ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಮದ್ಯದ ಬಾಟಲಿ ದಾಳಿ; ಅವರ ಮಾತಿಗೆ ಹೆದರಿಲ್ಲ ಅಂದ್ರೆ ಇಂತಹ ವರ್ತನೆ ತೋರಿಸುತ್ತಾರೆ ಎಂದ ಸುಮಲತಾ

| Updated By: ಆಯೇಷಾ ಬಾನು

Updated on: Jul 13, 2021 | 2:37 PM

ಬೆಂಗಳೂರಲ್ಲಿ ಮಾತನಾಡಿದ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್, ಇದು ಈ ಹಿಂದೆಯೂ ನಡೆದಿತ್ತು. ನಟ ದರ್ಶನ್ ಮನೆ ಮೇಲೂ ಹೀಗೆ ದಾಳಿ ಮಾಡಲಾಗಿತ್ತು. ಅವರ ಮಾತಿಗೆ ಹೆದರಿಲ್ಲ ಅಂದ್ರೆ ಇಂತಹ ವರ್ತನೆ ಇರುತ್ತೆ. ಈ ರೀತಿ ಮಾಡುವುದರಿಂದ ನನಗೆ ಮತ್ತಷ್ಟು ಶಕ್ತಿ ಬರುತ್ತದೆ. ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲವೆಂದರು.

ರಾಕ್​ಲೈನ್ ವೆಂಕಟೇಶ್ ಮನೆ ಮೇಲೆ ಮದ್ಯದ ಬಾಟಲಿ ದಾಳಿ; ಅವರ ಮಾತಿಗೆ ಹೆದರಿಲ್ಲ ಅಂದ್ರೆ ಇಂತಹ ವರ್ತನೆ ತೋರಿಸುತ್ತಾರೆ ಎಂದ ಸುಮಲತಾ
ಸುಮಲತಾ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಸುಮಲತಾ ಪರ ಬೆನ್ನಿಗೆ ನಿಂತಿದ್ದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಮನೆ ಮೇಲೆ ಕೆಲ ಕಿಡಿಗೇಡಿಗಳು ಮದ್ಯದ ಬಾಟಲಿ ಎಸೆದು ದಾಳಿ ಮಾಡಿದ್ದರು. ಈ ಘಟನೆ ಬಗ್ಗೆ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಇಂಥಾ ಕೃತ್ಯ ನಡೆದಿತ್ತು ಎಂದರು.

ಬೆಂಗಳೂರಲ್ಲಿ ಮಾತನಾಡಿದ ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಶ್, ಇದು ಈ ಹಿಂದೆಯೂ ನಡೆದಿತ್ತು. ನಟ ದರ್ಶನ್ ಮನೆ ಮೇಲೂ ಹೀಗೆ ದಾಳಿ ಮಾಡಲಾಗಿತ್ತು. ಅವರ ಮಾತಿಗೆ ಹೆದರಿಲ್ಲ ಅಂದ್ರೆ ಇಂತಹ ವರ್ತನೆ ಇರುತ್ತೆ. ಈ ರೀತಿ ಮಾಡುವುದರಿಂದ ನನಗೆ ಮತ್ತಷ್ಟು ಶಕ್ತಿ ಬರುತ್ತದೆ. ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲವೆಂದರು.

ನಾಳೆ ಬೇಬಿಬೆಟ್ಟ, ಕೆಆರ್ಎಸ್ ಜಲಾಶಯಕ್ಕೆ ಭೇಟಿ ನೀಡುವೆ. ಕೆಆರ್ಎಸ್ನಲ್ಲಿ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸುವೆ. ಗಣಿ & ಭೂವಿಜ್ಞಾನ ಇಲಾಖೆ ಸಚಿವರ ಜತೆ ಮಾತಾಡಿದ್ದೇನೆ. ಈ ವಾರದಲ್ಲಿ ಮಂಡ್ಯ ಜಿಲ್ಲೆಗೆ ಭೇಟಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವುದಾಗಿ ಗಣಿ ಮತ್ತು ಭೂವಿಜ್ಞಾನ ಸಚಿವ ನಿರಾಣಿ ಭರವಸೆ ನೀಡಿದ್ದಾರೆ ಎಂದರು.

ಕೆಆರ್ಎಸ್ ಡ್ಯಾಂ ಬಿರುಕು; ಸುಮಲತಾ ಹೆಚ್.ಡಿ.ಕುಮಾರಸ್ವಾಮಿ ನಡುವೆ ಸಮರ
ಮಂಡ್ಯ ಜನರ ಜೀವನಾಡಿ ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅಂತಾ ಮಂಡ್ಯ ಸಂಸದೆ ಸುಮಲತಾ ಆರೋಪಿಸಿದ್ರು.. ಇದಕ್ಕೆ ತಿರುಗೇಟು ನೀಡೋ ಭರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೀಡಿದ ಹೇಳಿಕೆ ಇಡೀ ಘಟನೆಗೆ ಸ್ಫೋಟಕ ಟ್ವಿಸ್ಟ್ ನೀಡಿತ್ತು. ಅಲ್ಲಿಂದ ಸುಮಲತಾ ದಳಪತಿಗಳ ವಿರುದ್ಧ ಅಕ್ಷರಶಃ ಕೆಂಡ ಕಾರ್ತಿದ್ರು. ಆರಂಭದಲ್ಲಿ ಅಬ್ಬರಿಸಿದ್ದ ತೆನೆ ಹೊತ್ತ ನಾಯಕರು. ಕ್ರಮೇಣ ಸೈಲೆಂಟ್ ಮೋಡ್ಗೆ ಜಾರಿದ್ರು. ಆದ್ರೆ, ಮಂಡ್ಯ ಸಂಸದೆ ಸುಮಲತಾ ಮಾತ್ರ ಸುಮ್ಮನಾಗೋ ಲಕ್ಷಣಗಳೇ ಕಂಡು ಬರ್ತಿಲ್ಲ.

ಗಣಿ ಸಚಿವರನ್ನ ಭೇಟಿಯಾಗಿ ದೂರು ನೀಡಿದ ಸಂಸದೆ
ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೀತಿದೆ. ಕೆಆರ್ಎಸ್ ಡ್ಯಾಮ್ಗೆ ಡ್ಯಾಮೇಜ್ ಆಗ್ತಿದೆ ಅಂತಾ ಸುಮಲತಾ ದೊಡ್ಡ ಬಾಂಬ್ ಬ್ಲಾಸ್ಟ್ ಮಾಡಿದ್ರು. ಜೊತೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಅವರ ನಡುವೆ ವಾಕ್ಸಮರ ನಡೆದಿತ್ತು. ನಿನ್ನೆ ಇದರ ಮುಂದುವರಿದ ಭಾಗವಾಗಿ ಸುಮಲತಾ ಅಂಬರೀಶ್, ಗಣಿ ಸಚಿವ ಮುರಗೇಶ್ ನಿರಾಣಿಯನ್ನ ಬೆಂಗಳೂರಿನಲ್ಲಿ ಭೇಟಿಯಾಗಿ ದೂರು ನೀಡಿದ್ರು. ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಸಾವಿರಾರು ಕೋಟಿ ರಾಜಧನ ಸರ್ಕಾರಕ್ಕೆ ಬರುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಿ ಅಂತಾ ಮನವಿ ಮಾಡಿದ್ರು.

ಸಚಿವ ಮುರಗೇಶ್ ನಿರಾಣಿ ಮಾತನಾಡಿ, ಮಂಡ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಅಕ್ರಮ ಗಣಿಗಾರಿಕೆ ನಡೀತಿಲ್ಲ. ಸುಮಾರು 38 ಅಕ್ರಮ ಗಣಿಗಳನ್ನ ಮುಚ್ಚಿಸಿದ್ದೇವೆ. ಆದ್ರು ಈಗ ಸಂಸದರು ಆರೋಪ ಮಾಡಿದ್ದಾರೆ. ಇಲಾಖೆ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಮಾಡ್ತಿಲ್ಲ ಅಂತ ರಿಪೋರ್ಟ್ ಕೊಟ್ಡಿದ್ದಾರೆ. ಆದ್ರೂ ಆ ರಿಪೋರ್ಟ್ ನಾನು ನಂಬಲ್ಲ. ಈ ವಾರ ನಾನೇ ಸ್ಥಳ ಪರಿಶೀಲನೆ ಮಾಡ್ತೀನಿ. ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೆ ಕಾನೂನಿ ಕ್ರಮ ತೆಗೆದುಕೊಳ್ತೀನಿ. ಬೇಬಿ ಬೆಟ್ಟದ ಸುತ್ತಮುತ್ತ ಟ್ರಯಲ್ ಬ್ಲಾಸ್ಟಿಂಗ್ ಟೆಸ್ಟ್ ಶೀಘ್ರವೇ ಮಾಡ್ತೀವಿ. ನುರಿತ ವಿಜ್ಞಾನಿಗಳು ಇದರ ಟೆಸ್ಟ್ ಮಾಡ್ತಾರೆ. ಟೆಸ್ಟ್ ರಿಪೋರ್ಟ್ ಬಂದ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಅಂತಾ ಹೇಳಿದ್ರು.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಸಂಸದೆ ಸುಮಲತಾ, ಇಂದು ಮತ್ತು ನಾಳೆ ಮಂಡ್ಯ ಪ್ರವಾಸ ಮಾಡಲಿದ್ದಾರೆ. ಜೊತೆಗೆ ಕೆಆರ್ಎಸ್ ಭೇಟಿಗೂ ಮುಹೂರ್ತ ಫಿಕ್ಸ್ ಆಗಿದೆ. ಇಂದು ಮಂಡ್ಯದ ಮನ್ಮುಲ್ನಲ್ಲಿ ನಡೆದಿರೋ ಹಗರಣವನ್ನ ಸಿಬಿಐ ವಹಿಸುವಂತೆ ಒತ್ತಾಯಿಸಿ ರೈತರು ಮನ್ ಮುಲ್ ಬಳಿ ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಲಿರೋ ಸಂಸದೆ ಸುಮಲತಾ, ರೈತರಿಂದ ಮನವಿ ಸ್ವೀಕರಿಸಲಿದ್ದಾರೆ. ನಾಳೆ ಕೆಆರ್ಎಸ್ ಡ್ಯಾಂ ಪರಿಶೀಲಿಸಿ, ಬಳಿಕ ಬೇಬಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ.

ಸಂಸದೆ ಸುಮಲತಾ ಅಂಬರೀಶ್ ಬೇಬಿ ಬೆಟ್ಟಕ್ಕೆ ಭೇಟಿ ನೀಡ್ತಿರೊ ವಿಚಾರದ ಬಗ್ಗೆ ಮಾತನಾಡಿರೋ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು, ಸುಮಲತಾ ಭೇಟಿ ವೇಳೆ ಎಲ್ಲ ರೀತಿಯ ಸಹಕಾರ ನೀಡಲು ಸೂಚನೆ ನೀಡಲಾಗಿದೆ. ಸಂಸದರ ಭೇಟಿ ವೇಳೆ ನನ್ನನ್ನೂ ಕರೆದರೆ ನಾನೂ ಹೋಗ್ತೀನಿ ಅಂತಾ ಹೇಳಿದ್ರು.

ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸಂಸದೆ ಸುಮಲತಾ, ಕೇವಲ ಶ್ರೀರಂಗಪಟ್ಟಣ ತಾಲೂಕಿನ ಬಗ್ಗೆ ಮಾತ್ರ ಮಾತನಾಡ್ತಿದ್ದಾರೆ. ನಮ್ಮ ತಾಲೂಕಿನಲ್ಲಿ ಅತಿ ಹೆಚ್ಚು ಅಕ್ರಮ ಗಣಿಗಾರಿಕೆ ನಡೀತಿದೆ. ಇಲ್ಲಿ ಹೋರಾಟ ಮಾಡಲು ಬಂದರೆ ನಾನು ಸಹ ನಿಮ್ಮ ಜೊತೆ ಇರ್ತೀನಿ ಅಂತಾ ನಾಗಮಂಗಲ ಶಾಸಕ ಸುರೇಶ್ ಗೌಡ ವ್ಯಂಗ್ಯವಾಡಿದ್ದಾರೆ. ಈ ಎಲ್ಲಾ ಬೆವಣಿಗೆಗಳ ನಡುವೆ ಜೆಡಿಎಸ್ ನಾಯಕರು ಸಂಸದೆ ವಿರುದ್ಧ ಮಾತಾಡೋದನ್ನ ಕಡಿಮೆ ಮಾಡಿದ್ದಾರೆ. ಇದರ ನಡುವೆ ಮಂಡ್ಯ ಜಿಲ್ಲೆಗೆ ಸಂಸದೆ ಸುಮಲತಾ ಭೇಟಿ ನೀಡ್ತಿದ್ದು.. ಇದು ಯಾವ ತಿರುವು ತೆಗೆದುಕೊಳ್ಳುತ್ತೆ ಅಂತಾ ಕಾದು ನೋಡಬೇಕಿದೆ.

ಇದನ್ನೂ ಓದಿ: ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜೊತೆಗಿನ ಫೋಟೋ ವೈರಲ್ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದೇನು?