ಬೆಂಗಳೂರು: ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗಳು ಆನ್ ಲೈನ್ ಪರೀಕ್ಷೆ ವೇಳೆ ಪರೀಕ್ಷಾ ಮೇಲ್ವಿಚಾರಕರೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ . ಪ್ರಸ್ತುತ ಕಾಲೇಜಿನ ಆನ್‌ಲೈನ್ ಪ್ರೊಕ್ಟರಿಂಗ್ ವ್ಯವಸ್ಥೆಯಿಂದ ತೆಗೆದ ಸ್ಕ್ರೀನ್‌ಶಾಟ್‌ನಲ್ಲಿ, ಪರೀಕ್ಷೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ ಒಬ್ಬ ಪ್ರಾಕ್ಟರ್ (ಪರೀಕ್ಷೆ ಮೇಲ್ವಿಚಾರಕ) ವಿದ್ಯಾರ್ಥಿನಿಯೊಬ್ಬಳಿಗೆ ‘ಬೇಬಿ’ ಎಂದು ಸಂಬೋಧಿಸಿದ್ದಾರೆ.
ಈ ಬಗ್ಗೆ ದಿ ನ್ಯೂಸ್ ಮಿನಿಟ್ ಜೊತೆ ಮಾತನಾಡಿದ ಕ್ರೈಸ್ಟ್ ಯೂನಿವರ್ಸಿಟಿಯ ಅನೇಕ ವಿದ್ಯಾರ್ಥಿಗಳು ಪರೀಕ್ಷೆಯ ಸಮಯದಲ್ಲಿ ತಮ್ಮ ಲ್ಯಾಪ್‌ಟಾಪ್‌ಗಳನ್ನು ಹಲವು ಬಾರಿ ಹೊಂದಿಸಲು ಕೇಳಿಕೊಳ್ಳಲಾಗಿದೆ ಎಂದು ತಮ್ಮ ಪ್ರಾಕ್ಟರ್ ಹೇಳಿದ್ದಾರೆ. ಪರೀಕ್ಷೆ ಬರೆಯುವಾಗ ಕ್ಯಾಮೆರಾ ಆಂಗಲ್ನ್ನು ಬಗ್ಗಿಸುವಂತೆ ವಿದ್ಯಾರ್ಥಿನಿಯೊಬ್ಬಳಿಗೆ ಇದೇ ಪ್ರಾಕ್ಟರ್ ಹೇಳಿದ್ದಾರೆ. ಒಂದು ವೇಳೆ ಹಾಗೆ ಮಾಡದೇ ಇದ್ದರೆ ತಪ್ಪು ಕೆಲಸ ಮಾಡಲಾಗಿದೆ ಎಂದು ದೂರು ನೀಡುವುದಾಗಿ ಬೆದರಿಸಿದ್ದಾರೆ ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ.
ಸೆಮಿಸ್ಟರ್ ಎಂಡ್ ಪರೀಕ್ಷೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳು ಡಾಕ್ಯುಮೆಂಟ್ ಸಲ್ಲಿಸಿದಾಗಿನಿಂದ ಪರೀಕ್ಷೆಯನ್ನು ಕೊನೆಗೊಳಿಸಬಹುದೇ ಎಂದು ಪ್ರಾಕ್ಟರ್‌ನನ್ನು ಕೇಳಿದಳು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಕ್ಟರ್ “ಇನ್ನೂ ಮೂರು ನಿಮಿಷಗಳು, ಬೇಬಿ” ಎಂದು ಹೇಳಿದರು. ಈ ಸಂದೇಶ ವಿನಿಮಯದ ಸ್ಕ್ರೀನ್‌ಶಾಟ್‌ಗಳನ್ನು ತ್ವರಿತವಾಗಿ ವಿಶ್ವವಿದ್ಯಾಲಯದ ಅಧ್ಯಾಪಕರ ಗಮನಕ್ಕೆ ತರಲಾಯಿತು. ಆದರೆ ಒಬ್ಬ ಬೋಧಕವರ್ಗದ ಸದಸ್ಯರೊಬ್ಬರು ಈ ಪ್ರತಿಕ್ರಿಯೆಯಲ್ಲಿ ಯಾವುದೇ ತಪ್ಪು ಇಲ್ಲ. ಇದು ‘ಕಾಳಜಿ ಮಾತು ’ ಎಂದು ಹೇಳಿರುವುದಾಗಿ ಎಂದು ವಿದ್ಯಾರ್ಥಿಗಳು ಹೇಳುತ್ತಾರೆ. ಈ ಚಾಟ್‌ನ ಸ್ಕ್ರೀನ್‌ಶಾಟ್ ನೋಡಿದ ಶಿಕ್ಷಕರೊಬ್ಬರು “ಬಹುಶಃ ಶಿಕ್ಷಕ ಹಿರಿಯ ವ್ಯಕ್ತಿಯಾಗಿರಬಹುದು, ಅದನ್ನು ಸರಿಯಾದ ಮನೋಭಾವದಿಂದ ತೆಗೆದುಕೊಳ್ಳಿ” ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.
This happened to a student who appeared in today’s online examination conducted by @ChristBangalore. She asked if she could end as she was done and the proctor replied “three more minutes baby”.
(1/n) pic.twitter.com/TiRQK3dDtd— NSUI Karnataka (@NSUIKarnataka) June 21, 2021
ಅಂತಿಮ ಸೆಮಿಸ್ಟರ್ ಪರೀಕ್ಷೆಗಳ ಬಗ್ಗೆ ಕ್ರೈಸ್ಟ್ ಯೂನಿವರ್ಸಿಟಿಯ FAQ ಯು ಪ್ರಕಾರ ಈ ಶಿಕ್ಷಣ ಸಂಸ್ಥೆ ತನ್ನ ಪರೀಕ್ಷೆಗಳಿಗೆ ಮೂರನೇ ವ್ಯಕ್ತಿಯ ಆನ್‌ಲೈನ್ ಪರೀಕ್ಷಾ ವೇದಿಕೆಯನ್ನು ಬಳಸುತ್ತದೆ ಮತ್ತು ಪ್ರಾಕ್ಟರುಗಳು ಬೋಧಕವರ್ಗದ ಸದಸ್ಯರಾಗಿದ್ದಾರೆ ಎಂದು ಹೇಳಿದೆ. “ ಈ ವೇದಿಕೆಯು ವಿದ್ಯಾರ್ಥಿಗಳಿಗೆ ತಮ್ಮ ಮನೆಗಳ ಸುರಕ್ಷಿತವಾಗಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡುತ್ತದೆ. ವಿಶ್ವವಿದ್ಯಾನಿಲಯದ ಅಧ್ಯಾಪಕರು ಆನ್‌ಲೈನ್‌ನಲ್ಲಿ ಪರೀಕ್ಷೆಯನ್ನು ನಡೆಸುತ್ತಾರೆ ಮತ್ತು ಪರೀಕ್ಷೆಯ ಸಂಪೂರ್ಣ ಅವಧಿಯು ಪರೀಕ್ಷೆಯ ನಡವಳಿಕೆಯ ಪರಿಶೀಲನೆಯನ್ನು ಸಕ್ರಿಯಗೊಳಿಸಲು ವಿಡಿಯೊ ಮತ್ತು ಆಡಿಯೊವನ್ನು ದಾಖಲಿಸಲಾಗಿದೆ.
”ಎಂದು ಕ್ರೈಸ್ಟ್ ಯೂನಿವರ್ಸಿಟಿಯ FAQ ನಲ್ಲಿ ಹೇಳಿದೆ. ವಿಶ್ವವಿದ್ಯಾನಿಲಯವು ಬಳಸುವ ಮೂರನೇ ವ್ಯಕ್ತಿಯ ವೇದಿಕೆಯೆಂದರೆ Mettl, ಆನ್‌ಲೈನ್ ವೇದಿಕೆಯಾಗಿದ್ದು, ಹಲವಾರು ವಿಶ್ವವಿದ್ಯಾಲಯಗಳು ಪರೀಕ್ಷೆಗಳನ್ನು ನಡೆಸಲು ಬಳಸುತ್ತವೆ.
Students claims that this has happened before also but no action was taken. Also, the proctor asks the girls to bend the camera. This isn’t right and should not happen to anyone.
(2/n) pic.twitter.com/D4d4SQZkOD— NSUI Karnataka (@NSUIKarnataka) June 21, 2021
And when she took the issue to her teachers, the reply was its just a “caring approach” and there is “nothing wrong” in it. What kind of teacher calls the student ‘baby’? What is wrong with this system? Whom should they trust anymore?
(3/n) pic.twitter.com/vs6BWhI6wS— NSUI Karnataka (@NSUIKarnataka) June 21, 2021
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್‌ಸಿ) ಗೆ ಅಂಗಸಂಸ್ಥೆ ಕರ್ನಾಟಕದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ (NSUI)) ಕ್ರೈಸ್ಟ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಆನ್‌ಲೈನ್ ಪರೀಕ್ಷೆಗಳ ಪ್ರಾಕ್ಟರಿಂಗ್ ಬಗ್ಗೆ ಇರುವ ಕಳವಳವನ್ನು ಎತ್ತಿ ತೋರಿಸುತ್ತದೆ. ಯುಜಿಸಿ ತನ್ನ ಸೆಮಿಸ್ಟರ್ ಪರೀಕ್ಷೆಗಳನ್ನು ಮರುಪರಿಶೀಲಿಸುವಂತೆ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದರೂ ಕ್ರೈಸ್ಟ್ ಯೂನಿವರ್ಸಿಟಿ ಈ ಸಲಹೆಯನ್ನು ಪರಿಗಣಿಸಿಲ್ಲ ಎಂದು ಎನ್‌ಜಿಯುಐ ವಕ್ತಾರರು ಹೇಳಿರುವುದಾಗಿ ಟಿಎನ್‌ಎಂ ವರದಿ ಮಾಡಿದೆ.
ಇದನ್ನೂ ಓದಿ: ಶಾಲೆಗಳನ್ನು ಪುನಾರಂಭಿಸುವಂತೆ ಒತ್ತಾಯ; ಶಿಕ್ಷಣ ಸಚಿವರಿಗೆ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದಿಂದ ಪತ್ರ
(Students in Christ University alleges inappropriate behaviour by a proctor monitoring the online exam)