ಅಕಾಲಿಕ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶ: ನೆಲ ಕಚ್ಚಿದ ಬೆಳೆ ನೋಡಿ ಕಣ್ಣೀರಿಟ್ಟ ಅನ್ನದಾತರು
ಅತಿಯಾದ ಮಳೆಗೆ ಈರುಳ್ಳಿ, ಶೇಂಗಾ ಕೊಳೆತು ಹೋಗಿದೆ. ಈಗ ಅಕಾಲಿಕ ಮಳೆಗೆ ಜೋಳ ಸೇರಿ ಹಲವು ಬೆಳೆಗಳು ನಾಶವಾಗಿವೆ. ಹೀಗಾಗಿ ನಮಗೂ ತಿನ್ನೋಕೆ ಜೋಳ ಇಲ್ಲದಂತಾಯಿತು. ಜೊತೆಗೆ ಜಾನುವಾರುಗಳಿಗೂ ಮೇವಿಲ್ಲದಂತಾಗಿದೆ ಎಂದು ರೈತರು ಕಣ್ಣೀರಿಡುತ್ತಿದ್ದಾರೆ.
ಗದಗ: ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿರುವುದರಿಂದ ರೈತರು ಕಣ್ಣೀರಿಡುತ್ತಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.
ಅತಿಯಾದ ಮಳೆಗೆ ಈರುಳ್ಳಿ, ಶೇಂಗಾ ಕೊಳೆತು ಹೋಗಿದೆ. ಈಗ ಅಕಾಲಿಕ ಮಳೆಗೆ ಜೋಳ ಸೇರಿ ಹಲವು ಬೆಳೆಗಳು ನಾಶವಾಗಿವೆ. ಹೀಗಾಗಿ ನಮಗೂ ತಿನ್ನೋಕೆ ಜೋಳ ಇಲ್ಲದಂತಾಯಿತು. ಜೊತೆಗೆ ಜಾನುವಾರುಗಳಿಗೂ ಮೇವಿಲ್ಲದಂತಾಗಿದೆ ಎಂದು ರೈತರು ಕಣ್ಣೀರಿಡುತ್ತಿದ್ದಾರೆ.
ಅಕಾಲಿಕ ಭಾರಿ ಮಳೆಗೆ ಅನ್ನದಾತರ ಬದುಕು ಸರ್ವನಾಶವಾಗಿದ್ದು, ತಡ ರಾತ್ರಿ ಸುರಿದ ಬಾರಿ ಮಳೆಗೆ ಅಪಾರ ಪ್ರಮಾಣದ ಜೋಳದ ಬೆಳೆ ನೆಲಕ್ಕುರುಳಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಜೋಳ, ಕಡಲೆ ಸೇರಿ ಹಲವು ಬೆಳೆಗಳು ಹಾನಿಗೊಳಗಾಗಿದ್ದು, ಮುಂಜಾನೆ ತಮ್ಮ ಜಮೀನುಗಳತ್ತ ಓಡಿದ ರೈತರಿಗೆ, ಹೊಲದಲ್ಲಿ ಭೂಮಿ ಕಚ್ಚಿರುವ ಬೆಳೆ ನೋಡಿ ಆಕಾಶವೇ ತಲೆಯ ಮೇಲೆ ಬಿದ್ದಂತ್ತಾಗಿದೆ.
Published On - 9:17 am, Sat, 9 January 21