AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾವೇರಿ ಎಂಪೋರಿಯಂ ಕರಕುಶಲ ವಸ್ತುಗಳು ಇನ್ಮುಂದೆ ಆನ್​ಲೈನ್ ಮಾರುಕಟ್ಟೆಯಲ್ಲೂ ಲಭ್ಯ -ಡಿ.ರೂಪಾ

ಕೆಎಸ್‌ಎಚ್‌ಡಿಸಿ ಕರ್ನಾಟಕ ಸರ್ಕಾರದ ಸಂಸ್ಥೆಯಾಗಿದ್ದು, ಇದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ನಡೆಸುತ್ತಿದೆ. ಕಾವೇರಿ ಎಂಪೋರಿಯಂನ 100 ಉತ್ಪನ್ನಗಳು ಶೀಘ್ರವೇ ಆನ್‌ಲೈನ್ ಖರೀದಿಗೆ ಲಭ್ಯವಾಗಲಿದೆ ಎಂದು ರೂಪಾ ಟ್ವಿಟರ್​ ಮೂಲಕ ತಿಳಿಸಿದ್ದಾರೆ.

ಕಾವೇರಿ
ರಾಜೇಶ್ ದುಗ್ಗುಮನೆ
| Edited By: |

Updated on:Jan 08, 2021 | 10:26 PM

Share

ಬೆಂಗಳೂರು: ಹೆಚ್ಚಿನ ಗ್ರಾಹಕರನ್ನು ತಲುಪಲು ಮತ್ತು ಸ್ಥಳೀಯ ಕರಕುಶಲ ಕಾರ್ಮಿಕರನ್ನು ಉತ್ತೇಜಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (ಕೆಎಸ್‌ಎಚ್‌ಡಿಸಿ) ತನ್ನ ಉತ್ಪನ್ನಗಳನ್ನು ಪ್ರಮುಖ ಇ-ಕಾಮರ್ಸ್ ಪೋರ್ಟಲ್‌ಗಳಲ್ಲಿ ಮಾರಾಟ ಮಾಡಲಿದೆ. ಹೊಸದಾಗಿ ನೇಮಕಗೊಂಡ ಕೆಎಸ್‌ಎಚ್‌ಡಿಸಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಡಿ.ರೂಪಾ ಈ ಘೋಷಣೆ ಮಾಡಿದ್ದಾರೆ.

ಕೆಎಸ್‌ಎಚ್‌ಡಿಸಿ ಕರ್ನಾಟಕ ಸರ್ಕಾರದ ಸಂಸ್ಥೆಯಾಗಿದ್ದು, ಇದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ನಡೆಸುತ್ತಿದೆ. ಕಾವೇರಿ ಎಂಪೋರಿಯಂನ 100 ಉತ್ಪನ್ನಗಳು ಶೀಘ್ರವೇ ಆನ್‌ಲೈನ್ ಖರೀದಿಗೆ ಲಭ್ಯವಾಗಲಿದೆ ಎಂದು ರೂಪಾ ಟ್ವಿಟರ್​ ಮೂಲಕ ತಿಳಿಸಿದ್ದಾರೆ.

ಕಾವೇರಿ ಎಂಪೋರಿಯಂನ ಉತ್ಪನ್ನಗಳು Flipkartನಲ್ಲಿ ಲಭ್ಯವಿದೆ. ನಾವು 30 ವಸ್ತುಗಳನ್ನು ಪಟ್ಟಿ ಮಾಡಿದ್ದೇವೆ. 70 ವಸ್ತುಗಳನ್ನು ಇನ್ನೂ ಪಟ್ಟಿ ಮಾಡಬೇಕಿದೆ. ನಾವು ಪ್ರಯತ್ನಿಸಿದ ಮೊದಲ ಇ-ಮಾರುಕಟ್ಟೆ ಇದಾಗಿದೆ. ಶೀಘ್ರದಲ್ಲೇ ನಾವು ಇತರ ಇ-ಪ್ಲಾಟ್‌ಫಾರ್ಮ್‌ಗಳಲ್ಲಿ ಸೇವೆ ನೀಡುತ್ತೇವೆ ಎಂದಿದ್ದಾರೆ.

ಈ ಆಲೋಚನೆಯು ದೀರ್ಘಕಾಲದಿಂದ ಇತ್ತು ಆದರೆ ಈಗ ಅದು ಕಾರ್ಯರೂಪಕ್ಕೆ ಬಂದಿದೆ ಎಂದು ರೂಪಾ ತಿಳಿಸಿದ್ದಾರೆ.

ಐಜಿಪಿ ರೂಪಾ ಮುಂದೆ ಹೊಸ ಸವಾಲು: ಕರಕುಶಲ ನಿಗಮದ ಲೂಟಿಕೋರನ ಹಿಡಿಯುವುದು..ಯಾರು ಅವರು?

Published On - 10:09 pm, Fri, 8 January 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ

ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ

ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು

ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ

ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ

ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ