ಗಂಡ, ಹೆಂಡತಿ ನಡುವೆ ಅಸಮಾಧಾನ ಇರುತ್ತದೆ, ಅಂಥಾದ್ರಲ್ಲಿ ದೊಡ್ಡ ಪಕ್ಷದಲ್ಲಿ ಅಸಮಾಧಾನ ಇರೋದಿಲ್ವಾ? – ಡಾ.ಕೆ.ಸುಧಾಕರ್

| Updated By: sandhya thejappa

Updated on: Jun 13, 2021 | 12:29 PM

ಚಾಮರಾಜಪೇಟೆ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸುಧಾಕರ್, ನಾನು ಕಾಂಗ್ರೆಸ್​ನಲ್ಲಿದ್ದಾಗ ವರುಣಾ ಕ್ಷೇತ್ರ ಬಿಡಬೇಡಿ ಎಂದಿದ್ದೆ. ಸಿದ್ದರಾಮಯ್ಯ ನನ್ನ ಮಾತನ್ನು ಕೇಳಲಿಲ್ಲ. ಅವರು ಚಾಮರಾಜಪೇಟೆಗೆ ಹೋದ್ರೆ ನಾನು ಹೇಗೆ ಸ್ವಾಗತಿಸಲಿ. ಅದು ಸಿದ್ದರಾಮಯ್ಯ ತೀರ್ಮಾನ, ಅವರ ಪಕ್ಷದ ತೀರ್ಮಾನ.

ಗಂಡ, ಹೆಂಡತಿ ನಡುವೆ ಅಸಮಾಧಾನ ಇರುತ್ತದೆ, ಅಂಥಾದ್ರಲ್ಲಿ ದೊಡ್ಡ ಪಕ್ಷದಲ್ಲಿ ಅಸಮಾಧಾನ ಇರೋದಿಲ್ವಾ? - ಡಾ.ಕೆ.ಸುಧಾಕರ್
ಕೆ. ಸುಧಾಕರ್​
Follow us on

ಬೆಂಗಳೂರು: ಮುಂದಿನ ವಾರ ರಾಜ್ಯಕ್ಕೆ ಅರುಣ್ ಸಿಂಗ್ ಬರುತ್ತಿದ್ದಾರೆ. ಅವರ ಎಲ್ಲ ಗೊಂದಲಗಳಿಗೆ ಇತಿಶ್ರೀ ಹಾಡ್ತಾರೆ ಎಂದು ಮಾಹಿತಿ ನೀಡಿದ ಸಚಿವ ಡಾ.ಕೆ.ಸುಧಾಕರ್, ಗಂಡ- ಹೆಂಡತಿ ನಡುವೆ ಅಸಮಾಧಾನ ಇರುತ್ತೆ. ಅಂಥಾದ್ರಲ್ಲಿ ದೊಡ್ಡ ಪಕ್ಷದಲ್ಲಿ ಅಸಮಾಧಾನ ಇರೋದಿಲ್ವಾ? ಎಂದು ಪ್ರಶ್ನಿಸಿದ್ದಾರೆ. ಅಸಮಾಧಾನ ಇರುವವರ ಜೊತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಚರ್ಚೆ ಮಾಡುತ್ತಾರೆ. ಚರ್ಚೆ ಮಾಡಿ ಎಲ್ಲ ಗೊಂದಲಗಳನ್ನು ಬಗೆಹರಿಸುತ್ತಾರೆ ಎಂದು ತಿಳಿಸಿದ್ದಾರೆ.

ಯಡಿಯೂರಪ್ಪ ಮುಂದಿನ 2 ವರ್ಷ ಸಿಎಂ ಆಗಿರುತ್ತಾರೆ. ಅರುಣ್ ಸಿಂಗ್ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಎಲ್ಲ ಹಿರಿಯ ನಾಯಕರು ಇದನ್ನೇ ಹೇಳಿದ್ದಾರೆ. ಹೀಗಾಗಿ ನಾಯಕತ್ವದ ಬಗ್ಗೆ ಚರ್ಚೆ ಮಾಡೋದು ಅನಗತ್ಯ ಎಂದು ಆರೋಗ್ಯ ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಚಾಮರಾಜಪೇಟೆ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸುಧಾಕರ್, ನಾನು ಕಾಂಗ್ರೆಸ್​ನಲ್ಲಿದ್ದಾಗ ವರುಣಾ ಕ್ಷೇತ್ರ ಬಿಡಬೇಡಿ ಎಂದಿದ್ದೆ. ಸಿದ್ದರಾಮಯ್ಯ ನನ್ನ ಮಾತನ್ನು ಕೇಳಲಿಲ್ಲ. ಅವರು ಚಾಮರಾಜಪೇಟೆಗೆ ಹೋದ್ರೆ ನಾನು ಹೇಗೆ ಸ್ವಾಗತಿಸಲಿ. ಅದು ಸಿದ್ದರಾಮಯ್ಯ ತೀರ್ಮಾನ, ಅವರ ಪಕ್ಷದ ತೀರ್ಮಾನ. ಅವರು ಎಲ್ಲಿ ಬೇಕಾದರೂ ಸ್ಪರ್ಧಿಸಲಿ ಎಂದು ಹೇಳಿದ್ದಾರೆ.

ನಂತರ ಮಾತನಾಡಿದ ಅವರು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯಗೆ ಹಂಗಾಮಿ ವಿಸಿ ನೇಮಕಾತಿ ವಿಚಾರದ ಬಗ್ಗೆ ಎರಡು ತಿಂಗಳ ಹಿಂದೆ ರಾಜ್ಯಪಾಲರಿಗೆ ಪತ್ರ ಬರೆದಿದ್ದೆ. ಕೊವಿಡ್ ಇದ್ದ ಕಾರಣ ಬಹುಶಃ ಅವರು ಚರ್ಚೆಗೆ ಸಮಯ ನೀಡಿರಲಿಲ್ಲ. ಈಗ ಖಾಸಗಿ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿದ್ದಾರೆ. ಇಲ್ಲಿಯವರೆಗೆ ಖಾಸಗಿ ವ್ಯಕ್ತಿಗಳನ್ನು ನೇಮಕ ಮಾಡಿರಲಿಲ್ಲ. ಈ ಬಗ್ಗೆ ರಾಜ್ಯಪಾಲರ ಜೊತೆ ಚರ್ಚೆ ಮಾಡುತ್ತೇನೆ. ಮುಖ್ಯಮಂತ್ರಿಗಳ ಜೊತೆ ಕೂಡ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಈವರೆಗೂ 1.68 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲೇ ಲಸಿಕೆ ವಿತರಣೆಯಲ್ಲಿ ನಾವು 6ನೇ ಸ್ಥಾನದಲ್ಲಿದ್ದೇವೆ. ರಾಜ್ಯಕ್ಕೆ ಮೂರು ಲಕ್ಷ ಡೋಸ್ ಲಸಿಕೆ ನಿನ್ನೆ (ಜೂನ್ 12) ಬಂದಿದೆ. ಸದ್ಯ 3 ಕೋಟಿ ಲಸಿಕೆಗೆ ನೀಡಿದ್ದ ಆರ್ಡರ್ ರದ್ದು ಮಾಡ್ತೇವೆ. ಲಸಿಕೆ ಕಂಪನಿಗಳಿಗೆ ನೀಡಿದ್ದ ಹಣ ವಾಪಸ್ ಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ

‘ದೇಶದಲ್ಲಿ ಕೊವಿಡ್ ಸಾವುಗಳ ಸಂಖ್ಯೆ ಅಧಿಕೃತ ಸಂಖ್ಯೆಗಿಂತ ಏಳು ಪಟ್ಟು ಹೆಚ್ಚಾಗಿರಬಹುದು’; ವರದಿ ತಳ್ಳಿದ ಭಾರತ

ಲಾಕ್​ಡೌನ್​ನಿಂದಾಗಿ ಭೂಮಿ ಪಾಲಾದ ನೇರಳೆ ಹಾಗೂ ಮಾವು ಫಸಲು; ಬೀದರ್ ಜಿಲ್ಲೆಯ ರೈತರಲ್ಲಿ ಹೆಚ್ಚಿದ ಆತಂಕ

Sudhakar said Arun Singh will discuss and resolve the issue with those who are upset

Published On - 12:23 pm, Sun, 13 June 21