ಡಾಕ್ಟರ್ ಎಡವಟ್ಟು: ಯುವಕ ಬರ್ಬಾದ್, ನೊಂದ ಕುಟುಂಬಕ್ಕೆ ವೈದ್ಯನ ಧಮ್ಕಿ

ತುಮಕೂರು: ಆಸೆ ಬೆಟ್ಟದಷ್ಟು.. ಕನಸು ನೂರಾರು.. ಸಾಧಿಸಬೇಕು ಅನ್ನೋ ಹುಮ್ಮಸ್ಸು.. ಕುಟುಂಬ ಸಲಹಬೇಕು ಅನ್ನೋ ಛಲ. ಇಂಥಾ ಟೈಮಲ್ಲಿ ಏನೂ ಮಾಡೋಕಾಗ್ತಿಲ್ಲ. ಕೈ ನೋವು ಜೀವ ಹಿಂಡುತ್ತಿದೆ. ನಿತ್ಯ ಮನೆಯಲ್ಲೇ ನರಳಾಡುವಂತಾಗಿದೆ. ಇದಕ್ಕೆಲ್ಲ ಕಾರಣ ವೈದ್ಯರು ಮಾಡಿದ ಅದೊಂದು ಎಡವಟ್ಟು. ಡಾಕ್ಟರ್ ಎಡವಟ್ಟಿನಿಂದ ಯುವಕನ ಕೈ ಬರ್ಬಾದ್! ತುಮಕೂರು ನಗರದ ರಾಜೀವ್ ಗಾಂಧಿನಗರದ ನಿವಾಸಿ ವಸೀಂ ಪಾಷಾ ಒಂದು ವರ್ಷದ ಹಿಂದೆ ಬೈಕ್​ನಿಂದ ಬಿದ್ದಿದ್ದ. ತಕ್ಷಣ ಮಂಜುನಾಥ ನಗರದಲ್ಲಿರುವ ಸುಕೃತ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ಮಾಡಿದ ಡಾ. […]

ಡಾಕ್ಟರ್ ಎಡವಟ್ಟು: ಯುವಕ ಬರ್ಬಾದ್, ನೊಂದ ಕುಟುಂಬಕ್ಕೆ ವೈದ್ಯನ ಧಮ್ಕಿ
Follow us
ಸಾಧು ಶ್ರೀನಾಥ್​
|

Updated on:Feb 17, 2020 | 11:51 AM

ತುಮಕೂರು: ಆಸೆ ಬೆಟ್ಟದಷ್ಟು.. ಕನಸು ನೂರಾರು.. ಸಾಧಿಸಬೇಕು ಅನ್ನೋ ಹುಮ್ಮಸ್ಸು.. ಕುಟುಂಬ ಸಲಹಬೇಕು ಅನ್ನೋ ಛಲ. ಇಂಥಾ ಟೈಮಲ್ಲಿ ಏನೂ ಮಾಡೋಕಾಗ್ತಿಲ್ಲ. ಕೈ ನೋವು ಜೀವ ಹಿಂಡುತ್ತಿದೆ. ನಿತ್ಯ ಮನೆಯಲ್ಲೇ ನರಳಾಡುವಂತಾಗಿದೆ. ಇದಕ್ಕೆಲ್ಲ ಕಾರಣ ವೈದ್ಯರು ಮಾಡಿದ ಅದೊಂದು ಎಡವಟ್ಟು.

ಡಾಕ್ಟರ್ ಎಡವಟ್ಟಿನಿಂದ ಯುವಕನ ಕೈ ಬರ್ಬಾದ್! ತುಮಕೂರು ನಗರದ ರಾಜೀವ್ ಗಾಂಧಿನಗರದ ನಿವಾಸಿ ವಸೀಂ ಪಾಷಾ ಒಂದು ವರ್ಷದ ಹಿಂದೆ ಬೈಕ್​ನಿಂದ ಬಿದ್ದಿದ್ದ. ತಕ್ಷಣ ಮಂಜುನಾಥ ನಗರದಲ್ಲಿರುವ ಸುಕೃತ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ಮಾಡಿದ ಡಾ. ಶ್ರೀನಿವಾಸ್, ತಕ್ಷಣ ಈತನ ಕೈಯನ್ನ ಸರ್ಜರಿ ಮಾಡ್ಲೇಬೇಕು. ಇಲ್ಲಾಂದ್ರೆ ಪ್ರಾಬ್ಲಂ ಆಗುತ್ತೆ ಅಂತಾ ಹೇಳಿ ಆವತ್ತು ರಾತ್ರಿಯೇ 35 ಸಾವಿರ ರೂಪಾಯಿ ಪೀಕಿ ಸರ್ಜರಿಯನ್ನೂ ಮಾಡಿದ್ದ.

ಕೈ ಸರಿಹೋಯ್ತು ಅನ್ನೋವಾಗ್ಲೇ ವಸೀಂ ಕೈನಲ್ಲಿ ಪದೇಪದೇ ರಕ್ತಸ್ರಾವ ಆಗೋದು. ಕೀವು ಸೋರೋದು. ನೋವು ಕಾಣಿಸಿಕೊಳ್ಳಲು ಶುರುವಾಗಿತ್ತು. ಮತ್ತೆ ಹೀಗಾಗ್ತಿದೆ ಅಂತಾ ಡಾ.ಶ್ರೀವಾಸ್ ಬಳಿ ಹೋದಾಗ, ಏನೂ ಆಗಲ್ಲ. ಧೈರ್ಯವಾಗಿರು ಅಂತ ಸುಳ್ಳು ಹೇಳಿ ಕಳಿಸಿದ್ನಂತೆ. ಕೊನೆಗೊಂದಿನ ಕೈ ನೋವು ತಾಳಲಾರದೆ ವಸೀಂ ಡಾಕ್ಟರ್ ಬಳಿಗೆ ಬಂದಿದ್ದಾನೆ. ಆಗ ಇದನ್ನ ಇಲ್ಲಿ ವಾಸಿ ಮಾಡೋಕೆ ಸಾಧ್ಯವೇ ಇಲ್ಲ. ಬೇರೆ ಕಡೆ ಹೋಗು. ಬೇಕಾದ್ರೆ 5ಲಕ್ಷ ಹಣವನ್ನ ನಾನೇ ಕೊಡ್ತೀನಿ. ಯಾರಬಳಿಯೂ ಹೇಳ್ಬೇಡಿ ಅಂದಿದ್ದಾರೆ ಅಂತಾ ವಸೀಂ ಆರೋಪಿಸಿದ್ದಾರೆ.

ಮತ್ತೆ ಆಸ್ಪತ್ರೆಯಿಂದ ಹೊರಬರುತ್ತಿದ್ದಂತೆ ವಸೀಂಗೆ ಡಾಕ್ಟರ್ ಮತ್ತೊಂದು ಶಾಕ್ ಕೊಟ್ಟಿದ್ದಾರೆ. ನಿಮಗೆ ಹಣವೂ ಕೊಡಲ್ಲ. ಏನೂ ಕೊಡಲ್ಲ ಅಂತೇಳಿದ್ದಾನೆ. ಅಲ್ದೆ, ಎಂಪಿ ಗೊತ್ತು ಎಂಎಲ್ಎ ಗೊತ್ತು ಅದೇನ್ ಮಾಡ್ತಿಯೋ ಮಾಡ್ಕೊಳಿ ಅಂತಾ ಆವಾಜ್ ಹಾಕಿದ್ದಾನಂತೆ. ಸದ್ಯ, ದಿಕ್ಕು ಕಾಣದ ಈ ಕುಟುಂಬ ನ್ಯಾಯಕ್ಕಾಗಿ ಮೊರೆಯಿಟ್ಟಿದೆ.

ಒಟ್ನಲ್ಲಿ, ಮೊಬೈಲ್ ರಿಪೇರಿ ಮಾಡಿಕೊಂಡು ಮನೆ ಬಾಡಿಗೆ ಕಟ್ಟಿಕೊಂಡು. ಅಮ್ಮ, ತಂಗಿ, ತಮ್ಮನನ್ನ ಸಾಕೋ ಜವಾಬ್ದಾರಿ ಹೊತ್ತಿದ್ದ. ಆದ್ರೆ, ವೈದ್ಯರೇ ಇಲ್ಲಿ ಅಮಾಯಕನ ಬದುಕಿಗೆ ಮುಳ್ಳಾಗಿದ್ದಾರೆ.

Published On - 8:02 am, Mon, 17 February 20

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್