ಸಂಕ್ರಾಂತಿ ಸಂಭ್ರಮ ಹಿನ್ನೆಲೆ: ಸಾಂಪ್ರದಾಯಿಕವಾಗಿ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಸಂತಸದಿಂದ ಭೋಗಿ ಉತ್ಸವಾಚರಣೆ
ಸಂಕ್ರಾಂತಿ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಜನರು ಸಾಂಪ್ರದಾಯಕವಾಗಿ ಆಚರಿಸುತ್ತ ಬರುತ್ತಿದ್ದ ಬೋಗಿ ಉತ್ಸವದಲ್ಲಿ ತೊಡಗಿಕೊಂಡಿದ್ದಾರೆ.
ಹೈದರಾಬಾದ್: ನಾಳೆ(ಜ.14) ಸಂಕ್ರಾಂತಿ ಹಬ್ಬಕ್ಕಾಗಿ ಜನರು ಎದುರು ನೋಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಜನರು ಸಾಂಪ್ರದಾಯಕವಾಗಿ ಆಚರಿಸುತ್ತ ಬರುತ್ತಿದ್ದ ಭೋಗಿ ಉತ್ಸವದಲ್ಲಿ ತೊಡಗಿಕೊಂಡಿದ್ದಾರೆ. ನಟ ಮೋಹನ್ ಬಾಬು ಹಾಗೂ ಕುಟುಂಬಸ್ಥರು, ತೆಲಂಗಾಣ ಸಿ.ಎಂ ಪುತ್ರಿ ಎಂ.ಎಲ್.ಸಿ ಕವಿತಾ ಹಾಗೆ ತೆಲಂಗಾಣ ಜಾಗೃತಿ ಸಮಿತಿ ನೇತೃತ್ವದಲ್ಲಿ ಸಂಭ್ರಮ ಆಚರಣೆ ನೆರವೇರಿದೆ.
ಮನೆಯ ಮುಂದೆ ಬೃಹತ್ ಆಕಾರದ ಅಗ್ಗಿಷ್ಟಿಕೆ ನಿರ್ಮಿಸಿ ಅದರಲ್ಲಿ ಕಿಚ್ಚು ಹತ್ತಿಸಿ, ಸುತ್ತಲೂ ರಂಗೋಲಿ ಚಿತ್ರಿಸಿ ಬಣ್ಣದ ಅಲಂಕಾರ ಮಾಡಿ ಸಂಭ್ರಮಿಸಿದ್ದಾರೆ. ಭೋಗಿ ಬೆಂಕಿಯ ಸುತ್ತಲೂ ಹೆಂಗಳೆಯರು ಕೋಲಾಟ ನೃತ್ಯ ಮಾಡಿ ಸಂತಸದಿಂದ ಹಬ್ಬ ಆಚರಿಸುತ್ತಾರೆ. ಪೂರ್ವ ಗೋದಾವರಿ ಜಿಲ್ಲೆ, ಪಶ್ಚಿಮ ಗೋದಾವರಿ ಜಿಲ್ಲೆ, ಚಿತ್ತೂರು ಜಿಲ್ಲೆ, ವಿಶಾಖಪಟ್ಟಣಂ ಜಿಲ್ಲೆ ಸೇರಿ ಹಲವಾರು ಕಡೆಗಳಲ್ಲಿ ಅದ್ದೂರಿ ಭೋಗಿ ಹಬ್ಬದ ಸಂಭ್ರಮಾಚರಣೆ ಮುಗಿಲುಮುಟ್ಟಿದೆ.
ಸಂಕ್ರಾಂತಿಗೆ ಸಿದ್ದಾಪುರದ ಬಾನ್ಕುಳಿ ಮಠದ ಗೋ ಸ್ವರ್ಗದಲ್ಲಿ ಈ ಬಾರಿ ಆಲೆಮನೆಯದ್ದೇ ವಿಶೇಷ