Vijaypura: ಸಿದ್ದರಾಮಯ್ಯಗೆ ಕೂಡಿಟ್ಟ 5 ಸಾವಿರ ರೂ. ನೀಡಿದ 5ನೇ ತರಗತಿ ವಿದ್ಯಾರ್ಥಿನಿ

| Updated By: ವಿವೇಕ ಬಿರಾದಾರ

Updated on: Feb 11, 2023 | 4:08 PM

ವಿಜಯಪುರ: ಜಿಲ್ಲೆಯ ಸಿಂಧಗಿ ಪಟ್ಟಣದ 5ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಜಿಯಾ ತಾನು ಕೂಡಿಟ್ಟ ಹಣವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಚುನಾವಣಾ ಗೆಲುವಿಗಾಗಿ ನೀಡಿದ್ದಾಳೆ.

ವಿಜಯಪುರ: ಜಿಲ್ಲೆಯ ಸಿಂಧಗಿ ಪಟ್ಟಣದ 5ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಜಿಯಾ (Kumari Jiya) ತಾನು ಕೂಡಿಟ್ಟ ಹಣವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರ ಚುನಾವಣಾ ಗೆಲುವಿಗಾಗಿ ನೀಡಿದ್ದಾಳೆ. ತನಗೆ ಪಾಕೆಟ್ ಮನಿ ರೂಪದಲ್ಲಿ ನೀಡಿದ್ದ ಹಣವನ್ನು ಕುಮಾರಿ ಜಿಯಾ ಕೂಡಿಟ್ಟಿದ್ದಳು. ಹೀಗೆ ಕೂಡಿಟ್ಟ 5 ಸಾವಿರ ರೂ. ಹಣವನ್ನು ಇಂದು (ಫೆ.11) ವಿಜಯಪುರದಲ್ಲಿ (Vijaypura) ನಡೆದ ಪ್ರಜಾಧ್ವನಿ (Bus Yatra) ಸಮಾವೇಶದ ವೇದಿಕೆಯಲ್ಲಿ ಕುದ್ದಾಗಿ ಚುನಾವಣಾ ಗೆಲುವಿಗಾಗಿ ಸಿದ್ದರಾಮಯ್ಯ ಅವರಿಗೆ ನೀಡಿದ್ದಾಳೆ.

Published on: Feb 11, 2023 04:08 PM