ವಶಕ್ಕೆ ಪಡೆದಿದ್ದ ಶಂಕಿತ ಉಗ್ರರನ್ನು ಬಿಡುಗಡೆ ಮಾಡಿದ ಎನ್‌ಐಎ ಅಧಿಕಾರಿಗಳು

| Updated By: ವಿವೇಕ ಬಿರಾದಾರ

Updated on: Jul 31, 2022 | 8:32 PM

ಎನ್‌ಐಎ ಅಧಿಕಾರಿಗಳು ಭಟ್ಕಳದಲ್ಲಿ ವಶಕ್ಕೆ ಪಡೆದಿದ್ದ ಶಂಕಿತ ಉಗ್ರನ್ನು ಬಿಡುಗಡೆ ಮಾಡಿದ್ದಾರೆ

ವಶಕ್ಕೆ ಪಡೆದಿದ್ದ ಶಂಕಿತ ಉಗ್ರರನ್ನು ಬಿಡುಗಡೆ ಮಾಡಿದ ಎನ್‌ಐಎ ಅಧಿಕಾರಿಗಳು
ಎನ್​ಐಎ
Image Credit source: The Print
Follow us on

ಉತ್ತರ ಕನ್ನಡ: ಎನ್‌ಐಎ (NIA) ಅಧಿಕಾರಿಗಳು ಭಟ್ಕಳ (Bhatkal) ಮತ್ತು ತುಮಕೂರಿನಲ್ಲಿ (Tumakur) ವಶಕ್ಕೆ ಪಡೆದಿದ್ದ ಶಂಕಿತ ಉಗ್ರರನ್ನು ಬಿಡುಗಡೆ ಮಾಡಿದ್ದಾರೆ. ಎನ್‌ಐಎ ಅಧಿಕಾರಿಗಳು ತುಮಕೂರಿನ ಶಂಕಿತ ಉಗ್ರ ಸಾಜಿದ್ ಮಕ್ರಾನಿ  ಮತ್ತು ಭಟ್ಕಳಿನ ಶಂಕಿತ ಉಗ್ರ ಅಬ್ದುಲ್ ಮುಖ್ತದೀರ್ (30) ನನ್ನು ಬಿಡುಗಡೆ ಮಾಡಿದ್ದಾರೆ. ಅಧಿಕಾರಿಗಳಿಗೆ ವಿಚಾರಣೆ ವೇಳೆ ಹೆಚ್ಚಿನ ಮಾಹಿತಿ ಲಭ್ಯವಾಗದ ಹಿನ್ನೆಲೆ ಬಿಡುಗಡೆ ಮಾಡಲಾಗಿದೆ. ಹೆಚ್ಚಿನ ವಿಚಾರಣೆಗೆ ದೆಹಲಿಗೆ ಬರುವಂತೆ ಎನ್‌ಐಎ ನೋಟಿಸ್‌ ನೀಡಿದ್ದಾರೆ.

ಅಬ್ದುಲ್ ಮುಖ್ತದೀರ್  ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮುಖ್ಯರಸ್ತೆ ನಿವಾಸಿಯಾಗಿದ್ದು, ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ ಉಗ್ರರ  ಅಬ್ದುಲ್ ಮುಖ್ತದೀರ್ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು.

ಇಂದು (ಜುಲೈ 31) ಬೆಳಗ್ಗೆ 3ರಿಂದ 4.15ರ ನಡುವೆ ಆರೋಪಿಯನ್ನು ಆತನ ಹೆಂಡತಿ ಮನೆಯಾದ ಚಿನ್ನದಪಳ್ಳಿಯಿಂದ ಕರೆದೊಯ್ದಿದ್ದರು. ಅಬ್ದುಲ್‌ನಿಂದ ಮೊಬೈಲ್‌ಫೋನ್‌ ಡೇಟಾ, ಇತರೆ ದಾಖಲೆಗಳನ್ನು ಎನ್‌ಐಎ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ರಹಸ್ಯ ಸ್ಥಳದಲ್ಲಿ ಶಂಕಿತ ಉಗ್ರ ಮತ್ತು ಸೋದರನನ್ನು ವಿಚಾರಣೆ ನಡೆಸಿದ್ದರು.

ಇನ್ನೂ ತುಮಕೂರಿನಲ್ಲಿ ಎನ್‌ಐಎ ವಶಕ್ಕೆ ಪಡೆದಿದ್ದ ಶಂಕಿತ ಉಗ್ರ ಸಾಜಿದ್ ಮಕ್ರಾನಿಯನ್ನು ವಿಚಾರಣೆ ಬಳಿಕ ಅಧಿಕಾರಿಗಳು ಬಿಟ್ಟುಕಳಿಸಿದ್ದಾರೆ. ಮತ್ತೆ ಕರೆದಾಗ ವಿಚಾರಣೆಗೆ ಬರುವಂತೆ ಸಾಜಿದ್ ಮಕ್ರಾನಿಗೆ ಸೂಚನೆ ನೀಡಿದ್ದಾರೆ. ಸಾಜಿದ್ ಮಕ್ರಾನಿ ಮೇಲೆ ಎನ್‌ಐಎ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ.  ಎನ್‌ಐಎ ಬೆಳಗ್ಗೆ ತುಮಕೂರಿನ ಸದಾಶಿವನಗರದಲ್ಲಿ ವಶಕ್ಕೆ ಪಡೆದಿದ್ದರು.  ಸಾಜಿದ್ ತುಮಕೂರಿನ ಯುನಾನಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ.

Published On - 8:32 pm, Sun, 31 July 22