ಒಂದೇ ದಿನಕ್ಕೆ ದೇಶದ್ರೋಹಿಗಳು ರಿಲೀಸ್: ಒತ್ತಡಕ್ಕೆ ಮಣಿದರಾ ಹುಬ್ಬಳ್ಳಿ ಪೊಲೀಸ್?

|

Updated on: Feb 17, 2020 | 11:31 AM

ಹುಬ್ಬಳ್ಳಿ: ನಿನ್ನೆ ಪಾಕ್ ಪರ ಘೋಷಣೆ ಕೂಗಿದ ವಿಚಾರ ಅದೆಷ್ಟು ದೊಡ್ಡ ಸಂಚಲನವನ್ನ ಮೂಡಿಸಿದ್ಯೋ, ಇವತ್ತು ಈ ಪ್ರಕರಣ ಪಡೆದುಕೊಂಡಿರೋ ಟ್ವಿಸ್ಟ್ ಕೂಡ ಅಷ್ಟೆ ದೊಡ್ಡ ಕಿಚ್ಚು ಹೊತ್ತಿಸಿದೆ. ಅದಕ್ಕೆ ಕಾರಣ, ದೇಶದ್ರೋಹ ಕೇಸ್ ಮೇಲೆ ಅಂದರ್ ಆಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಇಂದು ರಿಲೀಸ್ ಆಗಿದ್ದಾರೆ. ಹೀಗೆ ಬಿಡುಗಡೆ ಆಗಿರೋ ವಿಚಾರವೇ ಈಗ ಹಲವು ಅನುಮಾನಕ್ಕೆ ಕಾರಣವಾಗಿದೆ. ಯೆಸ್, ಪಾಕಿಸ್ತಾನ ಪರ ಕೂಗಿದ ಇದೇ ಘೋಷಣೆ ದೇಶದಲ್ಲೇ ದೊಡ್ಡ ಸಂಚಲನ ಎಬ್ಬಿಸಿದೆ. ಘೋಷಣೆ ಕೂಗಿದ ಮೂವರು […]

ಒಂದೇ ದಿನಕ್ಕೆ ದೇಶದ್ರೋಹಿಗಳು ರಿಲೀಸ್: ಒತ್ತಡಕ್ಕೆ ಮಣಿದರಾ ಹುಬ್ಬಳ್ಳಿ ಪೊಲೀಸ್?
Follow us on

ಹುಬ್ಬಳ್ಳಿ: ನಿನ್ನೆ ಪಾಕ್ ಪರ ಘೋಷಣೆ ಕೂಗಿದ ವಿಚಾರ ಅದೆಷ್ಟು ದೊಡ್ಡ ಸಂಚಲನವನ್ನ ಮೂಡಿಸಿದ್ಯೋ, ಇವತ್ತು ಈ ಪ್ರಕರಣ ಪಡೆದುಕೊಂಡಿರೋ ಟ್ವಿಸ್ಟ್ ಕೂಡ ಅಷ್ಟೆ ದೊಡ್ಡ ಕಿಚ್ಚು ಹೊತ್ತಿಸಿದೆ. ಅದಕ್ಕೆ ಕಾರಣ, ದೇಶದ್ರೋಹ ಕೇಸ್ ಮೇಲೆ ಅಂದರ್ ಆಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು ಇಂದು ರಿಲೀಸ್ ಆಗಿದ್ದಾರೆ. ಹೀಗೆ ಬಿಡುಗಡೆ ಆಗಿರೋ ವಿಚಾರವೇ ಈಗ ಹಲವು ಅನುಮಾನಕ್ಕೆ ಕಾರಣವಾಗಿದೆ.

ಯೆಸ್, ಪಾಕಿಸ್ತಾನ ಪರ ಕೂಗಿದ ಇದೇ ಘೋಷಣೆ ದೇಶದಲ್ಲೇ ದೊಡ್ಡ ಸಂಚಲನ ಎಬ್ಬಿಸಿದೆ. ಘೋಷಣೆ ಕೂಗಿದ ಮೂವರು ವಿದ್ಯಾರ್ಥಿಗಳ ವಿರುದ್ಧ ದೊಡ್ಡ ಕೂಗು ಎದ್ದಿದೆ. ಇಂಥ ಮನೆ ಮುರುಕರನ್ನ ಒದ್ದು ಪಾಕಿಸ್ತಾನಕ್ಕೆ ಅಟ್ಟಬೇಕು ಅನ್ನೋ ಕಿಡಿ ಪುಡಿದೇಳುತ್ತಿದೆ. ಕ್ಯಾನ್ಸರ್‌ನಂತೆ ದೇಶಕ್ಕೆ ಮಾರಕವಾಗಿರೊ ಇಂಥ ದೇಶದ್ರೋಹಿಗಳನ್ನ ಕೂಡಲೇ ಹೊಸಕಿ ಹಾಕಬೇಕು ಅನ್ನೋ ಕಿಚ್ಚು ಮೊಳಗುತ್ತಿದೆ.

ಪರಿಸ್ಥಿತಿ ಹೀಗಿರುವಾಗ, ದೇಶದ್ರೋಹಿಗಳ ವಿರುದ್ಧ ಎಲ್ಲೆಡೆ ಆಕ್ರೋಶದ ಅಗ್ನಿ ಹೊರಬೀಳುತ್ತಿರುವಾಗ ಖಾಕಿ ನಡೆದುಕೊಳ್ತಿರೋ ರೀತಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರು ಯಾರದ್ದೋ ಒತ್ತಡಕ್ಕೆ ಮಣಿದು ಕೆಲಸ ಮಾಡ್ತಿದ್ದಾರಾ ಅನ್ನೋ ಪ್ರಶ್ನೆ ಹುಟ್ಟುವಂತೆ ಮಾಡಿದೆ.

ದೇಶದ್ರೋಹದ ಕೇಸ್ ಮೇಲೆ ನಿನ್ನೆ ಅರೆಸ್ಟ್..!
ಯೆಸ್, ಹುಬ್ಬಳ್ಳಿಯ ಕೆ.ಎಲ್.ಇ.ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿರೋ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು, ನಮ್ಮ ವೈರಿ ರಾಷ್ಟ್ರ ಪಾಕಿಸ್ತಾನದ ಪರ ಘೋಷಣೆ ಕೂಗಿದ್ರು. ಫೆಬ್ರವರಿ 14 ರಂದು ಅಂದ್ರೆ, ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರದಾಳಿ ಒಂದು ವರ್ಷವಾಗಿದ್ದಕ್ಕೆ, ದೇಶವೇ ಕರಾಳ ದಿನ ಆಚರಿಸ್ತಿದ್ರೆ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ವೀರಯೋಧರ ಬಲಿದಾನಕ್ಕೆ ಕಂಬನಿ ಮಿಡಿಯುತ್ತಿದ್ರೆ, ನೀಚರು ಪಾಕ್ ಪರ ಘೋಷಣೆ ಕೂಗಿದ್ರು.

ನಿನ್ನೆ ಈ ವಿಡಿಯೋ ವೈರಲ್ ಆಗುತ್ತಲೇ ಪೊಲೀಸರು ಪಾಕ್ ಪರ ಘೋಷಣೆ ಕೂಗಿದ ಅಮೀರ್, ತಾಲಿಬ್, ಬಾಸಿತ್, ಈ ಮೂವರನ್ನ ಅರೆಸ್ಟ್ ಮಾಡಿದ್ರು. ಇವರ ಮೇಲೆ ಐಪಿಸಿ ಸೆಕ್ಷನ್ 124 A ಅಂದ್ರೆ ದೇಶದ್ರೋಹದ ಕೇಸ್ ದಾಖಲಿಸಿದ್ರು.

ಬಾಂಡ್ ಮೇಲೆ ಕಾಶ್ಮೀರಿ ವಿದ್ಯಾರ್ಥಿಗಳು ರಿಲೀಸ್..!
ಆದ್ರೆ, ವಿಪರ್ಯಾಸ ನೋಡಿ, ನಿನ್ನೆ ಅರೆಸ್ಟ್ ಮಾಡಿದ್ದ ಇದೇ ದೇಶದ್ರೋಹಿಗಳನ್ನ ಪೊಲೀಸರು ಇಂದು ರಿಲೀಸ್ ಮಾಡಿದ್ದಾರೆ. ಸದ್ಯ ದೇಶದ್ರೋಹಿಗಳನ್ನ ಬಿಡುಗಡೆ ಮಾಡಿದ ವಿಚಾರವೇ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರು ಪ್ರಭಾವಕ್ಕೊಳಕ್ಕಾಗಿ ಕೆಲಸ ಮಾಡ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿವೆ. ಅದ್ರಲ್ಲೂ ಐಪಿಸಿ ಸೆಕ್ಷನ್ 124 A ಅಂದ್ರೆ, ದೇಶದ್ರೋಹದ ಕೇಸ್ ಜಾಮೀನು ರಹಿತ ಕೇಸ್ ಆಗಿದ್ರೂ, ಇವ್ರನ್ನ ಬಿಟ್ಟಿದ್ಹೇಗೆ ಅನ್ನೋ ಪ್ರಶ್ನೆಯನ್ನ ಕೇಳ್ತಿದ್ದಾರೆ. ಸಿಆರ್​ಪಿಸಿ ಸೆಕ್ಷನ್ 169ರ ಅಡಿ ಬಾಂಡ್ ಪಡೆದು ಬಿಡುಗಡೆ ಮಾಡಿದ್ದಾರೆ.

ಕೇಳಿದ್ರಾ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ಹೇಳೋ ಪ್ರಕಾರ ಮೂವರನ್ನ ಬಾಂಡ್ ಮೇಲೆ ಬಿಡುಗಡೆ ಮಾಡಿದ್ದಾರೆ. ಸದ್ಯ ಇದೇ ರಿಲೀಸ್ ವಿಚಾರ ಹಲವು ಪ್ರಶ್ನೆಗಳನ್ನ ಹುಟ್ಟಿಸಿದೆ. ಹಾಗಿದ್ರೆ ಆ ಅನುಮಾನಗಳೇನು ಅದನ್ನೇ ತೋರಿಸ್ತೀವಿ ನೋಡಿ.

ಪೊಲೀಸರ ಮೇಲೆ ಮೂಡುವ ಅನುಮಾನಗಳು:
ಅನುಮಾನ ನಂಬರ್ 1 ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 124 A ದಾಖಲಿಸಲಾಗಿದೆ. ಹೀಗಾಗಿ ಇದು ರಾಷ್ಟ್ರದ್ರೋಹದ ಆರೋಪವಿರುವ ಪ್ರಕರಣವಾಗಿದ್ದು ಜಾಮೀನು ರಹಿತ ಅಪರಾಧವೆಂದು ಪರಿಗಣಿಸಲಾಗಿದೆ. ಅನುಮಾನ ನಂಬರ್ 2 ಜಾಮೀನು ರಹಿತ ಕೇಸ್ ಆದ್ರೂ ಪೊಲೀಸರು ವಿದ್ಯಾರ್ಥಿಗಳನ್ನ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸದೇ ಬಾಂಡ್ ಮೇಲೆ ಬಿಟ್ಟಿದ್ದಾರೆ.

ಇನ್ನು ಅನಮಾನ ನಂಬರ್ 3 ಏನಂದ್ರೆ ಸಿಆರ್​ಪಿಸಿ ಸೆಕ್ಷನ್ 169 ಪ್ರಕಾರ ತನಿಖಾಧಿಕಾರಿಗೆ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸುವಷ್ಟು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲವೆಂದು ಕಂಡುಬಂದರೆ ಆಗ ತನಿಖಾಧಿಕಾರಿ ಆರೋಪಿಯಿಂದ ಬಾಂಡ್ ಬರೆಸಿಕೊಂಡು ಕರೆದಾಗ ಹಾಜರಾಗುವಂತೆ ಸೂಚಿಸಿ ಕಳುಹಿಸಬಹುದು. ಆದ್ರೆ, ಆರೋಪಿಗಳ ವಿರುದ್ಧ ವಿಡಿಯೋ ಸಾಕ್ಷ್ಯ ಇದ್ರೂ ಅವರನ್ನು ಸಿಆರ್​ಪಿಸಿ ಸೆಕ್ಷನ್ 169 ಅಡಿಯಲ್ಲಿ ಸೂಕ್ತ ಸಾಕ್ಷ್ಯವಿಲ್ಲವೆಂದು ಬಿಡುಗಡೆ ಮಾಡಿರುವುದು ವಿಚಿತ್ರವಾಗಿ ಕಾಣ್ತಿದೆ.

ಶಾಹೀನ್ ಶಾಲೆಗೊಂದು ನ್ಯಾಯ.. ದೇಶದ್ರೋಹಿಗಳಿಗೊಂದು ನ್ಯಾಯ..!:
ಅಂದಹಾಗೆ ಬೀದರ್​ನ ಶಾಹೀನ್ ಶಾಲೆಯ ಪ್ರಕರಣವೂ ಇದೇ ರೀತಿ ಆಗಿತ್ತು. ಸಿಎಎ ವಿರುದ್ಧ ಶಾಲೆಯ ಮಕ್ಕಳ ಕೈಯಿಂದ ನಾಟಕ ಮಾಡಿಸಿದ್ದಕ್ಕೆ ಮುಖ್ಯಶಿಕ್ಷಕಿ ಮತ್ತು ಪ್ರಧಾನಿ ಮೋದಿ ವಿರುದ್ಧ ಅವಹೇಳನ ಭಾಷೆ ಬಳಸಿದ್ದ ಮಗುವಿನ ತಾಯಿಯನ್ನ ದೇಶದ್ರೋಹದ ಕೇಸ್ ಮೇಲೆ ಬಂಧಿಸಲಾಗಿತ್ತು. ಆದ್ರೆ ಒಂದು ತಿಂಗಳ ಬಳಿಕ ಅವರಿಗೆ ಜಾಮೀನು ಸಿಕ್ಕಿದೆ. ಆದ್ರೆ, ಕಾಶ್ಮೀರಿ ವಿದ್ಯಾರ್ಥಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ್ದರ ವಿಡಿಯೋ ಸಾಕ್ಷ್ಯ ವಿದ್ರೂ, ಪೊಲೀಸರು ಅವರನ್ನ ಬಾಂಡ್ ಮೇಲೆ ಬಿಟ್ಟು ಕಳುಹಿಸಿದ್ದಾರೆ. ಇದೇ ವಿಚಾರಕ್ಕೆ ಪೊಲೀಸರ ನಡೆಯನ್ನ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಹೀಗೆ ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನ ಪೊಲೀಸರು ಬಿಟ್ಟು ಕಳುಹಿಸಿರುವ ವಿಚಾರ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಅಸಲಿಗೆ ವಿದ್ಯಾರ್ಥಿಗಳು ಈಗ ಎಲ್ಲಿದ್ದಾರೆ ಅನ್ನೋದು ಕೂಡ ಯಾರಿಗೂ ಗೊತ್ತಿಲ್ಲ. ಹೀಗಾಗಿ ಖಾಕಿ ವಿರುದ್ಧ ಅನುಮಾನದ ಮುಳ್ಳು ತಿರುಗುವಂತೆ ಮಾಡಿದೆ.

Published On - 9:32 pm, Sun, 16 February 20