ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಗಳಿಗೆ ಬೆಂಬಲ: ರವಾಂಡದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್​

| Updated By: ಗಂಗಾಧರ​ ಬ. ಸಾಬೋಜಿ

Updated on: Nov 28, 2024 | 4:24 PM

ಸಿಬಿಐ ರವಾಂಡಾದಿಂದ ಲಷ್ಕರ್-ಎ-ತೊಯ್ಬಾ ಸದಸ್ಯನಾಗಿದ್ದ ಸಲ್ಮಾನ್ ರೆಹಮಾನ್ ಖಾನ್ ಅನ್ನು ಬಂಧಿಸಿ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಬೆಂಗಳೂರಿನಲ್ಲಿ ಉಗ್ರ ಕೃತ್ಯಗಳಿಗೆ ಸ್ಫೋಟಕ ಸಂಗ್ರಹಿಸುತ್ತಿದ್ದ ಆತನನ್ನು ಎನ್ಐಎ ಮತ್ತು ಸಿಬಿಐ ಜಂಟಿಯಾಗಿ ಪತ್ತೆ ಹಚ್ಚಿ ಬಂಧಿಸಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಟಿ. ನಾಸೀರ್ ಸಂಪರ್ಕದಿಂದಾಗಿ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ.

ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಗಳಿಗೆ ಬೆಂಬಲ: ರವಾಂಡದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್​
ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಗಳಿಗೆ ಬೆಂಬಲ: ರವಾಂಡದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್​
Follow us on

ಬೆಂಗಳೂರು, ನವೆಂಬರ್​ 28: ಬೆಂಗಳೂರಿನಲ್ಲಿ ಉಗ್ರ ಕೃತ್ಯಗಳಿಗೆ ಸ್ಫೋಟಕ ಸಂಗ್ರಹಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಾಂಡದಲ್ಲಿ ತಲೆಮರೆಸಿಕೊಂಡಿದ್ದ ಲಷ್ಕರ್-ಎ-ತೊಯ್ಬಾದ ಸದಸ್ಯನಾಗಿದ್ದ ಸಲ್ಮಾನ್ ರೆಹಮಾನ್ ಖಾನ್ (Salman Rehman Khan)​ ಅನ್ನು ಬಂಧಿಸಿರುವುದಾಗಿ ಸಿಬಿಐ ಮಾಧ್ಯಮ ಪ್ರಕಟಣೆಯ ಮೂಲಕ ಮಾಹಿತಿ ನೀಡಿದೆ. ಜೊತೆಗೆ ಆತನನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ.

ಸಿಬಿಐನ ಜಾಗತಿಕ ಕಾರ್ಯಾಚರಣೆ ಘಟಕ ಮತ್ತು ಎನ್ಐಎ ಸಂಘಟಿತ ಪ್ರಯತ್ನದಿಂದ ಆರೋಪಿಯನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ. ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ಒದಗಿಸಿದ್ದ. ಸ್ಫೋಟಕಗಳನ್ನು ಕ್ರೋಢೀಕರಿಸುವ ಕೆಲಸದಲ್ಲಿ ಸಲ್ಮಾನ್ ರೆಹಮಾನ್ ಖಾನ್ ನಿರತನಾಗಿದ್ದ.

ಇದನ್ನೂ ಓದಿ: ಉಡುಪಿ: ಎನ್​ಕೌಂಟರ್ ನಡೆದ ಪೀತಬೈಲ್​ನಲ್ಲಿ ತೀವ್ರ ಶೋಧ, ಶರಣಾಗತಿಗೆ ನಕ್ಸಲರಿಗೆ ಡಿಸಿಎಂ ಸೂಚನೆ

ಸಲ್ಮಾನ್ ರೆಹಮಾನ್ ಖಾನ್ 2018ರಿಂದ 2022ರವರೆಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಆತನಿಗೆ ಭಯೋತ್ಪಾದಕ ಪ್ರಕರಣಗಳ ಆರೋಪಿ ಟಿ.ನಾಸೀರ್ ಪರಿಚಯವಾಗಿತ್ತು. ಜೈಲಿನಲ್ಲಿ ಸಲ್ಮಾನ್ ರೆಹಮಾನ್ ಖಾನ್ ಸೇರಿದಂತೆ ಕೆಲ ಸಹ ಕೈದಿಗಳನ್ನ ಬ್ರೈನ್ ವಾಶ್ ಮಾಡಿದ್ದ ನಾಸೀರ್​, ರೆಹಮಾನ್​​ನನ್ನು ಭಯೋತ್ಪಾದನೆಯೆಡೆಗೆ ಸೆಳೆದಿದ್ದ.

ರೆಹಮಾನ್ ಶಿಕ್ಷೆ ಮುಗಿಸಿ ಹೊರಬಂದ ಬಳಿಕ ಉಗ್ರ ಚಟುವಟಿಗೆಳಿಗೆ ಸಹಾಯ ಮಾಡುತ್ತಿದ್ದ. ಟಿ.ನಾಸೀರ್ ಅಣತಿಯಂತೆ ಸಹಚರರ ಸಹಾಯದಿಂದ ಬೆಂಗಳೂರಿನಲ್ಲಿ ಉಗ್ರ ಕೃತ್ಯಗಳನ್ನು ಸಂಘಟಿಸಲು ತೊಡಗಿದ್ದ. ಪ್ರಕರಣ ದಾಖಲಾಗುತ್ತಿದ್ದಂತೆ ರೆಹಮಾನ್ ಖಾನ್ ಪರಾರಿಯಾಗಿದ್ದ.

ಇದನ್ನೂ ಓದಿ: ನಕ್ಸಲ್ ವಿಕ್ರಂ ಗೌಡ ಪೊಲೀಸ್ ಬಲೆಗೆ ಬಿದ್ದಿದ್ಹೇಗೆ? ರೋಚಕ ಕಾರ್ಯಾಚರಣೆಯ ರಹಸ್ಯ ಇಲ್ಲಿದೆ

ಪತ್ತೆಗಾಗಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಎನ್ಐಎ ಅಧಿಕಾರಿಗಳು ಸಿಬಿಐಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ರವಾಂಡದಲ್ಲಿ ಉಗ್ರ ಸಲ್ಮಾನ್ ರೆಹಮಾನ್ ಬಂಧಿಸಿ ಇದೀಗ ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:09 pm, Thu, 28 November 24