Summer: ಶಿವರಾತ್ರಿ ಮುಗಿಯುತ್ತಿದ್ದಂತೆ ಶಿವ ಶಿವ ಎನ್ನುವಷ್ಟು ಬಿಸಿಲು, ಫೆಬ್ರವರಿ 24ರಿಂದಲೇ ಬೇಸಿಗೆ ಆರಂಭ- ಹವಾಮಾನ ಇಲಾಖೆ

ಬದಲಾದ ಗಾಳಿ ಬೀಸುವ ದಿಕ್ಕು ಮತ್ತು ವಾಯುಭಾರ ಕುಸಿತದಿಂದ ಈ ಬಾರಿ ಫೆಬ್ರವರಿ 24 ರಿಂದಲೇ ಬೇಸಿಗೆ ಆರಂಭವಾಗಲಿದೆ ಎಂದು ಹವಾಮನಾ ಇಲಾಖೆ ಹೇಳಿದೆ.

Summer: ಶಿವರಾತ್ರಿ ಮುಗಿಯುತ್ತಿದ್ದಂತೆ ಶಿವ ಶಿವ ಎನ್ನುವಷ್ಟು ಬಿಸಿಲು, ಫೆಬ್ರವರಿ 24ರಿಂದಲೇ ಬೇಸಿಗೆ ಆರಂಭ- ಹವಾಮಾನ ಇಲಾಖೆ
ಸಾಂಧರ್ಬಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:Feb 22, 2023 | 12:43 PM

ಬೆಂಗಳೂರು: ಮಹಾಶಿವರಾತ್ರಿ (Mahashivaratri) ಮುಗಿಯುತ್ತಿದ್ದಂತೆ ಬೇಸಿಗೆ (Summer) ಕಾಲ ಸಣ್ಣದಾಗಿ ಪ್ರಾರಂಭವಾಗುತ್ತದೆ. ಶಿವರಾತ್ರಿಗೆ ಶಿವ ಶಿವ ಎನ್ನುವಷ್ಟು ಬಿಸಿಲಿನ ತಾಪಮಾನ ಏರುತ್ತಾ ಸಾಗುತ್ತದೆ. ಇದು ಪ್ರತಿವರ್ಷ ಸಾಮನ್ಯವಾಗಿ ಮಾರ್ಚ್​​ನಲ್ಲಿ (March) ಪ್ರಾರಂಭವಾಗುತ್ತಿತ್ತು. ಆದರೆ ಈ ಬಾರಿ ಫೆಬ್ರವರಿಯಲ್ಲೇ (February) ಪ್ರಾರಂಭವಾಗಿದೆಯೇ ಎಂದು ಅನ್ನಿಸುತ್ತಿದ್ದು, ನೆತ್ತಿಯ ಮೇಲೆ ಸೂರ್ಯ ಬರುವುದೆ ತಡ, ಬಿಸಿಲಿನ ಬೇಗೆಗೆ ಜನ ಹೈರಾಣಾಗುತ್ತಿದ್ದಾರೆ. ಈ ಮಧ್ಯೆ ಭಾರತೀಯ ಹವಾಮನಾ ಇಲಾಖೆ (India Meteorological Department (IMD)) ಮುನ್ಸೂಚನೆ ನೀಡಿದ್ದು, ಪ್ರತಿವರ್ಷ, ಬೇಸಿಗೆ ಮತ್ತು ಬಿಸಿ ಗಾಳಿ ಮಾರ್ಚ 1 ರಿಂದ ಪ್ರಾರಂಭವಾಗುತ್ತದೆ. ಆದರೆ ಈ ಬಾರಿ ಫೆಬ್ರವರಿ 24 ರಿಂದಲೇ ಆರಂಭವಾಗಲಿದೆ ಎಂದು ಹೇಳಿದೆ. ಉತ್ತರ ಮತ್ತು ಉತ್ತರ ವಾಯುವ್ಯ ಮಾರುತಗಳು ಬೀಸಲು ಪ್ರಾಂಭವಾಗಿವ ಹಿನ್ನೆಲೆ ಬಿಸಿಗಾಳಿ (Dry Weather) ಮತ್ತು ಬೇಸಿಗೆಯ ಬೇಗನೆ ಆರಂಭವಾಗಲಿದೆ ಎಂದು ಹೇಳಿದೆ.

ಈಗಾಗಲೇ ರಾಜ್ಯದಲ್ಲಿ ಅತಿಯಾದ ತಾಪಮಾನ ದಾಖಲಾಗಿದೆ. ಈ ವಿಚಾರವಾಗಿ ಫೆಬ್ರವರಿ ತಿಂಗಳಲ್ಲೇ ಬೆಂಗಳೂರು ನಗರದಲ್ಲಿ 30-31 ಡಿಗ್ರಿ ಸೆಲ್ಸಿಯಸ್​​ ಬಿಸಿಲಿನ ತಾಪಮಾನ ದಾಖಲಾಗಿದೆ. ಹೀಗಾಗಿ ಸಿಲಿಕಾನ್​ ಸಿಟಿ ಜನರು ಅಧಿಕ ತಾಪಮಾನದಿಂದ ಬಳಲುತ್ತಿದ್ದಾರೆ. ಮುಂದಿನ ದಿನಗಳಲ್ಲಿ 20 ರಿಂದ 35 ಡಿಗ್ರಿ ಸೆಲ್ಸಿಯಸ್​ ವರೆಗೆ ತಾಪಮಾನ ದಾಖಲಾಗಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ದಿ ನ್ಯೂ ಇಂಡಿಯನ್​ ಎಕ್ಸಪ್ರೆಸ್​ ವರದಿ ಮಾಡಿದೆ.

ಹವಾಮಾನ ಇಲಾಖೆಯ ಪ್ರಕಾರ, ಬೆಂಗಳೂರಲ್ಲಿ ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ 7 ಮಿಲಿ ಮೀಟರ್​ನಷ್ಟು ಮಳೆಯಾಗುತ್ತಿತ್ತು. ಆದರೆ ಈ ಬಾರಿ ಮಳೆ ಆಗಿಲ್ಲ. ಅಲ್ಲದೆ ಈ ಬಾರಿ ಮಳೆ ಮೋಡಗಳು ಕೂಡ ಉತ್ಪತ್ತಿಯಾಗಿಲ್ಲ. ಮುಂದಿನ 5 ದಿನಗಳಲ್ಲಿ ನಗರದಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಫೆಬ್ರವರಿ ತಿಂಗಳಲ್ಲಿ ಉತ್ತರ ಭಾರತದಲ್ಲಿ ಚಳಿ ಇರುತ್ತಿತ್ತು. ಆದರೆ ಅಲ್ಲಿಯೂ ಕೂಡ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಬೇಸಿಗೆಯ ಮತ್ತು ಬಿಸಿ ಗಾಳಿ ಬೀಸುತ್ತಿರುವ ಅನುಭವಾಗುತ್ತಿದೆ. ಇದಕ್ಕೆ ಕಾರಣ ಬದಲಾದ ಗಾಳಿ ಬೀಸುವ ದಿಕ್ಕು ಮತ್ತು ವಾಯುಭಾರ ಕುಸಿತ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:42 pm, Wed, 22 February 23