AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲ ಪಡೆದಿದ್ದ ವ್ಯಕ್ತಿಗೆ ನಗ್ನ ಚಿತ್ರ ಹರಿಬಿಡುವ ಬೆದರಿಕೆ: ಕಿರುಕುಳಕ್ಕೆ ನೊಂದು ಕ್ಯಾಮರಾಮನ್‌ ಆತ್ಮಹತ್ಯೆ

ಬೆಂಗಳೂರು ಉತ್ತರ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ಆ್ಯಪ್‌ ಮೂಲಕ ಸಾಲ ಪಡೆದಿದ್ದ ಖಾಸಗಿ ಚಾನಲ್‌ವೊಂದರಲ್ಲಿ ಕ್ಯಾಮರಾಮನ್​ಗೆ ಕಿರುಕುಳ ಹಾಗೂ ನಗ್ನ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಡೆದಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲ ಪಡೆದಿದ್ದ ವ್ಯಕ್ತಿಗೆ ನಗ್ನ ಚಿತ್ರ ಹರಿಬಿಡುವ ಬೆದರಿಕೆ: ಕಿರುಕುಳಕ್ಕೆ ನೊಂದು ಕ್ಯಾಮರಾಮನ್‌ ಆತ್ಮಹತ್ಯೆ
ಸಾಲ ಪಡೆದಿದ್ದ ವ್ಯಕ್ತಿಗೆ ನಗ್ನ ಚಿತ್ರ ಹರಿಬಿಡುವ ಬೆದರಿಕೆ: ಕಿರುಕುಳಕ್ಕೆ ನೊಂದು ಕ್ಯಾಮರಾಮನ್‌ ಆತ್ಮಹತ್ಯೆ
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ|

Updated on: Nov 28, 2024 | 5:04 PM

Share

ನೆಲಮಂಗಲ, ನವೆಂಬರ್​ 28: ಆ್ಯಪ್‌ ಮೂಲಕ ಸಾಲ ಪಡೆದಿದ್ದ ವ್ಯಕ್ತಿಗೆ ಕರೆ ಮಾಡಿ ನಗ್ನ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ ಹಾಗೂ ಕಿರುಕುಳ ನೀಡಿದ್ದಕ್ಕೆ ಖಾಸಗಿ ಚಾನಲ್‌ವೊಂದರ ಕ್ಯಾಮರಾಮನ್‌ ನೇಣು ಹಾಕಿಕೊಂಡು ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ. ಕಿರಣ್(32) ಮೃತ ಕ್ಯಾಮರಾಮನ್‌. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಕಿರಣ್‌ ಆ್ಯಪ್‌ವೊಂದರ ಮೂಲಕ 2 ಲಕ್ಷ ರೂ. ಸಾಲ ಪಡೆದಿದ್ದರು. ಸಾಲದ ಹಣ ವಾಪಸ್ ನೀಡದಿದ್ದರೆ ನಗ್ನ ಚಿತ್ರ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಅವರ ಕಿರುಕುಳಕ್ಕೆ ನೊಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಹಾಲ್​ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

ಸ್ಪಾ ಕೆಲಸಕ್ಕಿದ್ದ ದೆಹಲಿ ಮೂಲದ ಯುವತಿ ನೇಣಿಗೆ ಶರಣು

ಬೆಂಗಳೂರಿನ ಬಾಗಲಗುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸ್ಪಾ ಕೆಲಸಕ್ಕಿದ್ದ ದೆಹಲಿ ಮೂಲದ ಯುವತಿ ನೇಣಿಗೆ ಶರಣಾಗಿರುವಮತಹ ಘಟನೆ ನಡೆದಿದೆ. ದೆಹಲಿ ವಾತಾವರಣಕ್ಕೆ ಬೇಸತ್ತು ಬೆಂಗಳೂರಿನಲ್ಲಿ ಯುವತಿ ಕೆಲಸಕ್ಕಿದ್ದರು. ಬೆಂಗಳೂರಿನ 8ನೇ ಮೈಲಿಯ ಎಲೆಗೆನ್ಸ್ ಸ್ಪಾದಲ್ಲಿ ಕೆಲಸಕ್ಕೆ ಸೇರಿದ್ದ ಸೋನಿಯಾ(24) ಆತ್ಮಹತ್ಯೆಗೆ ಶರಣಾದ ದೆಹಲಿ ಮೂಲದ ಯುವತಿ. ಆತ್ಮಹತ್ಯೆಗೆ ನಿಖರ ಮಾಹಿತಿ ದೊರೆತಿಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆಗಳಿಗೆ ಬೆಂಬಲ: ರವಾಂಡದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್​

ಕಳೆದ 2 ತಿಂಗಳ ಹಿಂದೆಯಷ್ಟೇ ಸ್ಪಾದಲ್ಲಿ ಕೆಲಸಕ್ಕೆ ಸೇರಿದ್ದರು. ಪ್ರತಿ ತಿಂಗಳೂ 30 ಸಾವಿರ ರೂ. ವೇತನ ಪಡೆಯುತ್ತಿದ್ದರು. ನಿನ್ನೆ ರೂಂನಲ್ಲಿ ಪ್ಯಾನ್​​ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋನಿಯಾ ಮೃತದೇಹವನ್ನು ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಮಗಳ ಮೃತದೇಹ ನೋಡಲು ದೆಹಲಿಯಿಂದ ಪೋಷಕರು ಆಗಮಿಸುತ್ತಿದ್ದಾರೆ. ಸೋನಿಯಾ ಪೋಷಕರು ಬಂದ ಬಳಿಕ ಪೊಲೀಸರು ತನಿಖಾ ಕಾರ್ಯ ನಡೆಸಲಿದ್ದಾರೆ.

ಫಾಲ್ಸ್​ನಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

ಇನ್ನು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದುರ್ಗಾ ಫಾಲ್ಸ್​ನಲ್ಲಿ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲಾಗಿರುವಂತಹ ಘಟನೆ ನಡೆದಿದೆ. ಗ್ಲಾಸನ್ ಜೋಯ್ ಡಾಯಾಸ್ (20) ನೀರು ಪಾಲಾದ ಯುವಕ. ಉಡುಪಿ ಮಿಲಾಗ್ರಿಸ್ ಕಾಲೆಜಿನ ವಿದ್ಯಾರ್ಥಿ.

ಇದನ್ನೂ ಓದಿ: ಕಲಬುರಗಿ: ಪೆಟ್ರೋಲ್‌ ಬಾಂಬ್‌ ಹಾಕಿ ಇಡೀ ಕುಟುಂಬವನ್ನೇ ಸಾಮೂಹಿಕ ಹತ್ಯೆಗೆ ಯತ್ನ

ಗ್ಲಾಸನ್ ಸ್ನೇಹಿತರ ಜೊತೆ ಫಾಲ್ಸ್​ಗೆ ಈಜಲು ಹೋಗಿದ್ದ. ಫಾಲ್ಸ್​​ನಲ್ಲಿ ಈಜಾಡುತ್ತಿದ್ದ ವೇಳೆ ಬೊಂಬೆತಡ್ಕ ಪಾಪುದ ಗುಂಡಿಯಲ್ಲಿ ಆಯತಪ್ಪಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.