ಹೇಮಾವತಿ ನಾಲೆ -ಮುಂಗಾರು ಮಳೆಯ ಪ್ರಭಾವ ತನ್ನಷ್ಟಕ್ಕೆ ತಾನೇ ಉಕ್ಕುತ್ತಿದೆ ಬೋರ್​ವೆಲ್​ ನೀರು

| Updated By: ಸಾಧು ಶ್ರೀನಾಥ್​

Updated on: Oct 11, 2021 | 10:33 AM

ರಾಜಧಾನಿ ಬೆಂಗಳೂರು ಸೇರಿದಂತೆ ಆಸುಪಾಸಿನ ಭಾಗವಾದ ಬೆಂಗಳೂರು-ಕೋಲಾರ-ತುಮಕೂರು (BKT) ವ್ಯಾಪ್ತಿಯಲ್ಲಿ (ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿಸಿ) ಈ ಬಾರಿ ಭಾರೀ ಮಳೆಯಾಗುತ್ತಿದೆ. ಪಾತಾಳ ಕಚ್ಚಿದ್ದ ಅಂತರ್ಜಲ ಮಟ್ಟ ಮೇಲೆ ಮೇಲೆ ಬಂದಿದೆ. ಈ ಹಿಂದೆ, 1000-1500 ಅಡಿಗೆ ಬೋರ್​ವೆಲ್​ ಕೊರೆಸಿದರೂ ನೀರು ಬರುತ್ತಿರಲಿಲ್ಲ. ಆದರೆ ಈಗ ಕೆಲವು ಕಡೆಗಳಲ್ಲಿ ಬೋರ್​ವೆಲ್​ಗಳು ತನ್ನಷ್ಟಕ್ಕೆ ತಾನೇ ಉಕ್ಕಿ ಹರಿಯುತ್ತಿರುತ್ತಿದೆ. ಇದರಿಂದ ರೈತಾಪಿ ವರ್ಗದಲ್ಲಿನ ಸಂತಸವೂ ಉಕ್ಕಿಹರಿಯುತ್ತಿದೆ.

ಹೇಮಾವತಿ ನಾಲೆ -ಮುಂಗಾರು ಮಳೆಯ ಪ್ರಭಾವ ತನ್ನಷ್ಟಕ್ಕೆ ತಾನೇ ಉಕ್ಕುತ್ತಿದೆ ಬೋರ್​ವೆಲ್​ ನೀರು
ಹೇಮಾವತಿ ನಾಲೆ -ಮುಂಗಾರು ಪ್ರಭಾವ ತನ್ನಷ್ಟಕ್ಕೆ ತಾನೇ ಉಕ್ಕುತ್ತಿದೆ ಬೋರ್​ವೆಲ್​ ನೀರು
Follow us on

ತುಮಕೂರು: ರಾಜಧಾನಿ ಬೆಂಗಳೂರು ಸೇರಿದಂತೆ ಆಸುಪಾಸಿನ ಭಾಗವಾದ ಬೆಂಗಳೂರು-ಕೋಲಾರ-ತುಮಕೂರು (BKT) ವ್ಯಾಪ್ತಿಯಲ್ಲಿ (ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿಸಿ) ಈ ಬಾರಿ ಭಾರೀ ಮಳೆಯಾಗುತ್ತಿದೆ. ಪಾತಾಳ ಕಚ್ಚಿದ್ದ ಅಂತರ್ಜಲ ಮಟ್ಟ ಮೇಲೆ ಮೇಲೆ ಬಂದಿದೆ. ಈ ಹಿಂದೆ, 1000-1500 ಅಡಿಗೆ ಬೋರ್​ವೆಲ್​ ಕೊರೆಸಿದರೂ ನೀರು ಬರುತ್ತಿರಲಿಲ್ಲ. ಆದರೆ ಈಗ 200-300 ಅಡಿಗೆ ನೀರು ಬರುತ್ತಿದೆ. ಕೆಲವು ಕಡೆಗಳಲ್ಲಿ ಬೋರ್​ವೆಲ್​ಗಳು ತನ್ನಷ್ಟಕ್ಕೆ ತಾನೇ ಉಕ್ಕಿ ಹರಿಯುತ್ತಿರುತ್ತಿದೆ. ಇದರಿಂದ ರೈತಾಪಿ ವರ್ಗದಲ್ಲಿನ ಸಂತಸವೂ ಉಕ್ಕಿಹರಿಯುತ್ತಿದೆ.

ಸದ್ಯಕ್ಕೆ ತುಮಕೂರು ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಿಲ್ಲೆಯ ಬಹುತೇಕ ಕೆರೆ ಕುಂಟೆಗಳು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಜಿಲ್ಲೆಯ ಜನ ಪುಲ್ ಖುಷ್ ಆಗಿದ್ದಾರೆ. ಈಗಾಗಲೇ ಜಿಲ್ಲೆಯತ್ತ ಹರಿಯುತ್ತಿರುವ ಹೇಮಾವತಿ ನಾಲೆ ನೀರಿನ ಜೊತೆಗೆ ಸದ್ಯ ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ಜಿಲ್ಲೆಯಲ್ಲಿ ಅಂತರ್ಜಲಮಟ್ಟ ಮತ್ತಷ್ಟು ಏರಿದಂತಾಗಿದೆ.

ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಗ್ರಾಮದ ರೈತರೊಬ್ಬರ ಬೋರ್ ವೆಲ್ ನಲ್ಲಿ ನೀರು ಉಕ್ಕಿ ಬರುತ್ತಿದೆ. ಮಳೆಯಿಂದಾಗಿ ಹಾಗೂ ತಾಲೂಕಿಗೆ ಹೇಮೆ ಹರಿಯುತ್ತಿರುವ ಕಾರಣ ಅಂತರ್ಜಲ ಮಟ್ಟ ಏರಿ ಬೋರ್ ವೆಲ್ ನಲ್ಲಿ ನೀರು ಉಕ್ಕಿ ಬರುತ್ತಿದೆ. ಇದರಿಂದ ತಾಲೂಕಿನ ರೈತರಲ್ಲಿ ಮತ್ತಷ್ಟು ಮಂದಹಾಸ ಮೂಡಿದೆ.

ಇನ್ನು ಈ ಹಿಂದೆ ಸರಿಯಾಗಿ ಮುಂಗಾರು ಮಳೆಯಿಲ್ಲದೇ ರೈತರು ಕಂಗಲಾಗಿದ್ದರು. ರಾಗಿ, ಹೆಸರು ಕಾಳು ಸೇರಿದಂತೆ ಇತರೆ ಬೆಳೆಗಳನ್ನ ಬಿತ್ತಿ ಆಕಾಶದತ್ತ ಮುಖ ಮಾಡಿದ್ದರು. ಸದ್ಯ ನಾಲ್ಕೈದು ದಿನಗಳಿಂದ ಸುರಿದ ಮಳೆಗೆ ಹಾಗೂ ತಾಲೂಕಿಗೆ ಹರಿದು ಬರುತ್ತಿರುವ ಹೇಮೆಯಿಂದ ಬೋರ್ ವೆಲ್ ಗಳಲ್ಲಿ ನೀರು ಉಕ್ಕುತ್ತಿದೆ. ಒಟ್ಟಾರೆ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದು ಕೆರೆ ಕುಂಟೆಗಳು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಜಿಲ್ಲೆಯ ಜನರು ಪುಲ್ ಖುಷ್ ಆಗಿದ್ದಾರೆ.

Also Read:
ಬೆಂಗಳೂರಲ್ಲಿ ಬೋರ್ ವೆಲ್ ಕೊರೆಯೋದನ್ನ ನಿಲ್ಸಿ: ಅಮೆರಿಕ ತಂಡದ ಉಚಿತ ಸಲಹೆ

Also Read:
ಸೋಲಿಗರ ಜಮೀನಿನಲ್ಲಿ ಬೋರ್​ವೆಲ್ ಕೊರೆಯಲು ಅರಣ್ಯ ಇಲಾಖೆ ಹಸ್ತಕ್ಷೇಪ; ಸಮಸ್ಯೆ ಬಗೆಹರಿಸಲು ಚಾಮರಾಜನಗರ ಜಿಲ್ಲಾಡಳಿತ ಭರವಸೆ

Published On - 10:31 am, Mon, 11 October 21