AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕವರೆಂಬ ಕಾರಣಕ್ಕೆ ಗಲ್ಲು ಶಿಕ್ಷೆ ವಿಧಿಸಲು ಆಗುವುದಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ರೇಪ್ ಮತ್ತು ಮರ್ಡರ್ ಅಪರಾಧಿಗೆ ಶಿಕ್ಷೆ ಪರಿವರ್ತಿಸಿದೆ. ಮರಣದಂಡನೆಯನ್ನು ಜೀವಾವಧಿಯಾಗಿ ಪರಿವರ್ತಿಸಿದೆ. ಈರಪ್ಪ ಮುರಗಣ್ಣನವರ್ ಪ್ರಕರಣದಲ್ಲಿ ‘ಸುಪ್ರೀಂ’ ಹೀಗೆ ಆದೇಶ ನೀಡಿದೆ.

ಚಿಕ್ಕವರೆಂಬ ಕಾರಣಕ್ಕೆ ಗಲ್ಲು ಶಿಕ್ಷೆ ವಿಧಿಸಲು ಆಗುವುದಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ಸುಪ್ರೀಂಕೋರ್ಟ್​
TV9 Web
| Updated By: ganapathi bhat|

Updated on:Nov 09, 2021 | 8:50 PM

Share

ದೆಹಲಿ: ಕರ್ನಾಟಕದ ಕೇಸ್ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಸಂತ್ರಸ್ತರು ಚಿಕ್ಕವರೆಂಬ ಕಾರಣಕ್ಕೆ ಗಲ್ಲು ಶಿಕ್ಷೆ ವಿಧಿಸಲು ಆಗಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ರೇಪ್ ಮತ್ತು ಮರ್ಡರ್ ಅಪರಾಧಿಗೆ ಶಿಕ್ಷೆ ಪರಿವರ್ತಿಸಿದೆ. ಮರಣದಂಡನೆಯನ್ನು ಜೀವಾವಧಿಯಾಗಿ ಪರಿವರ್ತಿಸಿದೆ. ಈರಪ್ಪ ಮುರಗಣ್ಣನವರ್ ಪ್ರಕರಣದಲ್ಲಿ ‘ಸುಪ್ರೀಂ’ ಹೀಗೆ ಆದೇಶ ನೀಡಿದೆ.

ಖಾನಾಪುರದಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧಿಸಿ ಹೀಗೆ ಆದೇಶ ನೀಡಲಾಗಿದೆ. ಬಾಲಕಿ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ್ದ ಅಪರಾಧಿಗೆ ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಅಪರಾಧಿ ಈರಪ್ಪ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದ. ಗಲ್ಲು ಶಿಕ್ಷೆ ಪರಿವರ್ತಿಸುವಂತೆ ಮೇಲ್ಮನವಿ ಸಲ್ಲಿಸಿದ್ದ. ಇದೀಗ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆ ಪರಿವರ್ತಿಸಿದೆ. ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿದೆ.

ಸಂತ್ರಸ್ತರ ವಯಸ್ಸಿನ ಆಧಾರದಲ್ಲಿ ಗಲ್ಲು ಶಿಕ್ಷೆ ನೀಡಲು ಆಗಲ್ಲ. ಹಿಂದಿನ ‘ಸುಪ್ರೀಂ’ ಆದೇಶಗಳು ವಯಸ್ಸಿನ ಆಧಾರದಲ್ಲಿ ನೀಡಿಲ್ಲ. ಸಂತ್ರಸ್ತರ ವಯಸ್ಸಿನ ಆಧಾರದಲ್ಲಿ ತೀರ್ಪುಗಳನ್ನು ನೀಡಿಲ್ಲ. ಅರ್ಜಿದಾರ ಅಸಹ್ಯಕರ ಅಪರಾಧ ಎಸಗಿರುವ ಬಗ್ಗೆ ಸಂದೇಹವಿಲ್ಲ. ಇದಕ್ಕಾಗಿ ಜೀವಿತಾವಧಿ ಸೆರೆವಾಸವು ಪಶ್ಚಾತ್ತಾಪವಾಗಬಹುದು ಎಂದು ಹೇಳಲಾಗಿದೆ. ನ್ಯಾ.ಎಲ್.ನಾಗೇಶ್ವರ ರಾವ್, ನ್ಯಾ.ಸಂಜೀವ್ ಖನ್ನಾ, ನ್ಯಾ.ಬಿ.ಆರ್.ಗವಾಯಿ ಅವರ ನೇತೃತ್ವದ ಪೀಠದಿಂದ ತೀರ್ಪು ನೀಡಲಾಗಿದೆ.

ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣ; ಎಸ್​ಐಟಿ ತನಿಖೆ ಪ್ರಶ್ನಿಸಿದ್ದ ಯುವತಿ ಅರ್ಜಿ ವಿಚಾರಣೆ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆ ಪ್ರಶ್ನಿಸಿದ್ದ ಯುವತಿ ಅರ್ಜಿ ವಿಚಾರಣೆ ನಡೆಸಲಾಗಿದೆ. ಯುವತಿ ಪರ ‘ಸುಪ್ರೀಂ’ ವಕೀಲೆ‌ ಇಂದಿರಾ ಜೈಸಿಂಗ್ ವಾದ ಮಂಡಿಸಿದ್ದಾರೆ. ದೂರು ನೀಡಿದ ಪೊಲೀಸ್ ಠಾಣೆಯಿಂದ‌ ತನಿಖೆ ನಡೆದಿಲ್ಲ. ಎಸ್ಐಟಿ ನಡೆಸಿರುವ ತನಿಖೆ ಕಾನೂನು ಬಾಹಿರವಾಗಿದೆ. ಎಸ್ಐಟಿ ಮುಖ್ಯಸ್ಥರಿಲ್ಲದೇ ತನಿಖೆ ನಡೆಸಲಾಗಿದೆ. ಎಸ್ಐಟಿ ಮುಖ್ಯಸ್ಥರು ತಮ್ಮ ಅಧಿಕಾರ ಹಸ್ತಾಂತರಿಸುವಂತಿಲ್ಲ. ಹೀಗಾಗಿ SIT ಮುಖ್ಯಸ್ಥರ ಸಹಿಯಿಲ್ಲದ ವರದಿಗೆ ಮೌಲ್ಯವಿಲ್ಲ. ಹೀಗಾಗಿ ಆರೋಪಪಟ್ಟಿ ದಾಖಲಿಸಲು ಅನುಮತಿ ನೀಡಬಾರದು ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ತನಿಖಾಧಿಕಾರಿಯಾಗಿ ಕವಿತಾ ನೇಮಿಸಲಾಗಿದೆ. ಆರೋಪಪಟ್ಟಿ ದಾಖಲಿಸಲು ಅನುಮತಿ ನೀಡಬೇಕು. ಆರೋಪಪಟ್ಟಿಯಲ್ಲಿ ಲೋಪವಿದ್ದರೆ ಮ್ಯಾಜಿಸ್ಟ್ರೇಟ್ ಪರಿಶೀಲಿಸಲಿ ಎಂದು ಎಸ್ಐಟಿ ಪರ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ವಾದ ಮಂಡಿಸಿದ್ದಾರೆ.

ಇದನ್ನೂ ಓದಿ: ಉನ್ನತ ಅಧಿಕಾರಿಗಳು ಹೈಕೋರ್ಟ್​ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸಲು ಸೂಚನೆ: ಸಿಜೆ ಎಚ್ಚರಿಕೆ

ಇದನ್ನೂ ಓದಿ: ಸಮೀರ್ ವಾಂಖೆಡೆಯ ಅಪ್ಪ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ನವಾಬ್ ಮಲಿಕ್ ಪ್ರತಿಕ್ರಿಯೆ ಕೋರಿದ ಬಾಂಬೆ ಹೈಕೋರ್ಟ್

Published On - 8:38 pm, Tue, 9 November 21