ಆಫ್​ಲೈನ್ ಬದಲು ಆನ್​ಲೈನ್ ಪರೀಕ್ಷೆ ಕೋರಿ ರಿಟ್ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು

| Updated By: ganapathi bhat

Updated on: Apr 06, 2022 | 9:04 PM

ನಾವು ಪರೀಕ್ಷೆಯನ್ನು ರದ್ದುಗೊಳಿಸಲು ಕೋರುತ್ತಿಲ್ಲ, ವಿಧಾನ ಮಾರ್ಪಡಿಸುವಂತೆ ಕೇಳುತ್ತಿದ್ದೇವೆ ಎಂದು ಹೈಕೋರ್ಟ್​ಗೆ ವಿದ್ಯಾರ್ಥಿಗಳ ಪರ ವಕೀಲರು ಮನವಿ ಮಾಡಿದ್ದಾರೆ.

ಆಫ್​ಲೈನ್ ಬದಲು ಆನ್​ಲೈನ್ ಪರೀಕ್ಷೆ ಕೋರಿ ರಿಟ್ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು
ಕರ್ನಾಟಕ ಹೈಕೋರ್ಟ್​
Follow us on

ಬೆಂಗಳೂರು: ಆಫ್​ಲೈನ್ ಬದಲು ಆನ್​ಲೈನ್ ಪರೀಕ್ಷೆ ನಡೆಸುವಂತೆ ಕೋರಿ 120ಕ್ಕೂ ಅಧಿಕ ವಿದ್ಯಾರ್ಥಿಗಳು ರಾಜ್ಯ ಹೈಕೋರ್ಟ್​ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ನಾವು ಪರೀಕ್ಷೆಯನ್ನು ರದ್ದುಗೊಳಿಸಲು ಕೋರುತ್ತಿಲ್ಲ, ವಿಧಾನ ಮಾರ್ಪಡಿಸುವಂತೆ ಕೇಳುತ್ತಿದ್ದೇವೆ ಎಂದು ಹೈಕೋರ್ಟ್​ಗೆ ವಿದ್ಯಾರ್ಥಿಗಳ ಪರ ವಕೀಲರು ಮನವಿ ಮಾಡಿದ್ದಾರೆ.

ಈ ಸಂಬಂಧ, ರಾಜ್ಯ ಸರ್ಕಾರ ಹಾಗೂ ವಿಟಿಯುಗೆ ಹೈಕೋರ್ಟ್ ನೋಟಿಸ್ ನೀಡಿದೆ. ಸರ್ಕಾರಗಳ ನಿಯಮಾವಳಿಗಳ ಪ್ರಕಾರವೇ ದಾಖಲಾತಿ ನಡೆಯುತ್ತಿದೆ. ನ್ಯಾಯಾಧೀಶದ ಹುದ್ದೆಗಳಿಗೂ ಆಫ್​​ಲೈನ್ ಪರೀಕ್ಷೆ ನಡೆಸಲಾಗುತ್ತಿದೆ. ಹೀಗಾಗಿ ನಿಮ್ಮ ಕೋರಿಕೆ ಪರಿಗಣಿಸುವುದು ಕಷ್ಟ ಎಂದು ವಿದ್ಯಾರ್ಥಿಗಳ ಕೋರಿಕೆಯ ಬಗ್ಗೆ, ‌ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

CBSE ಪರೀಕ್ಷಾ ದಿನಾಂಕ ಪ್ರಕಟ: ಮೇ 4 ರಿಂದ ಪರೀಕ್ಷೆ ಆರಂಭ, ಜುಲೈ 15 ರೊಳಗೆ ಫಲಿತಾಂಶ ಪ್ರಕಟ

Published On - 8:37 pm, Wed, 13 January 21