುಪ್ಪದ ದೀಪಗಳನ್ನು ಹಚ್ಚಿ ದಿನದ ಶ್ರೇಷ್ಠತೆಯನ್ನು ಹೆಚ್ಚಿಸುತ್ತಿದ್ದಾರೆ.

ಜೊತೆಗೆ ಇಂದು ರಾಹುಗ್ರಸ್ತ ಚಂದ್ರಗ್ರಹಣವಿದೆ. ಆದರೆ ಭಾರತದಲ್ಲಿ ಗ್ರಹಣ ಗೋಚರ ಆಗದೇ ಇರೋ ಕಾರಣಕ್ಕೆ ಇಂದು ದೇವಸ್ಥಾನಗಳಿಗೆ ಯಾವುದೇ ಗ್ರಹಣ ಎಫೆಕ್ಟ್ ಇಲ್ಲ. ಗ್ರಹಣದ ಸಮಯದಲ್ಲೂ ದೇವಸ್ಥಾನ ಓಪನ್ ಇರುತ್ತೆ. ಕಾಡುಮಲ್ಲೇಶ್ವರದಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಕಾರ್ತಿಕ ಮಾಸದ ಅಧಿಪತಿ ಪರಮೇಶ್ವರ, ಹಾಗಾದ್ರೆ ಕಾರ್ತಿಕ ನಕ್ಷತ್ರದ ಮಹತ್ವವೇನು?

Published On - 11:59 am, Mon, 30 November 20