ರಾಜಕೀಯ ಬದ್ಧವೈರಿ ಕುಮಾರಸ್ವಾಮಿಗೆ ಅಭಿನಂದನೆ ತಿಳಿಸಿದ ಸುಮಲತಾ, ಕಾಂಗ್ರೆಸ್​ ಗ್ಯಾರಂಟಿಗಳಿಗೆ ಟಾಂಗ್

|

Updated on: Jun 05, 2024 | 9:48 PM

ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್ ಹಾಗೂ ಹಾಲಿ ಸಂಸದ ಎಚ್​ಡಿ ಕುಮಾರಸ್ವಾಮಿ ರಾಜಕೀಯ ಬದ್ಧವೈರಿಗಳು. ಮಂಡ್ಯ ರಾಜಕಾರಣದಲ್ಲಿ ಇವರಿಬ್ಬರ ನಡುವೆ ಏನೆಲ್ಲಾ ಬೆಳವಣಿಗೆಗಳು ಆಯ್ತು ಎನ್ನುವುದು ಎಲ್ಲರಿಗೂ ಗೊತ್ತಿರವ ವಿಚಾರವೇ. ಆದ್ರೆ, ಇದೀಗ ಅಚ್ಚರಿ ಎಂಬಂತೆ ಸುಮಲತಾ ಅಂಬರೀಶ್ ಅವರು ಎಚ್​ಡಿ ಕುಮಾರಸ್ವಾಮಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಗ್ಯಾರಂಟಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ರಾಜಕೀಯ ಬದ್ಧವೈರಿ ಕುಮಾರಸ್ವಾಮಿಗೆ ಅಭಿನಂದನೆ ತಿಳಿಸಿದ ಸುಮಲತಾ, ಕಾಂಗ್ರೆಸ್​ ಗ್ಯಾರಂಟಿಗಳಿಗೆ ಟಾಂಗ್
Follow us on

ಬೆಂಗಳೂರು, (ಜೂನ್ 05): ಕಳೆದ ಲೋಕಸಭಾ ಚುನಾವಣೆ ವೇಳೆ ಏಟು-ಎದಿರೇಟುಗಳ ಮೂಲಕ ಗಮನ ಸೆಳೆದಿದ್ದ ಸುಮಲತಾ ಅಂಬರೀಶ್​ (Sumalatha Ambareesh ) ಹಾಗೂ ಎಚ್​​ಡಿ ಕುಮಾರಸ್ವಾಮಿ(HD Kumaraswamy) ನಡುವೆ ಸ್ನೇಹ ಸಾಧ್ಯವೇ? ಇಂಥದ್ದೊಂದು ಪ್ರಶ್ನೆ ಸದ್ಯ ಜೆಡಿಎಸ್​-ಬಿಜೆಪಿ ಮೈತ್ರಿ ಪಕ್ಷಗಳ ಮುಖಂಡರಲ್ಲಿ ಮೂಡಿದೆ. ಹೌದು….ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕುಮಾರಸ್ವಾಮಿಗೆ ಬಿಟ್ಟು ಕೊಟ್ಟಿದ್ದು, ಇದೀಗ ಎಚ್​ಡಿಕೆ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಕುಮಾರಸ್ವಾಮಿಗೆ ಅಭಿನಂದನೆಯಲ್ಲೇ ಕಾಂಗ್ರೆಸ್​ನ ಗ್ಯಾರಂಟಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳು ಅಲ್ಲ, ಮಿತ್ರರೂ ಅಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಮಾಜಿ ಸಂಸದೆ ಸುಮಲತಾ ಅಂಬರೀಶ್, ಮತಗಳು ಆಮಿಷ, ಮಾರಾಟಕ್ಕೆ ಇಲ್ಲ ಎಂದು ತೋರಿಸಿದ್ದಾರೆ. ಮತ ಮಾರಾಟಕ್ಕಿಲ್ಲ ಎಂದು ಮಂಡ್ಯದ ಜನತೆ ತೋರಿಸಿದ್ದಾರೆ. ಪುಕ್ಸಟ್ಟೆ ಭಾಗ್ಯಗಳ ಮೂಲಕ ಜನರನ್ನು ವಂಚಿಸಲು ಆಗಲ್ಲ. ಮಂಡ್ಯ ಜನತೆಗೆ ಮೋಸ ಮಾಡಲು ಆಗಲ್ಲವೆಂದು ಸಾಬೀತಾಗಿದೆ. ಆದ್ದರಿಂದ ಮಂಡ್ಯ ಜಿಲ್ಲೆಯ ಜನರಿಗೂ ಸಹ ಅಭಿನಂದನೆ. ಮೋದಿ ನಾಯಕತ್ವದಲ್ಲಿ ಕೆಲಸ ಮಾಡಲು ಆಯ್ಕೆಯಾದ ಮಂಡ್ಯದ ನೂತನ ಸಂಸದ ಕುಮಾರಸ್ವಾಮಿ ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಬರೆದುಕೊಂಡು ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: 8 ಕ್ಷೇತ್ರಗಳಲ್ಲಿ 7 ಶಾಸಕರಿದ್ದರೂ ಆಗ್ಲಿಲ್ಲ ವರ್ಕೌಟ್​: ಮಂಡ್ಯದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣಗಳು

ಕಳೆದ ಲೋಕಸಭಾ ಚುನಾವಣೆ ವೇಳೆ ಅಂಬರೀಶ್ ಸಾವಿನ ವಿಷಯ ಸೇರಿದಂತೆ ವೈಯಕ್ತಿ ವಿಚಾರಗಳನ್ನೆಲ್ಲಾ ತೆಗೆದು ಕುಮಾರಸ್ವಾಮಿ ಅವರು ಸುಮಲತಾರನ್ನು ಜರಿದಿದ್ದರು. ಇದಕ್ಕೆ ಸುಮಲತಾ ಹಾಗೂ ಅವರ ಬೆಂಬಲಿಗರು ಕೂಡ ತಿರುಗೇಟು ನೀಡಿದ್ದರು. ಅಲ್ಲದೇ ಸುಮಲತಾ ಅಂಬರೀಶ್ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕವೂ ಇವರಿಬ್ಬರ ನಡುವಿನ ರಾಜಕೀಯ ಕಿತ್ತಾಟ ಮುಂದುವರೆದಿತ್ತು. ಆದ್ರೆ, ಇದೀಗ ಪರಿಸ್ಥಿತಿ ಬದಲಾಗಿದ್ದು, ಕುಮಾರಸ್ವಾಮಿ ಹಾಗೂ ಸುಮಲತಾ ನಡುವೆ ದ್ವೇಷ ಬಿಟ್ಟು ಸ್ನೇಹ ಶುರುವಾಗಿದೆ

ಇದಕ್ಕೆ ಪೂರಕವೆಂಬಂತೆ ಸುಮಲತಾ ಅಂಬರೀಶ್ ಅವರು ಮಂಡ್ಯ ಕ್ಷೇತ್ರವನ್ನು ಬದ್ಧವೈರಿ ಕುಮಾರಸ್ವಾಮಿ ಅವರಿಗೆ ತ್ಯಾಗ ಮಾಡಿದ್ದು, ಬಳಿಕ ಕುಮಾರಸ್ವಾಮಿ ಅವರು ಸುಮಲತಾ ಅಂಬರೀಶ್ ಅವರ ನಿವಾಸಕ್ಕೆ ಭೇಟಿ ನೀಡಿ ಬೆಂಬಲ ಕೇಳಿದ್ದು, ಅಲ್ಲದೇ ಅವರ ಬಗ್ಗೆ ಸಾಫ್ಟ್ ಕಾರ್ನ್​ ಆಗಿ ಮಾತನಾಡಿದ್ದು, ಇದೀಗ ವಾಪಸ್ ಸುಮಲತಾ ಕುಮಾರಸ್ವಾಮಿಗೆ ಅಭಿನಂದನೆ ತಿಳಿಸಿದ್ದಾರೆ.

ಅಲ್ಲದೇ ಕಳೆದ ಲೋಕಸಭಾ ಚುನಾವಣೆ ವೇಳೆ ಬೆಂಬಲಿಸಿದ್ದ ಕಾಂಗ್ರೆಸ್​ ವಿರುದ್ಧವೇ ತಿರುಗಿಬಿದ್ದಿದ್ದು,. ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಗೆ ಟಾಂಗ್ ಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:38 pm, Wed, 5 June 24