ಬೆಂಗಳೂರು, ಜ.13: ಬ್ರ್ಯಾಂಡ್ ಬೆಂಗಳೂರು (Brand Bengaluru) ನನ್ನ ಐಡಿಯ ಅಲ್ಲ, ಸಾಫ್ಟ್‌ವೇರ್ ಜೊತೆಗೆ ಸಂಸ್ಕೃತಿ ಸ್ವಚ್ಚತೆಯಲ್ಲೂ ಹೆಸರು ಮಾಡಬೇಕು ಎಂದು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ (Sudha Murthy) ಹೇಳಿದರು. ಬೆಂಗಳೂರಿನಲ್ಲಿ ನಡೆದ ಯುವ ನಾಯಕತ್ವ ಸಮ್ಮೇಳನದಲ್ಲಿ ಬ್ರ್ಯಾಂಡ್ ಬೆಂಗಳೂರು ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಇದು ನನ್ನ ಐಡಿಯ ಅಂತಾ ಅಲ್ಲ. ಇಲ್ಲಿ ಮಕ್ಕಳ ಐಡಿಯಾ ಮುಖ್ಯವಾಗಿದೆ. ಊರಿಗೆ ಒಂದು ಹೆಸರು ಬರಬೇಕು. ಹೀಗಾಗಿ ಬೇರೆ ಬೇರೆ ಆಯಾಮಗಳಲ್ಲಿ ಹೆಸರು ಬರಬೇಕು ಎಂದರು.
ಬ್ರ್ಯಾಂಡ್ ಬೆಂಗಳೂರು ಯೋಜನೆ ಕುರಿತ ಐಡಿಯಾಥಾನ್ ಕಾರ್ಯಕ್ರಮ ವಿಚಾರವಾಗಿ ಮಾತನಾಡಿದ ಅವರು, ಹೊಸದೇನಾದರೂ ಅಪೇಕ್ಷೆ ಮಾಡಬೇಕು. ಸ್ಪಷ್ವವಾದ ವಿಚಾರ ಬೇಕು. ನನಗೆ ಬಹಳ ಸಂತೋಷ ಆಗುತ್ತದೆ. ಈ ಕಾರ್ಯಕ್ರಮದಲ್ಲಿ ಹಲವು ಶಾಲೆಗಳ ಮಕ್ಕಳು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮವನ್ನು ಮಾಡಲು ಎಲ್ಲಾ ಮಕ್ಕಳು ಕಷ್ಟಪಟ್ಟಿದ್ದಾರೆ. ಒಂದು ದಿನದಲ್ಲಿ ಮಾಡಲು ಸಾಧ್ಯವಿಲ್ಲ. ಬಹಳ ಸಂತೋಷ ಆಗಿದೆ. ಇಂತಹ ಕಾರ್ಯಕ್ರಮಗಳು ಬೇರೆಬೇರೆ ಊರುಗಳಲ್ಲೂ ಆಗಬೇಕು ಎಂದರು.
ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಅಂದ್ರೆ ಕನ್ನಡ; ಇಂಗ್ಲೀಷ್ ಮಾತನಾಡಬೇಕು ಅಂತಾ ಕನ್ನಡ ಬಿಡಬೇಡಿ -ಸುಧಾಮೂರ್ತಿ ಕಿವಿಮಾತು
ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ್ದ ಸುಧಾಮೂರ್ತಿ, ಬ್ರ್ಯಾಂಡ್ ಬೆಂಗಳೂರು ಅಂದರೆ ಕನ್ನಡ. ಇಂಗ್ಲೀಷ್ ಮಾತನಾಡಲು ಕನ್ನಡ ಬಿಡಬೇಡಿ. ಮಕ್ಕಳ ಮನಸ್ಸು ಯಾವುದೇ ಪೂರ್ವಪೀಡಿತವಾಗಿರುವುದಿಲ್ಲ. ಬ್ರೈಟ್ ಐಡಿಯಾ ಬರೋದೇ ಮಕ್ಕಳಿಂದ. ಹೀಗಾಗಿ ನಾನು ಪುಸ್ತಕ ಬರೆಯುವಾಗ ತಪ್ಪುಗಳಿದ್ದರೆ ತಿಳಿಸುವಂತೆ ಮಕ್ಕಳಿಗೆ ಹೇಳುತ್ತೇನೆ ಎಂದಿದ್ದರು.
ಬ್ರ್ಯಾಂಡ್ ಬೆಂಗಳೂರು ಅನ್ನೋದು ಒಂದು ಲೋಗೋ ಅಲ್ಲ. ಈ ಪರಿಕಲ್ಪನೆಗೆ ನಾವೆಲ್ಲರೂ ಅಂಬಾಸಿಡರ್. ಬ್ರ್ಯಾಂಡ್ ಬೆಂಗಳೂರಿನ ನಿರ್ಮಾಣಕ್ಕೆ ನಿಮ್ಮೆಲ್ಲರ ಐಡಿಯಾ ಬೇಕು. ಆಕ್ಟೀವ್ ಸಿಟಿಜನ್ ಆಗಿ ಎಲ್ಲರೂ ಸಹಕರಿಸಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಹೇಳಿದ್ದರು. ಯುವ ನಾಯಕತ್ವ ಸಮ್ಮೇಳನವನ್ನು ಐಶ್ವರ್ಯ ನೇತೃತ್ವದಲ್ಲಿ ಆಯೋಜಿಸಲಾಗಿದೆ.
ವರದಿ: ಶಾಂತ ಮೂರ್ತಿ, ಟಿವಿ9 ಬೆಂಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ