24 ಗಂಟೆಯಲ್ಲಿ ಕೊವಿಡ್ ಪರೀಕ್ಷಾ ವರದಿ ಕೊಡುತ್ತೇವೆ -ಸಚಿವ ಸುಧಾಕರ್ ಭರವಸೆ
ಬೆಂಗಳೂರು: ಕೊವಿಡ್ ಪರೀಕ್ಷಾ ವರದಿ ತಡವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಸಮಸ್ಯೆಯನ್ನು ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಧಾಕರ್ ಇನ್ನು ಮುಂದೆ 24 ಗಂಟೆಯಲ್ಲಿ ಕೊವಿಡ್ ಪರೀಕ್ಷಾ ವರದಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ‘ಖಾಸಗಿ ಆಸ್ಪತ್ರೆಗಳಿಂದ ಬೆಡ್ಗಳನ್ನ ಪಡೆದೇ ತೀರುತ್ತೇವೆ’ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯಿದೆ ಎಂಬ ನೆಪವೊಡ್ಡಿ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ಹಲವಾರು ದೂರುಗಳು ಕೇಳಿಬಂದಿದೆ. ಇದಕ್ಕೆ ಸಚಿವರು ಸ್ಪಷ್ಟನೆ ಸಹ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗಳು 2,734 […]
ಬೆಂಗಳೂರು: ಕೊವಿಡ್ ಪರೀಕ್ಷಾ ವರದಿ ತಡವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಸಮಸ್ಯೆಯನ್ನು ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸುಧಾಕರ್ ಇನ್ನು ಮುಂದೆ 24 ಗಂಟೆಯಲ್ಲಿ ಕೊವಿಡ್ ಪರೀಕ್ಷಾ ವರದಿ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
‘ಖಾಸಗಿ ಆಸ್ಪತ್ರೆಗಳಿಂದ ಬೆಡ್ಗಳನ್ನ ಪಡೆದೇ ತೀರುತ್ತೇವೆ’ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯಿದೆ ಎಂಬ ನೆಪವೊಡ್ಡಿ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂಬ ಹಲವಾರು ದೂರುಗಳು ಕೇಳಿಬಂದಿದೆ. ಇದಕ್ಕೆ ಸಚಿವರು ಸ್ಪಷ್ಟನೆ ಸಹ ನೀಡಿದ್ದಾರೆ.
ಖಾಸಗಿ ಆಸ್ಪತ್ರೆಗಳು 2,734 ಬೆಡ್ಗಳನ್ನ ನಮಗೆ ನೀಡಬೇಕಿತ್ತು. ಆದರೆ, ಈವರೆಗೆ ಕೊಟ್ಟಿರೋದು ಕೇವಲ 116 ಬೆಡ್ಗಳು ಮಾತ್ರ. ಹಾಗಾಗಿ ಸಮಸ್ಯೆ ಆಗುತ್ತಿರೋದೇ ಅಲ್ಲಿ ಎಂದು ಸಚಿವ ಕೆ.ಸುಧಾಕರ್ ಹೇಳಿದ್ದಾರೆ. ಜೊತೆಗೆ, ಈ ಬಗ್ಗೆ ಸಚಿವ R.ಅಶೋಕ್ ಮತ್ತು ಶಾಸಕ SR ವಿಶ್ವನಾಥ್ ನಾಳೆಯಿಂದಲೇ ಪರಿಶೀಲನೆ ಮಾಡುತ್ತಾರೆ. ಖಾಸಗಿ ಆಸ್ಪತ್ರೆಗಳಿಂದ ಬೆಡ್ಗಳನ್ನ ಪಡೆದೇ ತೀರುತ್ತೇವೆ ಎಂದು ಹೇಳಿದರು. ಜೊತೆಗೆ ಬೆಡ್ ಇದ್ದೂ ಇಲ್ಲ ಅಂತಾ ಹೇಳುತ್ತಿರುವ ಆಸ್ಪತ್ರೆಗಳ ವಿರುದ್ಧ ಕಾನೂನು ಕ್ರಮ ಸಹ ಜರುಗಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
Published On - 6:02 pm, Sun, 5 July 20