ಬೆಂಗಳೂರು, ನವೆಂಬರ್ 22: ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ 4 ಟ್ರಿಪ್ ವಿಶೇಷ ರೈಲುಗಳ ಘೋಷಣೆ ಮಾಡಿದೆ. ಹುಬ್ಬಳ್ಳಿ-ಕರ್ನೂಲ್ ಸಿಟಿ ನಡುವೆ ಈ ರೈಲುಗಳು ಸಂಚರಿಸಲಿವೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ರೈಲುಗಳ ವೇಳಾಪಟ್ಟಿಯನ್ನೂ ಪ್ರಕಟಿಸಿದೆ.
ಆರ್‌ಆರ್‌ಬಿ (ರೈಲ್ವೆ ನೇಮಕಾತಿ ಮಂಡಳಿ) ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲಕ್ಕಾಗಿ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಕರ್ನೂಲ್ ಸಿಟಿ ನಿಲ್ದಾಣಗಳ ನಡುವೆ 4 ಟ್ರಿಪ್ ವಿಶೇಷ ಕಾಯ್ದಿರಿಸದ ರೈಲು ಓಡಿಸಲು ರೈಲ್ವೆ ಮಂಡಳಿಯು ಸೂಚಿಸಿದೆ ಎಂದು ಎಕ್ಸ್ ಸಂದೇಶದಲ್ಲಿ ನೈಋತ್ಯ ರೈಲ್ವೆ ತಿಳಿಸಿದೆ.
ರೈಲು ಸಂಖ್ಯೆ 07315 ಎಸ್ಎಸ್ಎಸ್ ಹುಬ್ಬಳಿ-ಕರ್ನೂಲ್ ಸಿಟಿ ಕಾಯ್ದಿರಿಸದ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 24, 25. 26 ಮತ್ತು 27 ರಂದು ರಾತ್ರಿ 8:15 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಗ್ಗೆ 6 ಗಂಟೆಗೆ ಸಿಟಿ ಕರ್ನೂಲ್ ಸಿಟಿ ನಿಲ್ದಾಣವನ್ನು ತಲುಪಲಿದೆ.
ರೈಲು ಸಂಖ್ಯೆ 07316 ಕರ್ನೂಲ್ ಸಿಟಿ-ಎಸ್‌ಎಸ್ಎಸ್ ಹುಬ್ಬಳ್ಳಿ ಕಾಯ್ದಿರಿಸದ ವಿಶೇಷ ಎಕ್ಸ್ಪ್ರೆಸ್ ರೈಲು ನವೆಂಬರ್ 25, 26, 27 ಮತ್ತು 28 ರಂದು ಬೆಳಿಗ್ಗೆ 07:30 ಗಂಟೆಗೆ ಕರ್ನೂಲ್ ಸಿಟಿ ನಿಲ್ದಾಣದಿಂದ ಹೊರಟು, ಅದೇ ದಿನ ಸಂಜೆ 4:15 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.
ಈ ರೈಲು ಗದಗ, ಕೊಪ್ಪಳ, ಹೊಸಪೇಟೆ, ತೋರಣಗಲ್ಲು, ಬಳ್ಳಾರಿ, ಗುಂತಕಲ್ ಮತ್ತು ಡೋನ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
Kindly note:
Railway Board has announced the introduction of special unreserved train services between SSS Hubballi and Kurnool City stations for four trips to provide enhanced convenience for candidates appearing for the RRB examinations.
ಆರ್‌ಆರ್‌ಬಿ (ರೈಲ್ವೆ ನೇಮಕಾತಿ ಮಂಡಳಿ)… pic.twitter.com/qszYuOVKmm— South Western Railway (@SWRRLY) November 21, 2024
ಈ ರೈಲು ಸಾಮಾನ ದಿತೀಯ ದರ್ಜೆ (8) ಮತ್ತು ಅಂಗವಿಕಲರಿಗೆ ಮೀಸಲಾದ ಬೋಗಿಗಳೊಂದಿಗೆ ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ (2) ಸೇರಿದಂತೆ 10 ಬೋಗಿಗಳನ್ನು ಹೊಂದಿರುತ್ತದೆ.
ಪ್ರಯಾಣಕರು ಭಾರತೀಯ ರೈಲ್ವೆ ಅಧಿಕೃತ ವೆಬ್ಸೈಟ್ (www.enquiry.indianrail.gov.in) ಗೆ ಭೇಟಿ ನೀಡುವ ಮೂಲಕ NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ರೈಲುಗಳ ಆಗಮನ/ನಿರ್ಗಮನ ಸಮಯ ಮತ್ತು ಇತರ ಮಾಹಿತಿಯನ್ನು ಪರಿಶೀಲಿಸಬಹುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ