AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನಸಿಕ ಅಸ್ವಸ್ಥರನ್ನು ಉಪಚರಿಸಿದ ಪೊಲೀಸರು; ಖಾಕಿ ಮಾನವಿಯತೆಗೆ ಸಾರ್ವಜನಿಕರಿಂದ ಮೆಚ್ಚುಗೆ

ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳು. ಲಾಕ್​ಡೌನ್ ನಡುವೆ ಅನ್ನ ನೀರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಮಾನಸಿಕ ಅಸ್ವಸ್ಥರ ನೆರವಿಗೆ ನಿಂತಿದ್ದಾರೆ.

ಮಾನಸಿಕ ಅಸ್ವಸ್ಥರನ್ನು ಉಪಚರಿಸಿದ ಪೊಲೀಸರು; ಖಾಕಿ ಮಾನವಿಯತೆಗೆ ಸಾರ್ವಜನಿಕರಿಂದ ಮೆಚ್ಚುಗೆ
ಮಾನಸಿಕ ಅಸ್ವಸ್ಥರನ್ನು ಉಪಚರಿಸಿದ ಪೊಲೀಸರು
Follow us
preethi shettigar
|

Updated on: May 16, 2021 | 6:16 PM

ಗದಗ: ಇಬ್ಬರು ಮಾನಸಿಕ ಅಸ್ವಸ್ಥರಿಗೆ ಪೊಲೀಸ್ ಸಿಬ್ಬಂದಿಗಳು ಕಟಿಂಗ್ ಮಾಡಿಸಿ, ಸ್ನಾನ ಮಾಡಿಸಿ, ಹೊಸ ಬಟ್ಟೆ ನೀಡಿ, ಅನ್ನ ನೀಡಿ ಉಪಚಾರ ಮಾಡಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳು. ಲಾಕ್​ಡೌನ್ ನಡುವೆ ಅನ್ನ ನೀರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಮಾನಸಿಕ ಅಸ್ವಸ್ಥರ ನೆರವಿಗೆ ನಿಂತಿದ್ದಾರೆ. ವೀರನಗೌಡ ಪಾಟೀಲ್, ಪ್ರಕಾಶ ಭೂಸನೂರಮಠ, ಹಾಗೂ ಜಗದೀಶ್ ಹೊಸಳ್ಳಿ ಮಾನಸಿಕ ಅಸ್ವಸ್ಥರ ನೆರವಿಗೆ ನಿಂತಿದ್ದು, ಸದ್ಯ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹಸಿದವರಿಗೆ ಅನ್ನ ನೀಡುತ್ತಿರುವ ಗದಗ ಪೊಲೀಸರು ಕೊರೊನಾ ನಿಯಂತ್ರಣ ಮಾಡಲು ಸರ್ಕಾರ ಲಾಕ್​ಡೌನ್ ಜಾರಿ ಮಾಡಿದೆ. ಇದರ ಪರಿಣಾಮ ಬಡವರು, ನಿರ್ಗತಿಕರು, ಭಿಕ್ಷಕರು ಹಾಗೂ ಆರ್ಥಿಕವಾಗಿ ದುರ್ಬಲವಾದ ಜನರಿಗೆ ತಟ್ಟಿದೆ. ಹೀಗಾಗಿ ಇಂತಹವರು ಹಸಿವಿನಿಂದ ಬಳಲಬಾರದು ಎಂದು ಪೊಲೀಸರು ಅವರಿಗೆ ನಿತ್ಯ ಆಹಾರವನ್ನು ನೀಡುತ್ತಿದ್ದಾರೆ. ಗದಗ ಜಿಲ್ಲೆಯ ಶಿರಹಟ್ಟಿ ಪೊಲೀಸರು ಇಂಥದೊಂದು ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ.

ಸಿಪಿಐ ವಿಕಾಸ್ ಲಮಾಣಿ, ಹಾಗೂ ಶಿರಹಟ್ಟಿ ಪಿಎಸ್ಐ ನವೀನ್ ಜಕ್ಕಲಿ ಅವರು ಹಸಿದವರಿಗೆ ಅನ್ನವನ್ನು ನೀಡುವ ಕಾಯಕ ಮಾಡುತ್ತಿದ್ದಾರೆ. ಪೊಲೀಸ್​ ಇಲಾಖೆಯಿಂದ ತಮ್ಮ ಸಿಬ್ಬಂದಿಗಳಿಗೆ ನಿತ್ಯ ಆಹಾರವನ್ನು ಒದಗಿಸಲಾಗುತ್ತದೆ. ಅದೇ ವೇಳೆ ಸುಮಾರು 50 ಊಟವನ್ನು ಹೆಚ್ಚಿಗೆ ಮಾಡಿಸಿ, ಹಸಿದವರಿಗೆ ನೀಡಲಾಗುತ್ತಿದೆ. ಹೆಚ್ಚಿನ ಊಟಕ್ಕೆ ತಗಲುವ ಖರ್ಚನ್ನು ಸಿಪಿಐ ವಿಕಾಸ್ ಲಮಾಣಿ ಹಾಗೂ ಪಿಎಸ್ಐ ನವೀನ್ ಜಕ್ಕಲಿ ನೀಡುತ್ತಿದ್ದಾರೆ. ಹೀಗಾಗಿ ಅವರ ಈ ಕಾರ್ಯಕ್ಕೆ ನೆರವು ಪಡೆದ ಸಣ್ಣ ವ್ಯಾಪಾರಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ಲಸಿಕೆ ಪೂರೈಸುತ್ತಿರುವ ಗವಿ ಮೈತ್ರಿಕೂಟದಿಂದ ಭಾರತಕ್ಕೆ ಕೊರೊನಾ ಲಸಿಕೆಯ ನೆರವು

ತಾಯಿನಾಡ ಜನರ ಸಂಕಷ್ಟಕ್ಕೆ ಮಿಡಿದ ಸಾಗರದಾಚೆ ಕನ್ನಡಿಗರು; ದುಬೈನಿಂದ ಕರ್ನಾಟಕಕ್ಕೆ ಹರಿದು ಬಂತು ಸಹಾಯ ಹಸ್ತ