ಆಮೆಗತಿಯಲ್ಲಿ ಸಾಗುತ್ತಿರುವ ಧಾರವಾಡದ ಈಜುಕೊಳ ಅಭಿವೃದ್ಧಿ ಕಾಮಗಾರಿ

|

Updated on: Mar 26, 2021 | 3:45 PM

ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುತ್ತಿರುವ ಈಜುಕೊಳದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದು ಈಜು ಪ್ರಿಯರಿಗೆ ಹೆಚ್ಚು ಬೇಸರ ತಂದಿದೆ. ಹಲವಾರು ವರ್ಷಗಳ ಕಾಲ ನಿರ್ವಹಣೆ ಕೊರತೆಯಿಂದ ಈಜುಕೊಳವನ್ನು ಬಂದ್ ಮಾಡಲಾಗಿತ್ತು. ನಿರಂತರ ಒತ್ತಡದಿಂದ ಮತ್ತೆ ಈಜುಕೊಳವನ್ನು ಆರಂಭಿಸಲಾಗಿತ್ತು.

ಆಮೆಗತಿಯಲ್ಲಿ ಸಾಗುತ್ತಿರುವ ಧಾರವಾಡದ ಈಜುಕೊಳ ಅಭಿವೃದ್ಧಿ ಕಾಮಗಾರಿ
ನಿಧಾನ ಗತಿಯಲ್ಲಿ ಸಾಗುತ್ತಿರುವ ಈಜುಕೊಳ
Follow us on

ಧಾರವಾಡ: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಯೋಜನೆಗಳನ್ನು ಆರಂಭಿಸುವಾಗ ಇರುವ ಉತ್ಸಾಹ ಮುಂದಿನ ದಿನಗಳಲ್ಲಿ ಇರುವುದೇ ಇಲ್ಲ. ಇದಕ್ಕೆ ಸಾಕ್ಷಿ ಧಾರವಾಡದ ಈಜುಕೊಳ. ಮುಂಚೆ ಇದ್ದ ಈಜುಕೊಳವನ್ನು ಅಭಿವೃದ್ಧಿ ಮಾಡುವ ವಿಚಾರವಾಗಿ ಅದನ್ನು ಕೆಡವಿ ಇದೀಗ ಹೊಸ ಈಜುಕೊಳವನ್ನು ನಿರ್ಮಿಸಲಾಗುತ್ತಿದೆ. ಆದರೆ ಅನುದಾನದ ಕೊರತೆಯಿಂದಾಗಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಇದರಿಂದಾಗಿ ಈಜು ಪ್ರಿಯರಿಗೆ ಈ ಕಾಮಗಾರಿ ಯಾವತ್ತು ಮುಗಿಯುತ್ತದೆ ಎಂದು ತಿಳಿಯುತ್ತಿಲ್ಲ.

ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುತ್ತಿರುವ ಈಜುಕೊಳದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇದು ಈಜು ಪ್ರಿಯರಿಗೆ ಹೆಚ್ಚು ಬೇಸರ ತಂದಿದೆ. ಹಲವಾರು ವರ್ಷಗಳ ಕಾಲ ನಿರ್ವಹಣೆ ಕೊರತೆಯಿಂದ ಈಜುಕೊಳವನ್ನು ಬಂದ್ ಮಾಡಲಾಗಿತ್ತು. ನಿರಂತರ ಒತ್ತಡದಿಂದ ಮತ್ತೆ ಈಜುಕೊಳವನ್ನು ಆರಂಭಿಸಲಾಗಿತ್ತು. ಆದರೆ ಎರಡು ವರ್ಷಗಳ ಬಳಿಕ ಯೋಜನೆ ರೂಪಿಸಿ, ಒಟ್ಟು 13.5 ಕೋಟಿ ರೂಪಾಯಿ ವೆಚ್ಚದಲ್ಲಿ ಈಜುಕೊಳವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು. ಈ ವೇಳೆ ಯೋಜನೆಗೆ ಹಣದ ವ್ಯವಸ್ಥೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಸಿ.ಎಸ್.ಆರ್.ಫಂಡ್ ಮೂಲಕ ವ್ಯವಸ್ಥೆ ಮಾಡಿದರು. ಆದರೆ ಅನೇಕರು ಇಲ್ಲಿಯೇ ಇಂಡೋರ್ ಗೇಮ್​ಗಳಿಗೆ ಅವಕಾಶ ಕಲ್ಪಿಸುವಂತಹ ಕಾಂಪ್ಲೆಕ್ಸ್ ನಿರ್ಮಾಣ ಮಾಡಿ ಎಂದು ಒತ್ತಾಯ ಹೇರಿದರು. ಅದೇ ಇದೀಗ ಸಮಸ್ಯೆಯಾಗಿ ಇಡೀ ಯೋಜನೆಗೆ ಗ್ರಹಣ ಹಿಡಿದಂತಾಗಿದೆ.

ಒಂದೆಡೆ ಬಿದ್ದಿರುವ ಕಬ್ಬಿಣದ ಶೀಟ್​ಗಳು

ಭರವಸೆ ನೀಡಿದ ಅರವಿಂದ ಬೆಲ್ಲದ್
ಆರಂಭದಲ್ಲಿ ಈಜುಕೊಳ ಮಾತ್ರವೇ ನಿರ್ಮಾಣದ ಯೋಚನೆ ಇತ್ತು. ಕೊಳದ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣವನ್ನು ನಿರ್ಮಾಣ ಮಾಡುವ ಯೋಜನೆಯನ್ನು ದೆಹಲಿಯ ಐಐಟಿ ತಾಂತ್ರಿಕ ಸಲಹೆಯೊಂದಿಗೆ ವಿನ್ಯಾಸಗೊಳಿಸಲಾಯಿತು. ಈಜುಕೊಳದ ಜೊತೆಗೆ ಕಬಡ್ಡಿ ಅಂಕಣ, ಬ್ಯಾಡ್ಮಿಂಟನ್ ಕೋರ್ಟ್, ಜಿಮ್ ಹಾಗೂ ಸಿಬ್ಬಂದಿ ವಸತಿ ಗೃಹ ಸೇರಿ ಬಹುಮಹಡಿ ಕಟ್ಟಡ ನಿರ್ಮಾಣವಾಗಬೇಕಿದೆ. ಹೀಗಾಗಿ ಮತ್ತೆ ಸ್ಥಳೀಯ ಶಾಸಕರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಸಂಪರ್ಕಿಸಿದಾಗ ಇದರ ಮೊತ್ತ 35 ಕೋಟಿಗೆ ಏರುತ್ತಿದೆ ಅಂತಾ ಹೇಳಿದರು. ಕೂಡಲೇ ಈ ಬಗ್ಗೆ ಮತ್ತಷ್ಟು ಖಾಸಗಿ ಕಂಪನಿಗಳ ಜೊತೆ ಚರ್ಚಿಸಿದ ಜೋಶಿ ಅದಕ್ಕು ಕೂಡ ವ್ಯವಸ್ಥೆ ಮಾಡಿದರು. ಆದರೆ ಅದೇಕೋ ಏನೋ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಈ ಯೋಜನೆ ಆಮೆಗತಿಯಲ್ಲಿ ಸಾಗುತ್ತಿದೆ. ಇನ್ನು ಈ ಬಗ್ಗೆ ಶಾಸಕ ಅರವಿಂದ ಬೆಲ್ಲದ್ ಅವರನ್ನು ಕೇಳಿದರೆ ಯೋಜನೆಗೆ ಹಣದ ವ್ಯವಸ್ಥೆ ಆಗಿದೆ. ಹೀಗಾಗಿ ಕಾಮಗಾರಿಯ ವೇಗ ಈಗ ಹೆಚ್ಚುತ್ತದೆ. ಅಲ್ಲದೇ ಕಾಮಗಾರಿಯನ್ನು ಆದಷ್ಟು ಶೀಘ್ರವೇ ಮುಕ್ತಾಯಗೊಳ್ಳುತ್ತದೆ ಎಂದು ಹೇಳುತ್ತಾರೆ.

ಈಜುಕೊಳ ನಿರ್ಮಾಣಕ್ಕೆ ಹೊಂಡ ತೋಡಲಾಗಿದೆ

ಇದನ್ನೂ ಓದಿ

SBI ಗ್ರಾಹಕರಿಗೆ ಸ್ಮಾರ್ಟ್​ಫೋನ್​ ಕೊಳ್ಳಲು ಉತ್ತಮ ಅವಕಾಶ: ಶೇ.15ರಷ್ಟು ರಿಯಾಯಿತಿಯೊಂದಿಗೆ ಮೊಬೈಲ್​ ಖರೀದಿಸಿ ಹೋಳಿ ಹಬ್ಬದ ಸುಂದರ ಚಿತ್ರಣ ಸೆರೆ ಹಿಡಿಯಿರಿ

ಬಾಂಗ್ಲಾದೇಶದ ರಾಷ್ಟ್ರಿಯ ಹುತಾತ್ಮ ಸ್ಮಾರಕದಲ್ಲಿ ಗಿಡ ನೆಟ್ಟು ನೀರೆರೆದ ಪ್ರಧಾನಿ ಮೋದಿ