ಜೂನ್ ತಿಂಗಳ ಮೋಟಾರು ವಾಹನ ತೆರಿಗೆಯ ಶೇ 50ರಷ್ಟು ವಿನಾಯಿತಿ ಘೋಷಿಸಿದ ರಾಜ್ಯ ಸರ್ಕಾರ
Motor Vehicle Tax: ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಡಿಸಿಎಂ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಕೊವಿಡ್ 2ನೇ ಅಲೆಯ ಹಿನ್ನೆಲೆಯಲ್ಲಿ ಪ್ರಯಾಣಿಕ ವಾಹನ ಸಂಚಾರಕ್ಕೆ ನಿರ್ಬಂಧಗಳನ್ನು ವಿಧಿಸಲ್ಪಟ್ಟಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನೋಂದಾಯಿಸಿರುವ ಎಲ್ಲಾ ಸಾರಿಗೆ ಪ್ರಯಾಣಿಕ ವಾಹನಗಳಿಗೆ ಮಾತ್ರ ಅನ್ವಯಿಸುವಂತೆ ಜೂನ್ 2021ರ ತಿಂಗಳಿಗೆ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆಯ ಶೇಕಡ 50 ರಷ್ಟಕ್ಕೆ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಹೊಸ ವಾಹನಗಳ ನೋಂದಣಿಯನ್ನು ಹೊರತುಪಡಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಡಿಸಿಎಂ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಬೆಂಗಳೂರು ದಕ್ಷಿಣದಲ್ಲಿ ನೀರು ಬಿಡಲಿಲ್ಲ ಜಲಮಂಡಳಿ; ಈ ಬಾರಿ ಪಶ್ಚಿಮ ವಲಯದಲ್ಲಿ 2 ದಿನ ನೀರು ಬರಲ್ಲಾ! 900 ಮಿ.ಮೀ ವ್ಯಾಸದ ನೀರಿನ ಪೈಪ್ ಲೈನ್ನಲ್ಲಿ ಸೋರುವಿಕೆ ಕಂಡು ಬಂದಿದ್ದು ಬಿಡಬ್ಲ್ಯೂಎಸ್ಎಸ್ಬಿ ಸರಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಬೆಂಗಳೂರು ಪಶ್ಚಿಮ ವಲಯದಲ್ಲಿ ನೀರು ಸರಬರಾಜು ನಿಲ್ಲಿಸಲಾಗುತ್ತಿದೆ. ಜೂನ್ 23 ಬುಧವಾರ ಬೆಳಗ್ಗೆ 6 ಗಂಟೆಯಿಂದ ಜೂನ್ 24ರ ಗುರುವಾರ ರಾತ್ರಿ 10 ಗಂಟೆಯವರೆಗೂ Local Shut Down ಹಾಗೂ ಅಗತ್ಯತೆಗೆ ಅನುಗುಣವಾಗಿ ಕಾವೇರಿ 4ನೇ ಹಂತ 1ನೇ ಘಟ್ಟದ 1 ಅಥವಾ 2 ಪಂಪ್ಗಳು ನಿಲ್ಲಿಸಲು ಅನುಮೋದಿಸಲಾಗಿದೆ.
ಇನ್ನು ಈ ಬಗ್ಗೆ ಬಿಡಬ್ಲ್ಯೂಎಸ್ಎಸ್ಬಿ ಪ್ರಕಟಣೆ ಹೊರಡಿಸಿದೆ. ನಾಗ್ಪುರ, ಮಹಾಲಕ್ಷ್ಮಿಪುರಂ, ಮಂಜುನಾಥ ನಗರ, ಶಿವನಗರ, ಮಹಾಗನಪತಿ ನಗರ, ತಿಮ್ಮಯ್ಯ ರಸ್ತೆ, ಬಸವೇಶ್ವರ ನಗರ. ಹೆಚ್ಬಿಸಿಎಸ್, ಶಕ್ತಿ ಗಣಪತಿ ನಗರ, ಶಂಕರ ಮಠ, ಕಮಲಾ ನಗರ, ಕಾಮಾಕ್ಷಿ ಪಾಳ್ಯ, ಶಾರದ ಕಾಲೋನಿ, ಬಿಇಎಮ್ಎಲ್ ಕಾಲೋನಿ, ಮೀನಾಕ್ಷಿ ನಗರ, ಬಾಲಾಜಿ ಲೇಔಟ್, ಮಲ್ಲತ್ ಹಳ್ಳಿ, ರೈಲ್ವೇ ಲೇಔಟ್ 2 ಸ್ಟೇಜ್, ಬಿಟಿಎಸ್ ಲೇಔಟ್, ಅಂಜನಾ ನಗರ, ಕೆಇಬಿ ರೋಡ್, ಬಡರಹಳ್ಳಿ,
ರಾಜೀವ್ ಗಾಂಧಿ ನಗರ, ಅಗ್ರಹಾರ ದಾಸರಭಾಲಿ, ಕೆಎಚ್‌ಬಿ 2 ನೇ ಹಂತ, ಪಾಪಯ್ಯ ಗಾರ್ಡನ್, ಮಹಾಲಕ್ಷ್ಮಿ ಲೇಔಟ್, ಸರಸ್ವತಿಪುರ, ಜೆಸಿ ನಗರ, ಕುರುಬರಹಳ್ಳಿ, ಸುಬ್ರಮಣ್ಯನಗರ ಎ, ಇ, ಡಿ ಬ್ಲಾಕ್, ಪ್ರಕಾಶ್ ನಗರ, ರಾಜಾಜಿನಗರ 1,2,3,4,5, 6ನೇ ಹಂತ ಮತ್ತು 1ಎನ್ ಬ್ಲಾಕ್, ಜೈ ಮಾರುತಿ ನಗರ, ಕಂಠೀರವ ನಗರ ಲೇಔಟ್, ನಂಜುಂಡೀಶ್ವರ ನಗರ, ಶ್ರೀ ಕಂಠೇಶ್ವರ ನಗರ, ಶಂಕರನಗರ, ಕೃಷ್ಣಾನಂದ ನಗರ, ಕೆಎಚ್‌ಬಿ ಕಾಲೋನಿ, ಜಾಸ್ಮಿನ್ ಗಾರ್ಡನ್, ವಿದ್ಯಾರಣ್ಯನಗರ, ಎನ್ಆರ್ ಗಾರ್ಡನ್, ಚೆಲುವಪ್ಪ ಗಾರ್ಡನ್, ಗಂಗಪ್ಪ ಗಾರ್ಡನ್, ಮಾಗಡಿ ರೋಡ್, ಕೆಪಿ ಅಗ್ರಹಾರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ. ಇನ್ನು ಇದೇ ರೀತಿ ಕಳೆದ ವಾರ ಎರಡು ದಿನ ಬೆಂಗಳೂರು ದಕ್ಷಿಣದಲ್ಲಿ ನೀರು ಸ್ಥಗಿತಗೊಳಿಸಲಾಗಿತ್ತು.
ಇದನ್ನೂ ಓದಿ: Karnataka Politics: ಸಚಿವ ಸಿ ಪಿ ಯೊಗೇಶ್ವರ್ಗೆ ಕೋಲಾರ ಜಿಲ್ಲೆಯ ಉಸ್ತುವಾರಿ ಜವಾಬ್ಧಾರಿ ಘೋಷಿಸಿದ ಸಿಎಂ ಯಡಿಯೂರಪ್ಪ
(Karnataka government announced 50 percent exemption for motor vehicle tax in June due to lockdown)