ರಾಜ್ಯದಲ್ಲಿ ಲಾಕ್‌ಡೌನ್ ಮಾಡಬೇಕಾದ ಅಗತ್ಯವಿಲ್ಲ -ಸಿಎಂ ಯಡಿಯೂರಪ್ಪ
ಬೆಂಗಳೂರು: ಕೊರೊನಾ ಸಂಬಂಧಿಸಿ ನಾಳೆ ಪ್ರಧಾನಿ ಮೋದಿ ಜೊತೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ನಾಳೆ ನಡೆಯಲಿರುವ ವಿಡಿಯೋ ಕಾನ್ಫರೆನ್ಸ್ನಲ್ಲಿ ಪ್ರಧಾನಿಯವರಿಗೆ ಮಾಡಲಿರುವ ಮನವಿ ಬಗ್ಗೆ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಲಾಕ್‌ಡೌನ್ ಮಾಡಬೇಕಾದ ಅಗತ್ಯವಿಲ್ಲ. ಈ ಬಗ್ಗೆ ಪ್ರಧಾನಿ ಜೊತೆ ವಿಡಿಯೋ ಕಾನ್ಫರೆನ್ಸ್ ವೇಳೆ ಹೇಳುತ್ತೇನೆ ಎಂದ್ರು. ಹಾಗೂ ರಾಜ್ಯದಲ್ಲಿ ಜನಜೀವನ ಮತ್ತಷ್ಟು ರಿಲ್ಯಾಕ್ಸ್ ಆಗಲಿದೆ. ಆರ್ಥಿಕಸ್ಥಿತಿ ಸುಧಾರಣೆಗೆ ಅವಕಾಶ ನೀಡಲು ಮನವಿ ಮಾಡುತ್ತೇನೆ ಎಂದರು. […]
ಬೆಂಗಳೂರು: ಕೊರೊನಾ ಸಂಬಂಧಿಸಿ ನಾಳೆ ಪ್ರಧಾನಿ ಮೋದಿ ಜೊತೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ನಾಳೆ ನಡೆಯಲಿರುವ ವಿಡಿಯೋ ಕಾನ್ಫರೆನ್ಸ್ನಲ್ಲಿ ಪ್ರಧಾನಿಯವರಿಗೆ ಮಾಡಲಿರುವ ಮನವಿ ಬಗ್ಗೆ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಲಾಕ್‌ಡೌನ್ ಮಾಡಬೇಕಾದ ಅಗತ್ಯವಿಲ್ಲ. ಈ ಬಗ್ಗೆ ಪ್ರಧಾನಿ ಜೊತೆ ವಿಡಿಯೋ ಕಾನ್ಫರೆನ್ಸ್ ವೇಳೆ ಹೇಳುತ್ತೇನೆ ಎಂದ್ರು. ಹಾಗೂ ರಾಜ್ಯದಲ್ಲಿ ಜನಜೀವನ ಮತ್ತಷ್ಟು ರಿಲ್ಯಾಕ್ಸ್ ಆಗಲಿದೆ. ಆರ್ಥಿಕಸ್ಥಿತಿ ಸುಧಾರಣೆಗೆ ಅವಕಾಶ ನೀಡಲು ಮನವಿ ಮಾಡುತ್ತೇನೆ ಎಂದರು.
ಕೊರೊನಾ ಮುಕ್ತವಾಗಲಿ ಎಂದು ಧನ್ವಂತರಿ ಮಹಾಯಜ್ಞ: ಕೊರೊನಾ ಮುಕ್ತವಾಗಲಿ ಎಂದು ಲೋಕ ಕಲ್ಯಾಣಾರ್ಥವಾಗಿ ಶಂಕರಪುರಂನಲ್ಲಿರುವ ಶಂಕರ ಮಠದಲ್ಲಿ ಧನ್ವಂತರಿ ಮಹಾಯಜ್ಞ ಮಾಡಲಾಗಿದೆ. ಸ್ವಾಮಿ ವಿವೇಕಾನಂದ ಸೇವಾ ಸಮಿತಿ ಆಯೋಜನೆ ಮಾಡಿದ ಮಹಾಯಜ್ಞಕ್ಕೆ ಸಿಎಂ ಯಡಿಯೂರಪ್ಪ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್, ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಸಚಿವ ಸಿ.ಟಿ. ರವಿ, ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಸುಬ್ರಮಣ್ಯ, ಡಾ. ಸುಧಾಕರ್ ಭಾಗಿಯಾಗಿದ್ದರು.
Published On - 11:27 am, Tue, 16 June 20