ಮಡಿಕೇರಿ: ಕಾವೇರಿ.. ಕರುನಾಡ ಜೀವನದಿ.. ಅದೆಷ್ಟೋ ಜನರ ಬಾಳು ಬೆಳಗಿಸೋ ದಾಹ ನೀಗಿಸೋ ಮಹಾನದಿ. ಆದ್ರೆ, ಕಾವೇರಿ ಉದ್ಭವಿಸೋ ತಲಕಾವೇರಿಯಲ್ಲಿ ತೀರ್ಥೋದ್ಭವ ವಿಸ್ಮಯ ಕಣ್ತುಂಬಿಕೊಳ್ಳೋಕೆ ಕ್ಷಣಗಣನೆ ಆರಂಭವಾಗಿದೆ. ತಲಕಾವೇರಿ ಹಾಗೂ ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಸಕಲ ರೀತಿಯಲ್ಲಿ ಸಿದ್ಧತೆ ನಡೆದಿದೆ.
ಅಕ್ಟೋಬರ್ 17ರ ರಾತ್ರಿ ಅಂದ್ರೆ ಅಕ್ಟೋಬರ್ 18ರಂದು ಮುಂಜಾನೆ 12:59 ನಿಮಿಷಕ್ಕೆ ತುಲಾ ಸಂಕ್ರಮಣದ ರೋಹಿಣಿ ನಕ್ಷತ್ರ ಶುಭ ಕರ್ಕಾಟಕ ಲಗ್ನದಲ್ಲಿ ಕಾವೇರಿ ತೀರ್ಥೊದ್ಭವ ಆಗಲಿದೆ. ಬ್ರಹ್ಮ ಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿಬರಲಿದೆ. ಇಂದಿನಿಂದ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಅರ್ಚಕರ ತಂಡ ಕೂಡ ಕಾವೇರಿಮಾತೆಯ ಸ್ವಾಗತಕ್ಕೆ ಸಜ್ಜಾಗಿದೆ. ಅಲ್ಲದೇ 8 ಕಿಲೋಮೀಟರ್ ದೂರದಿಂದಲೇ ಲೈಟಿಂಗ್ ವ್ಯವಸ್ಥೆಗಾಗಿ 500ಕ್ಕೂ ಹೆಚ್ಚು ಟ್ಯೂಬ್ ಲೈಟ್ಗಳನ್ನ ಬಳಸಲಾಗಿದೆ. ತಾತ್ಕಾಲಿಕ ಶೌಚಾಲಯ, ಅನ್ನದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಲ್ದೇ, ಭದ್ರತೆಗಾಗಿ 3 ಡಿವೈಎಸ್ಪಿ, 7 ಜನ ಇನ್ಸ್ ಪೆಕ್ಟರ್, 60 ಸಬ್ ಇನ್ಸ್ ಪೆಕ್ಟರ್, 80 ಮಹಿಳಾ ಸಿಬ್ಬಂದಿ, 150 ಹೋಂ ಗಾರ್ಡ್ ಹಾಗೂ 70 ಸಿಸಿ ಕ್ಯಾಮರಾ ಕಣ್ಗಾವಲಿರಿಸಲಾಗಿದೆ.
Published On - 8:26 am, Thu, 17 October 19