ಬಿಸ್ಮಿಲ್ಲಾನಗರದಲ್ಲಿ ರಾಮರಥದ ಮೇಲೆ ಕಲ್ಲುತೂರಾಟ ಪ್ರಕರಣ: ಪೊಲೀಸರಿಂದ ಐದು ಆರೋಪಿಗಳ ಅರೆಸ್ಟ್​

| Updated By: ಸಾಧು ಶ್ರೀನಾಥ್​

Updated on: Jan 30, 2021 | 5:38 PM

ಬಿಸ್ಮಿಲ್ಲಾನಗರದಲ್ಲಿ ನಿನ್ನೆ ರಾಮ ಮಂದಿರದ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡುತ್ತಿದ್ದ ವೇಳೆ ರಾಮ ರಥದ ಮೇಲೆ ಕಲ್ಲುತೂರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಗುಂಟೆಪಾಳ್ಯ ಪೊಲೀಸರಿಂದ ಐವರು ಆರೋಪಿಗಳ ಬಂಧನವಾಗಿದೆ.

ಬಿಸ್ಮಿಲ್ಲಾನಗರದಲ್ಲಿ ರಾಮರಥದ ಮೇಲೆ ಕಲ್ಲುತೂರಾಟ ಪ್ರಕರಣ: ಪೊಲೀಸರಿಂದ ಐದು ಆರೋಪಿಗಳ ಅರೆಸ್ಟ್​
ಬಿಸ್ಮಿಲ್ಲಾನಗರದಲ್ಲಿ ರಾಮ ರಥದ ಮೇಲೆ ಕಲ್ಲುತೂರಾಟ ಪ್ರಕರಣ: ಪೊಲೀಸರಿಂದ ಐವರು ಆರೋಪಿಗಳು ಅರೆಸ್ಟ್
Follow us on

ಬೆಂಗಳೂರು: ಬಿಸ್ಮಿಲ್ಲಾನಗರದಲ್ಲಿ ನಿನ್ನೆ ರಾಮ ಮಂದಿರದ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡುತ್ತಿದ್ದ ವೇಳೆ ರಾಮ ರಥದ ಮೇಲೆ ಕಲ್ಲುತೂರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಗುಂಟೆಪಾಳ್ಯ ಪೊಲೀಸರಿಂದ ಐವರು ಆರೋಪಿಗಳ ಬಂಧನವಾಗಿದೆ. ಬಂಧಿತ ಆರೋಪಿಗಳನ್ನು ವಸೀಮ್ ಉಲ್ಲಾ(32), ಮೊಹಮ್ಮದ್ ಅದ್ನಾನ್(21), ಅಹ್ಮದ್ ಬಾಷಾ(65), ಅಬ್ದುಲ್ ಗೌಸ್(19) ಹಾಗೂ ಮೊಹಮ್ಮದ್ ಶಬ್ಬೀರ್(20) ಎಂದು ಗುರುತಿಸಲಾಗಿದೆ.

ನಿನ್ನೆ ಮಧ್ಯಾಹ್ನ ಬಿಸ್ಮಿಲ್ಲಾನಗರದಲ್ಲಿ ರಾಮಮಂದಿರಕ್ಕಾಗಿ ನಿಧಿ ಸಂಗ್ರಹಣೆ ಮಾಡ್ತಿದ್ದ ವೇಳೆ ರಾಮರಥ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಆರೋಪಿಗಳು ಕಲ್ಲುತೂರಾಟ ನಡೆಸಿದ್ದರು. ಈ ಸಂದರ್ಭದಲ್ಲಿ ರಾಮರಥದ ಗಾಜು ಜಖಂಗೊಂಡಿದ್ದು ಕಾರ್ಯಕರ್ತರಿಗೆ ಗಾಯವಾಗಿತ್ತು. ಈ ಸಂಬಂಧ, ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗುದ್ದಲಿ ಪೂಜೆಯಲ್ಲಿ MLA ಶರತ್ ಬಚ್ಚೇಗೌಡ ಕಡೆಗಣನೆ ಆರೋಪ: ಧರಣಿ ನಡೆಸಿದ MLA ಮನವೊಲಿಸಲು SP ರವಿ ಚನ್ನಣ್ಣನವರ್​​ ಹರಸಾಹಸ

Published On - 5:30 pm, Sat, 30 January 21