ಅಕ್ರಮ ಕಲ್ಲು ಗಣಿಗಾರಿಕೆ: ಪರಿಶೀಲನೆಗೆ ಹೋದ ತಹಶೀಲ್ದಾರ್‌ಗೆ ಅವಾಜ್​.. ಯಾವೂರಲ್ಲಿ?

ಅಧಿಕಾರಿಗಳನ್ನ ನಿಲ್ಲಿಸಿಕೊಂಡು ಆವಾಜ್ ಹಾಕಿರೊ ಜಯಂತ್ ವಿರುದ್ದ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಪಾಂಡವಪುರ ಠಾಣೆಗೆ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಅಕ್ರಮ ಕಲ್ಲು ಗಣಿಗಾರಿಕೆ: ಪರಿಶೀಲನೆಗೆ ಹೋದ ತಹಶೀಲ್ದಾರ್‌ಗೆ ಅವಾಜ್​.. ಯಾವೂರಲ್ಲಿ?
ತಹಶಿಲ್ದಾರ್ ಪ್ರಮೋದ್ ಪಾಟೀಲ್

Updated on: Jan 09, 2021 | 8:27 AM

ಮಂಡ್ಯ: ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಹೋದ ತಹಶೀಲ್ದಾರ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆದಿದೆ.

ಪರಿಶೀಲನೆಗೆ ಹೋದ ಪಾಂಡವಪುರ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದಲ್ಲದೆ, ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ವ್ಯಕ್ತಿ, ಅಧಿಕಾರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾನೆ. ಜೊತೆಗೆ ಸನ್ಮತಿ ಸ್ಟೋನ್ ಕ್ರಷರ್ ಮಾಲೀಕ ಜಯಂತ್ ಎಂಬುವವರು ತಹಶೀಲ್ದಾರ್ ಕೆಲಸಕ್ಕೆ ಅಡ್ಡಿ ಪಡಿಸಿದ್ದು, ಜಯಂತ್ ತಂದೆ ಜಯರಾಮು ಹೆಸರಿನಲ್ಲಿ ಈ ಕ್ರಷರ್ ನಡೆಯುತ್ತಿದೆ.

ಅಧಿಕಾರಿಗಳನ್ನ ನಿಲ್ಲಿಸಿಕೊಂಡು ಆವಾಜ್ ಹಾಕಿರೊ ಜಯಂತ್ ವಿರುದ್ದ ಸರ್ಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಪಾಂಡವಪುರ ಠಾಣೆಗೆ ತಹಶೀಲ್ದಾರ್ ಪ್ರಮೋದ್ ಪಾಟೀಲ್ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಬೇಬಿ ಬೆಟ್ಟದ ಗಡಿಭಾಗ ಗುರುತಿಸುವ ಕಾರ್ಯ ಶುರು, ವಿಶ್ವವಿಖ್ಯಾತ KRS Dam ಸೇಫ್?

Published On - 8:26 am, Sat, 9 January 21