ಜೆರಾಕ್ಸ್ ಅಂಗಡಿ ಮಾಲೀಕನಿಗೆ ಥಳಿಸಿದ ತಹಶೀಲ್ದಾರ್, ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬಸ್ಕಿ ಶಿಕ್ಷೆ
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಲಾಠಿ ಹಿಡಿದು ಫೀಲ್ಡಿಗೆ ಇಳಿದಿದ್ದ ಬೀಳಗಿ ತಹಶೀಲ್ದಾರ್ ಶಂಕರಗೌಡ, ಜೆರಾಕ್ಸ್ ಅಂಗಡಿ ಮಾಲೀಕನಿಗೆ ಥಳಿಸಿದ ಘಟನೆ ನಡೆದಿದೆ. ಅಂಗಡಿಯಲ್ಲಿದ್ದ ಕುರ್ಚಿ ಹೊರಗೆಸೆದು ಮಾಲೀಕನಿಗೆ ಥಳಿಸಿದ್ದಾರೆ.
ಬಾಗಲಕೋಟೆ: ಮಹಾಮಾರಿ ಕೊರೊನಾ ಎರಡನೇ ಅಲೆಯ ಪ್ರಭಾವ ದಿನೇ ದಿನೇ ಹೆಚ್ಚಾಗ್ತಿದ್ದು ಕೊರೊನಾ ಕಟ್ಟಿ ಹಾಕಲು ಸರ್ಕಾರ ಕೊರೊನಾ ಕರ್ಫ್ಯೂವಿಧಿಸಿದೆ. ಹೀಗಾಗಿ ಬೆಳಗ್ಗೆ 10 ಗಂಟೆಯಾಗುತ್ತಿದ್ದಂತೆ ಪೊಲೀಸರು ಫೀಲ್ಡಿಗಿಳಿದು ರಸ್ತೆ ಮೇಲೆ ಓಡಾಡುವ ಹಾಗೂ ಅಂಗಡಿ ತೆರೆದಿಡುವ ಮಂದಿಗೆ ಖಡಕ್ ವಾರ್ನಿಂಗ್ ಕೊಟ್ಟು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದಾರೆ.
ಈ ವೇಳೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಲಾಠಿ ಹಿಡಿದು ಫೀಲ್ಡಿಗೆ ಇಳಿದಿದ್ದ ಬೀಳಗಿ ತಹಶೀಲ್ದಾರ್ ಶಂಕರಗೌಡ, ಜೆರಾಕ್ಸ್ ಅಂಗಡಿ ಮಾಲೀಕನಿಗೆ ಥಳಿಸಿದ ಘಟನೆ ನಡೆದಿದೆ. ಅಂಗಡಿಯಲ್ಲಿದ್ದ ಕುರ್ಚಿ ಹೊರಗೆಸೆದು ಮಾಲೀಕನಿಗೆ ಥಳಿಸಿದ್ದಾರೆ. ಹಾಗೂ ಅನಗತ್ಯವಾಗಿ ಸಂಚರಿಸುತ್ತಿರುವವರಿಗೂ ವಾರ್ನಿಂಗ್ ಕೊಟ್ಟಿದ್ದಾರೆ.
ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬಸ್ಕಿ ಶಿಕ್ಷೆ ಕೊವಿಡ್ ಲಾಕ್ಡೌನ್ ವೇಳೆ ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ಪೊಲೀಸರು ಕಿವಿ ಹಿಡಿದು ಬಸ್ಕಿ ಹೊಡೆಸಿ ಕಳಿಸಿದ್ದಾರೆ. ಯಾರು ನಿಯಮ ಉಲ್ಲಂಘನೆ ಮಾಡಿ ರಸ್ತೆಯಲ್ಲಿ ಓಡಾಡುತ್ತಿದ್ದಾರೋ ಅವರಿಗೆ ಈ ರೀತಿ ಶಿಕ್ಷೆ ನೀಡಲಾಗುತ್ತಿದೆ.
ಇದನ್ನೂ ಓದಿ: ಬೆಡ್ಗಳು ಖಾಲಿ ಇದ್ದರೂ ರೋಗಿಗಳು ಏಕೆ ಬರುತ್ತಿಲ್ಲ? ಬಿಮ್ಸ್ ನಿರ್ದೇಶಕರಿಗೆ ಡಿಸಿಎಂ ಲಕ್ಷ್ಮಣ ಸವದಿ ತರಾಟೆ