AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಲಿಗರ ಜಮೀನಿನಲ್ಲಿ ಬೋರ್​ವೆಲ್ ಕೊರೆಯಲು ಅರಣ್ಯ ಇಲಾಖೆ ಹಸ್ತಕ್ಷೇಪ; ಸಮಸ್ಯೆ ಬಗೆಹರಿಸಲು ಚಾಮರಾಜನಗರ ಜಿಲ್ಲಾಡಳಿತ ಭರವಸೆ

ಬಿಳಿಗಿರಿ ರಂಗನಾಥ ಬೆಟ್ಟ ಎಂದರೆ ಸೋಲಿಗರು. ಸೋಲಿಗರು ಎಂದರೆ ಬಿಳಿಗಿರಿ ರಂಗನಾಥ ಬೆಟ್ಟ ಎಂಬ ಪರಿಸ್ಥಿತಿ ಇದೆ. ಶತಮಾನಗಳಿಂದ ನಾಡಿನ ಜನರ ಸಂಪರ್ಕವೇ ಇಲ್ಲದೇ ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸವಾಗಿರುವವರು ಸೋಲಿಗರು. ಹೀಗಾಗಿ 1962 ಮತ್ತು 2009 ರಲ್ಲಿ ಬುಡಕಟ್ಟು ಜನರಿಗೆ ಸರ್ಕಾರ ಹಕ್ಕು ಪತ್ರ ವಿತರಣೆ ಮಾಡಿದೆ.

ಸೋಲಿಗರ ಜಮೀನಿನಲ್ಲಿ ಬೋರ್​ವೆಲ್ ಕೊರೆಯಲು ಅರಣ್ಯ ಇಲಾಖೆ ಹಸ್ತಕ್ಷೇಪ; ಸಮಸ್ಯೆ ಬಗೆಹರಿಸಲು ಚಾಮರಾಜನಗರ ಜಿಲ್ಲಾಡಳಿತ  ಭರವಸೆ
ಕಾಫಿ ಕಾಯಿಯನ್ನು ಬಿಡಿಸುತ್ತಿರುವ ಮಹಿಳೆ
sandhya thejappa
|

Updated on:Mar 25, 2021 | 2:38 PM

Share

ಚಾಮರಾಜನಗರ: ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ಬುಡಕಟ್ಟು ಜನರ ಪರಿಸ್ಥಿತಿ. ತಲತಲಾಂತರಗಳಿಂದ ಅರಣ್ಯದಲ್ಲಿ ವಾಸವಿರುವ ಸೋಲಿಗರಿಗೆ ಸರ್ಕಾರ ಹಕ್ಕು ಪತ್ರ ವಿತರಣೆ ಮಾಡಿದೆ. ಆದರೆ ಅರಣ್ಯ ಇಲಾಖೆಯವರು ಮಾತ್ರ ಸರ್ಕಾರದ ಯೋಜನೆಯನ್ನು ಅನುಷ್ಠಾನ ಮಾಡಲು ಸೋಲಿಗರಿಗೆ ಅವಕಾಶ ಕೊಡುತ್ತಿಲ್ಲ. ಅರಣ್ಯ ಇಲಾಖೆ ಈ ಕ್ರಮದಿಂದ ಸೋಲಿಗರು ಕಳೆದ ಒಂದು ದಶಕಗಳಿಂದ ಹೈರಾಣಾಗಿದ್ದು, ಎಲ್ಲರಂತೆ ನಮ್ಮನ್ನೂ ಬದುಕಲು ಬಿಡಿ ಎಂದು ಕಣ್ಣೀರಿಡುತ್ತಿದ್ದಾರೆ.

ಬಿಳಿಗಿರಿ ರಂಗನಾಥ ಬೆಟ್ಟ ಎಂದರೆ ಸೋಲಿಗರು.. ಸೋಲಿಗರು ಎಂದರೆ ಬಿಳಿಗಿರಿ ರಂಗನಾಥ ಬೆಟ್ಟ ಎಂಬ ಪರಿಸ್ಥಿತಿ ಇದೆ. ಶತಮಾನಗಳಿಂದ ನಾಡಿನ ಜನರ ಸಂಪರ್ಕವೇ ಇಲ್ಲದೇ ಬಿಳಿಗಿರಿ ರಂಗನ ಬೆಟ್ಟದಲ್ಲಿ ವಾಸವಾಗಿರುವವರು ಸೋಲಿಗರು. ಹೀಗಾಗಿ 1962 ಮತ್ತು 2009 ರಲ್ಲಿ ಬುಡಕಟ್ಟು ಜನರಿಗೆ ಸರ್ಕಾರ ಹಕ್ಕು ಪತ್ರ ವಿತರಣೆ ಮಾಡಿದೆ. ಅದರಲ್ಲೂ ಅರಣ್ಯ ಹಕ್ಕು ಕಾಯ್ದೆ ಜಾರಿಯಾದ ಮೇಲೆ ಸೋಲಿಗರು ತಮ್ಮ ಹಕ್ಕುಗಳನ್ನ ಭದ್ರಪಡಿಸಿಕೊಂಡಿದ್ದಾರೆ. ಬಿಳಿಗಿರಿ ರಂಗನ ಬೆಟ್ಟದಲ್ಲಿ ಒಟ್ಟು 620 ಎಕರೆ ಕಂದಾಯ ಭೂಮಿ ಇದೆ. ಇದರ ಪೈಕಿ ಬೆಟ್ಟದಲ್ಲಿ ಹೊಸಪೋಡು, ಯರಕನಗದ್ದೆ, ಮುತುಗದಗದ್ದೆ ಹಾಡಿಗಳಲ್ಲಿ ಸೋಲಿಗರು ವಾಸವಿದ್ದಾರೆ. 3 ಹಾಡಿಗಳಲ್ಲಿ ವಾಸವಾಗಿರುವ ಸುಮಾರು 150ಕ್ಕೂ ಸೋಲಿಗ ಕುಟುಂಬಗಳಿಗೆ 128 ಎಕರೆ ಹಕ್ಕು ಪತ್ರ ವಿತರಣೆ ಮಾಡಲಾಗಿದೆ. ಇವರ ಪೈಕಿ ಕೆಲವರು ನೈಸರ್ಗಿಕವಾಗಿ ಕಾಫಿ ಬೆಳೆದಿದ್ದರೆ, ಮತ್ತೇ ಕೆಲವರು ಜೋಳ, ರಾಗಿ ಸೇರಿದಂತೆ ತರಕಾರಿ ಬೆಳೆಗಳನ್ನ ಬೆಳೆಯುತ್ತಿದ್ದಾರೆ.

2 ಎಕರೆಗೂ ಅಧಿಕವಾಗಿರುವ ಸೋಲಿಗರಿಗೆ 2010 ರಿಂದ ಇಚೇಗೆ ಸರ್ಕಾರ ವಾಲ್ಮೀಕಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್​ವೆಲ್ ನೀಡಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸೋಲಿಗರ ಜಮೀನಿನಲ್ಲಿ ಬೋರ್​ವೆಲ್ ಕೊರೆಯಲು ಬಿಡುತ್ತಿಲ್ಲ. ಬಿಳಿಗಿರಿ ರಂಗನ ಬೆಟ್ಟದಲ್ಲಿ ಇರುವ ಕಂದಾಯ ಇಲಾಖೆಗೆ ಸೇರಿದ ಜಾಗದಲ್ಲಿ ಮೊದಲು ಪೋಡಿ ನಿರ್ಮಾಣ ಮಾಡಿ ಯಾವ ಜಮೀನು ಯಾರಿಗೆ ಸೇರಿದೆ ಎಂಬುದರ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಹದ್ದುಬಸ್ತು ಮಾಡಲಿ. ಆ ನಂತರ ಬೋರ್​ವೆಲ್ ಕೊರೆಸಿ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದಾರೆ. ಇದರ ಫಲವಾಗಿ ಕಳೆದ 9 ವರ್ಷಗಳಲ್ಲಿ 17ಕ್ಕೂ ಹೆಚ್ಚು ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್​ವೆಲ್ ಮಂಜೂರಾಗಿದ್ದರೂ ಬೋರ್ ಕೊರೆಸಲು ಅವಕಾಶ ಸಿಗದೇ ವಾಪಸ್ ಹೋಗಿವೆ.

ಸೋಲಿಗರಿಗೆ ಸೇರಿದ ಕಂದಾಯ ಭೂಮಿಯಲ್ಲಿ ಬೋರ್​ವೆಲ್ ಕೊರೆಯಲು ಅವಕಾಶ ನೀಡದೇ ಇರುವ ಅರಣ್ಯ ಇಲಾಖೆ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಕೇಳಿದರೆ ಸೋಲಿಗರ ಜನಾಂಗದವರಿಗೆ ಅರಣ್ಯ ಹಕ್ಕು ಕಾಯ್ದೆ ಅಡಿ ಜಮೀನು ವಿತರಣೆ ಮಾಡಲಾಗಿದೆ. ಜೊತೆಗೆ ಆರ್​ಟಿಸಿಯಲ್ಲಿ ಫಲಾನುಭವಿಗಳ ಹೆಸರು ಬರುತ್ತಿದ್ದು, ಅವರು ಮಾಡುವ ಬೆಳೆಯ ಬಗ್ಗೆಯೂ ಮಾಹಿತಿ ಇದೆ. ಬಿಆರ್​ಟಿಯಲ್ಲಿ ದುರಸ್ತು ಆಗಬೇಕಾಗಿರುವುದು ಕೇವಲ ಕಂದಾಯ ಇಲಾಖೆ ಜಾಗ. ಅರಣ್ಯ ಇಲಾಖೆ ಅಧಿಕಾರಿಗಳು ಅನಾವಶ್ಯಕವಾಗಿ ಸೋಲಿಗರಿಗೆ ತೊಂದರೆ ಕೊಡುವುದು ತಪ್ಪು. ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್​ವೆಲ್ ಕೊರೆಸಲು ಅರಣ್ಯ ಇಲಾಖೆ ಹಸ್ತಕ್ಷೇಪ ಮಾಡುತ್ತಿದ್ದರೆ ಅವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ

ರೈತರ ಹಕ್ಕುಗಳ ರಕ್ಷಣೆ: ಬಸವಕಲ್ಯಾಣದಿಂದ ಬಳ್ಳಾರಿಯವರೆಗೆ 18 ದಿನಗಳ ಕಾಲ ನಡೆದ ರೈತರ ನಡಿಗೆ ಮುಕ್ತಾಯ

ಅಗ್ನಿ ಅವಘಡ; ಬಳ್ಳಾರಿಯಲ್ಲಿ ಕೋಟಿ ಕೋಟಿ ಮೌಲ್ಯದ ಕಾಟನ್ ಸುಟ್ಟು ಕರಕಲು

Published On - 2:21 pm, Thu, 25 March 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ