ಮೇ 20ರ ವರೆಗೆ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ; ಬೆಳಗಾವಿಯಲ್ಲಿ ವಿಮಾನ ಹಾರಾಟ ರದ್ದು

| Updated By: ganapathi bhat

Updated on: Aug 23, 2021 | 12:27 PM

ಚಂಡಮಾರುತ ಪ್ರಭಾವದಿಂದಾಗಿ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ. ಮೇ 20ರವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಮೇ 20ರ ವರೆಗೆ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ; ಬೆಳಗಾವಿಯಲ್ಲಿ ವಿಮಾನ ಹಾರಾಟ ರದ್ದು
ಹವಾಮಾನ ವರದಿ (ಸಾಂಕೇತಿಕ ಚಿತ್ರ)
Follow us on

ಬೆಂಗಳೂರು: ಇಂದಿನಿಂದ ಮೇ 20ರವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಮುಂದಿನ 2 ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಹೇಳಿಕೆ ನೀಡಿದ್ದಾರೆ. ತೌಕ್ತೆ ಚಂಡಮಾರುತ ಪೂರ್ವ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ಇದೆ. ತೌಕ್ತೆ ಮೇ 18ರಂದು ಗುಜರಾತ್​ನ ಮಹುವಾ ಹಾಗೂ ಪೋರಬಂದರ್ ತಲುಪುವ ಸಾಧ್ಯತೆ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಚಂಡಮಾರುತ ಪ್ರಭಾವದಿಂದಾಗಿ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ. ಮೇ 20ರವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ 3 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಿದೆ ಎಂದು ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.

ತೌಕ್ತೆ ಸೈಕ್ಲೋನ್ ಪರಿಣಾಮ ಹಿನ್ನೆಲೆ ವಿಮಾನ ಹಾರಾಟ ರದ್ದು
ಪ್ರತಿಕೂಲ ಹವಾಮಾನ ಹಿನ್ನೆಲೆ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಬೆಳಗಾವಿಯಲ್ಲಿ ಬೆಳಗ್ಗೆಯಿಂದ ವಿಮಾನಗಳ ಹಾರಾಟ ರದ್ದಾಗಿದೆ. ಪರಿಸ್ಥಿತಿ ಅವಲೋಕಿಸಿ ವಿಮಾನಗಳ ಹಾರಾಟ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ ರಾಜೇಶ್ ಕುಮಾರ್ ಮೌರ್ಯ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಲಂಗರು ಕಳಚಿ ದಿಕ್ಕಾಪಾಲಾಗಿ ಹೋಗಿದ್ದ ಟಗ್ ಮತ್ತೆ ಪತ್ತೆ
ಮಂಗಳೂರಿನಲ್ಲಿ ನಾಪತ್ತೆಯಾಗಿದ್ದ ಟಗ್ ಮುಲ್ಕಿ ಬಳಿಯಲ್ಲಿ ಪತ್ತೆಯಾಗಿದೆ. ಕೋರಮಂಡಲ್ ಹೆಸರಿನ ಟಗ್ ಪತ್ತೆಯಾಗಿದೆ. ಕಲ್ಲು ಬಂಡೆಗೆ ಸಿಕ್ಕಿಹಾಕಿಕೊಂಡಿರುವ ಕೋರಮಂಡಲ್ ಟಗ್, ಮುಲ್ಕಿ ರಾಕ್ಸ್​​ನಿಂದ 4 ನಾಟಿಕಲ್ ಮೈಲಿನಲ್ಲಿ ಪತ್ತೆಯಾಗಿದೆ. ಕೋಸ್ಟ್​ಗಾರ್ಡ್ ನೌಕರರ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಟಗ್, ನಿನ್ನೆ ಇದ್ದ ಸ್ಥಳದಿಂದ ಸಾಕಷ್ಟು ದೂರ ಹೋಗಿದೆ. ಎಮ್ಆರ್​ಪಿಎಲ್​ನ 9 ಮಂದಿ ಕಾರ್ಮಿಕರು ಟಗ್​ನಲ್ಲೇ ಸುರಕ್ಷಿತವಾಗಿದ್ದಾರೆ.

ಇದನ್ನೂ ಓದಿ: Cyclone Tauktae Effect: ಚಿಕ್ಕಮಗಳೂರಿನಲ್ಲಿ ಭಾರಿ ಮಳೆ; ಜನಜೀವನ ಸಂಪೂರ್ಣ ಅಸ್ತವ್ಯಸ್ತ

Cyclone Tauktae: ತೌಕ್ತೆ ಚಂಡಮಾರುತ ಪರಿಣಾಮ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ

Published On - 5:49 pm, Sun, 16 May 21