ಯಾದಗಿರಿ: ಸರ್ಕಾರವು ತಮ್ಮ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಾರಿಗೆ ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ. ಇಂದು ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಅದೆಷ್ಟೋ ಸಾರಿಗೆ ನೌಕರರು ಕಡಿಮೆ ಸಂಬಳವಿದೆ, ಅದರಲ್ಲಿ ನಮ್ಮ ಜೀವನವನ್ನು ನಡೆಸುವುದು ಹೇಗೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇನ್ನಷ್ಟು ಮಂದಿ ನೌಕರರು ಡಿಪೋ ಬಳಿ ತಮ್ಮ ನೋವನ್ನು ಹಂಚಿಕೊಂಡು ಕಣ್ಣೀರಿಡುತ್ತಿದ್ದಾರೆ.
ನಿನ್ನೆಯಿಂದ ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಅದೆಷ್ಟೋ ಕಡೆಗಳಲ್ಲಿ ಇಲ್ಲಿಯವರೆಗೂ ಸಾರಿಗೆ ಬಸ್ಗಳು ರಸ್ತೆಗಿಳಿದಿಲ್ಲ. ಬಸ್ ಓಡಿಸುವಂತೆ ಚಾಲಕ ಮತ್ತು ನಿರ್ವಾಹಕನಿಗೆ ಅಧಿಕಾರಿಗಳು ಮನವೊಲಿಸುತ್ತಿದ್ದಾರೆ. ಯಾದಗಿರಿ ಬಸ್ ಡಿಪೋದಲ್ಲಿ ನಿರ್ವಾಹ ಶಿವಣ್ಣನ ಬಳಿ ಅಧಿಕಾರಿಗಳು ಬಸ್ ಓಡಿಸುವಂತೆ ಮನವೊಲಿಸುತ್ತಿರುವಾಗ, ಮೊನ್ನೆ 6 ನೇ ತಾರೀಕಿನಂದು ಯಾದಗಿರಿಯಿಂದ ಬೆಂಗಳೂರು ಬಸ್ನ ಡ್ಯೂಟಿಗೆ ಹೋಗಿದ್ದೆ. ನಿನ್ನೆ ಸಂಜೆ ಬೆಂಗಳೂರಿನಿಂದ ಬಸ್ ವಾಪಸ್ ಬಂದಿದ್ದು ಇಂದು ಬೆಳಿಗ್ಗೆ ಯಾದಗಿರಿಗೆ ಬಂದು ತಲುಪಿದೆ. ಬಸ್ ಇಂದ ಕೆಳಗೆ ಇಳಿದು ಹಣ ಕೊಡಲು ಹೋಗಿದ್ದೆ. ಹಣ ಕೊಡಲು ಹೋಗಿದ್ದ ನನಗೆ ಡ್ಯೂಟಿ ಮಾಡಲು ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಆದರೆ, ನಮ್ಮ ಎಲ್ಲಾ ನೌಕರರು ಮುಷ್ಕರ ಮಾಡುತ್ತಿದ್ದಾರೆ, ನಾನೊಬ್ಬ ಒಬ್ಬ ಹೇಗೆ ಡ್ಯೂಟಿ ಮಾಡಬೇಕು? ಸರ್ಕಾರ ನಮ್ಮ ಗೋಳು ಯಾಕೆ ಕೇಳಿಸಿಕೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ನಾನು 20 ವರ್ಷ ಸೇವೆ ಸಲ್ಲಿಸಿದ್ದೇನೆ ಆದರೆ ನನಗೆ 16 ಸಾವಿರ ಸಂಬಳ ಇದೆ. ಇದರಲ್ಲಿ ಹೇಗೆ ಕುಟುಂಬ ನಿರ್ವಹಣೆ ಮಾಡಬೇಕು? ಎಂದು ಡಿಪೋದಲ್ಲಿ ಕಂಡ್ಟರ್ ಶಿವಣ್ಣ ಕಣ್ಣೀರು ಹಾಕಿದ್ದಾರೆ.
ಕೆಎಸ್ಆರ್ಟಿ ಬಸ್ ನೌಕರರಿಗೆ ಬಲವಂತವಾಗಿ ಕೆಲಸ ಮಾಡಲು ಹೇಳುತ್ತಿದ್ದಾರೆ. ಒಟ್ಟು 44 ಸಿಬ್ಬಂದಿಗಳಿಗೆ ನೋಟಿಸ್ ಕೊಟ್ಟು ಬೆದರಿಕೆ ಒಡ್ಡಿದ್ದಾರೆ. ನಿನ್ನೆ ಬಸ್ ನಿಲ್ಲಿಸಿ ಹಣ ಡೆಪಾಸಿಟ್ ಮಾಡಲು ಬಂದಾಗ ನೋಟಿಸ್ ನೀಡಿದ್ದಾರೆ. 22 ಬಸ್ನ 44 ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ ಎಂದು ಟಿವಿ9ಗ ಬಳಿ ಕಂಡಕ್ಟರ್ ಮಾರುತಿ ತಮ್ಮ ನೋವು ಹಂಚಿಕೊಂಡಿದ್ದಾರೆ.
ದಾವಣಗೆರೆ: ತರಬೇತಿ ನೌಕರರಿಗೆ ಅಧಿಕಾರಿಗಳಿಂದ ಎಚ್ಚರಿಕೆ ಪತ್ರ
ಜಿಲ್ಲೆಯ ತರಬೇತಿ ಸಾರಿಗೆ ನೌಕರರಿಗೆ ಅಧಿಕಾರಿಗಳು ಎಚ್ಚರಿಗೆ ಪತ್ರ ನೀಡಿದ್ದಾರೆ. ಮುಷ್ಕರಕ್ಕೆ ಇಳಿದರೆ ಕ್ರಮ ಕೈಗೊಳ್ಳಲಾಗುವುದು. ತರಬೇತಿ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು. ಸೂಚನೆ ತಪ್ಪಿದರೆ ಆಯ್ಕೆ ಪಟ್ಟಿಯಿಂದ ತೆಗೆದುಹಾಕಲಾಗುವುದು ಎಂದು ಕೆಎಸ್ಆರ್ಟಿಸಿ ಡಿಸಿ ಅವರು ಎಚ್ಚರಿಕೆ ಪತ್ರ ನೀಡಿದ್ದಾರೆ. ಜಿಲ್ಲೆಯ 40 ತರಬೇತಿ ನೌಕರರಿಗೆ ನೊಟೀಸ್ ನೀಡಲಾಗಿದೆ.
ಮಂಗಳೂರು: 44 ಸಿಬ್ಬಂದಿಗಳಿಗೆ ನೋಟಿಸ್ ಕೊಟ್ಟು ಬೆದರಿಕೆ
ಕೆಎಸ್ಆರ್ಟಿ ಬಸ್ ನೌಕರರಿಗೆ ಬಲವಂತವಾಗಿ ಕೆಲಸ ಮಾಡಲು ಹೇಳುತ್ತಿದ್ದಾರೆ. ಒಟ್ಟು 44 ಸಿಬ್ಬಂದಿಗಳಿಗೆ ನೋಟಿಸ್ ಕೊಟ್ಟು ಬೆದರಿಕೆ ಒಡ್ಡಿದ್ದಾರೆ. ನಿನ್ನೆ ಬಸ್ ನಿಲ್ಲಿಸಿ ಹಣ ಡಿಪಾಸಿಟ್ ಮಾಡಲು ಬಂದಾಗ ನೋಟಿಸ್ ನೀಡಿದ್ದಾರೆ. 22 ಬಸ್ನ 44 ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ ಎಂದು ಟಿವಿಗೆ ಬಳಿ ಕಂಡಕ್ಟರ್ ಮಾರುತಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Karnataka Bus Strike Live: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ, ಪೊಲೀಸರ ಭದ್ರತೆಯೊಂದಿಗೆ ಕೆಲ ಬಸ್ ಸಂಚಾರ
Published On - 11:11 am, Thu, 8 April 21