ರಾಜಕೀಯ ಜೀವನ ಮುಗಿದ ಮೇಲೆ ಮೈಸೂರಿನಲ್ಲಿ ಇರುತ್ತೇನೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
ಮೈಸೂರಿನಲ್ಲಿ ನನಗೆ ಮನೆ ಇರಲಿಲ್ಲ, ಇದೀಗ ಕಟ್ಟಿಸುತ್ತಿದ್ದೇನೆ. ರಾಜಕೀಯ ಜೀವನ ಮುಗಿದ ಮೇಲೆ ಮೈಸೂರಿನಲ್ಲಿ ಇರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಚಾಮುಂಡೇಶ್ವರಿ ಸೋಲಿನ ನೋವಿನಿಂದ ಹೊರ ಬರುವುದಕ್ಕೆ ಸಾಧ್ಯವಾಗಿಲ್ಲ ಎಂದು ತಮ್ಮ ಸೋಲನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ನನಗೆ ಮನೆ ಇರಲಿಲ್ಲ, ಇದೀಗ ಕಟ್ಟಿಸುತ್ತಿದ್ದೇನೆ. ರಾಜಕೀಯ ಜೀವನ ಮುಗಿದ ಮೇಲೆ ಮೈಸೂರಿನಲ್ಲಿ ಇರುತ್ತೇನೆ. ಈ ಹಿಂದೆ ನನಗೆ ಒಬ್ಬರು ಮನೆ ಕಟ್ಟಿಸಿಕೊಟ್ಟಿದ್ದರು. ಅದನ್ನು ಮಾರಿಬಿಟ್ಟೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜಕೀಯ ಜೀವನ ಶುರುವಾದ ಕ್ಷೇತ್ರದಲ್ಲೇ ನನ್ನ ಕೊನೆಯ ಚುನಾವಣೆ ಆಗಬೇಕು ಅಂದುಕೊಂಡಿದ್ದೆ. ಅದಕ್ಕಾಗಿ ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಿದೆ. ಕಳೆದ ಚುನಾವಣೆಯಲ್ಲಿ ಗೆದ್ದಿದ್ದರೆ ಮತ್ತೆ ಚುನಾವಣೆಗೆ ನಿಲ್ಲುತ್ತಿರಲಿಲ್ಲ. ಈಗ ಮತ್ತೆ ಚುನಾವಣೆಗೆ ಸ್ಪರ್ಧಿಸಬೇಕಾ ಬೇಡ್ವಾ ಎಂಬ ಚಿಂತೆ ಇದೆ. ನನಗೆ 73 ವರ್ಷವಾಗಿದೆ, ದೀರ್ಘ ರಾಜಕೀಯ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಈಗ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದಿದೆ. ಇಷ್ಟೊಂದು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಅಂದುಕೊಂಡಿರಲಿಲ್ಲ. ನಾನು ಸೋತಿದ್ದ ಕಾರಣದಿಂದ ಗೆಲ್ಲಲು ಆಗುವುದಿಲ್ಲ ಅಂದುಕೊಂಡಿದ್ದೆ. ಆದರೆ ಹಾಗಾಗಿಲ್ಲ ಎಂದು ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದ್ದಾರೆ. ಮೊದಲೆಲ್ಲ ಚುನಾವಣೆಗೆ ಹಣ ಅಷ್ಟಾಗಿ ಖರ್ಚಾಗುತ್ತಿರಲಿಲ್ಲ. ಆದರೆ, ಈಗ ಗ್ರಾಮ ಪಂಚಾಯತಿ ಚುನಾವಣೆಗೂ ಬಹಳಷ್ಟು ಹಣ ಖರ್ಚಾಗುತ್ತದೆ ಎಂದು ತಿಳಿಸಿದ್ದಾರೆ.
ಸಮಾರಂಭದಲ್ಲಿ ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ಗೆ ಅಧಿಕಾರ ಕೊಟ್ಟೆವು, ಬಳಿಕ ನಮ್ಮ ವಿರುದ್ಧವೇ ಮಾತಾಡಿದರು. ಜೆಡಿಎಸ್ನವರು ಅವಕಾಶವಾದಿಗಳು. ಗೆದ್ದೆತ್ತಿನ ಬಾಲ ಹಿಡಿವವರು. ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಜೆಡಿಎಸ್ ಬೆಂಬಲಿಸಿದ್ದೆವು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ನಾನು ಈವರೆಗೆ ಗೋಮಾಂಸ ತಿಂದಿಲ್ಲ, ಹಂದಿ ಮಾಂಸ ತಿಂದಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
Published On - 8:15 pm, Wed, 13 January 21