ಹಾವೇರಿ: ರಟ್ಟೀಹಳ್ಳಿ ತಾಲೂಕಿನ ಕುಡುಪಲಿ ಗ್ರಾಮದಲ್ಲಿ ವೀರಮಹೇಶ್ವರನ ಜಾತ್ರೆಯನ್ನು ನಿನ್ನೆ ಸಂಜೆ(ಜ.12) ಆಚರಿಸಲಾಯಿತು. ಈ ವೇಳೆ, ಜಾತ್ರೆ ಆಚರಣೆಯ ಸಂಭ್ರಮದಲ್ಲಿ ವಿಶೇಷ ಅತಿಥಿಯಂತಿದ್ದ ಗೂಬೆಯೊಂದು ಕತ್ತು ಕುಣಿಸುತ್ತಾ ಸಂಭ್ರಮಿಸುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಜಾತ್ರಾ ವಿಶೇಷವಾಗಿ ದೇವಸ್ಥಾನದ ಮುಂದೆ ವೀರಮಹೇಶ್ವರನ ಗುಗ್ಗಳ ನಡೆಯುತ್ತಿತ್ತು. ವಿಜೃಂಭಣೆಯಿಂದ ಆಚರಿಸುತ್ತಿದ್ದ ವೀರಮಹೇಶ್ವರನ ಗುಗ್ಗಳದ ವೇಳೆ ಸಾಮಾಳದ ಸದ್ದಿಗೆ ಗೂಬೆಯೊಂದು ದ್ಯಾಮವ್ವದೇವಿ ದೇವಸ್ಥಾನದ ಮೇಲೆ ಕುಳಿತು ಕತ್ತು ಕುಣಿಸುತ್ತ ನಲಿಯುತ್ತಿತ್ತು. ಹತ್ತರಿಂದ ಹದಿನೈದು ನಿಮಿಷಗಳ ಕಾಲ ಗೂಬೆ ಕೂತಲ್ಲೇ ನಲಿದಾಡಿದ ದೃಶ್ಯ ಸ್ಥಳೀಯರ ಕ್ಯಾಮರಾದಲ್ಲಿ ಸೆರೆಯಾಗಿದೆ.