ರಾಜ್ಯದ ಪ್ರಮುಖ ರಾಜಕಾರಣಿಗಳು ಹೊಸ ವರ್ಷವನ್ನು ಎಲ್ಲೆಲ್ಲಿ ಆಚರಿಸುತ್ತಿದ್ದಾರೆ ಗೊತ್ತಾ?

|

Updated on: Dec 31, 2024 | 3:52 PM

ನಮಗಿರುವ ಮಾಹಿತಿ ಪ್ರಕಾರ ಶಿವಕುಮಾರ್ ಜನೆವರಿ 4ರ ನಂತರವೇ ಸ್ವದೇಶಕ್ಕೆ ವಾಪಸ್ಸಾಗಲಿದ್ದಾರೆ. ಯಡಿಯೂರಪ್ಪ ಯಾವಾಗ ಮರಳುತ್ತಾರೆ ಅಂತ ಗೊತ್ತಿಲ್ಲ. ಹಾಗೆಯೇ ರಾಜ್ಯದಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆಗಳ ನಂತರ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಕುಮಾರಸ್ವಾಮಿಯವರು ಸ್ವದೇಶದ ನೆಲದಲ್ಲೇ ಇರೋದ್ರಿಂದ ಯಾವಾಗ ಬೇಕಾದರೂ ಬೆಂಗಳೂರಿಗೆ ವಾಪಸ್ಸಾಗಬಹುದು.

ಬೆಂಗಳೂರು: ಜನಸಾಮಾನ್ಯರು ಹೊಸ ವರ್ಷಾಚರಣೆಯನ್ನು ಆಚರಿಸುವ ವಿಧಾನವೇ ಬೇರೆ ಮತ್ತು ಗಣ್ಯರು, ಸೆಲೆಬ್ರಿಟಿ ಹಾಗೂ ರಾಜಕಾರಣಿಗಳು ಆಚರಿಸುವ ರೀತಿ ಬೇರೆ. ಉಳ್ಳವರು ಹಣವನ್ನು ನೀರಿನತೆ ಚೆಲ್ಲಿ ತಮಗಿಷ್ಟವಾಗುವ ರೀತಿಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಾರೆ. ವಿಷಯವೇನೆಂದರೆ, ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನ್ಯೂ ಈಯರ್ ಸೆಲೆಬ್ರೇಷನ್​ಗಾಗಿ ಕುಟುಂಬ ಸಮೇತ ಟರ್ಕಿ ಮತ್ತು ಕೆನಡಾ ತೆರಳಿದ್ದಾರೆ. ಹಾಗೆಯೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕುಟುಂಬದ ಜೊತೆ ವಿದೇಶಕ್ಕೆ ತೆರಳಿದ್ದು ಅಲ್ಲೇ ಹೊಸ ವರ್ಷವನ್ನು ಸ್ವಾಗತಿಸಲಿದ್ದಾರೆ. ರಾಜ್ಯದ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ಈಗ ಕೇಂದ್ರದಲ್ಲಿ ಸಚಿವರಾಗಿರುವ ಹೆಚ್ ಡಿ ಕುಮಾರಸ್ವಾಮಿ ತಮ್ಮ ಕುಟುಂಬದ ಜೊತೆ ಗೋವಾದಲ್ಲಿ ಹೊಸವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮೈಸೂರಿನಲ್ಲಿ ನ್ಯೂ ಇಯರ್​ಗೆ ಗೈಡ್ ಲೈನ್ಸ್ ಜಾರಿ: ಮಹಿಳೆ, ಮಕ್ಕಳ ಸುರಕ್ಷತೆಗೆ ಆದ್ಯತೆ, ಬೆಟ್ಟಕ್ಕೆ ಪ್ರವೇಶ ನಿರ್ಬಂಧ