
ಬೆಂಗಳೂರು, ಮಾರ್ಚ್ 27: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದೆ. ಯಾರೊಬ್ಬರು ಕೂಡಾ ಕಾವೇರಿ ನೀರಿನ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ. ಹೀಗಾಗಿ ಚುನಾವಣೆ ಮುಂದೂಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಆಗ್ರಹಿಸಿದ್ದಾರೆ. ನೀರಿಗಾಗಿ ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳಿಂದ ಮೈಸೂರ್ ಬ್ಯಾಂಕ್ ವೃತ್ತದಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡಲಾಗಿದೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೀರಿಲ್ಲ. ಎಲ್ಲೆಡೆ ಹಾಹಾಕಾರ ಶುರುವಾಗಿದೆ. ಹೀಗೆ ಮುಂದುವವರಿದರೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಧಿಕಾರ, ನಿರ್ವಹಣಾ ಸಮಿತಿ ತಮಿಳುನಾಡಿಗೆ ನೀರು ಹರಿಸಿದೆ. ಬೆಂಗಳೂರಲ್ಲಿ ಕುಡಿಯಲು ನೀರಿಲ್ಲ, ನೀರಿಗೆ ಹಾಹಾಕಾರ ಶುರುವಾಗಿದೆ. ಯಾರೊಬ್ಬರು ಕೂಡಾ ಕಾವೇರಿ ನೀರಿನ ಬಗ್ಗೆ ಪ್ರಸ್ತಾಪ ಮಾಡುತ್ತಿಲ್ಲ. ಹೀಗೆ ಮುಂದುವವರಿದರೆ ಕರ್ನಾಟಕ ಬಂದ್ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bangalore Water Crisis: ಬೆಂಗಳೂರಿನ ಜನ ಹೀಗೆಲ್ಲ ನೀರು ಉಳಿಸುತ್ತಿದ್ದಾರೆ ನೋಡಿ!
ಪ್ರತಿಭಟನೆಯಲ್ಲಿ 50 ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ಖಾಲಿ ಕೊಡ ಹಿಡಿದು ಮೈಸೂರು ಬ್ಯಾಂಕ್ ವೃತ್ತ ಬಳಿ ರಸ್ತೆ ತಡೆಗೆ ಯತ್ನಿಸಲಾಗಿದೆ. ಈ ವೇಳೆ ಮುಂಜಾಗ್ರತಾ ಕ್ರಮವಾಗಿ ಬಿಎಂಟಿಸಿ ಬಸ್ನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕನ್ನಡ ಧ್ವಜ ಹಾಗೂ ಖಾಲಿ ಕೊಡ ಪ್ರದರ್ಶನ ಮಾಡಲಾಗಿದ್ದು, ಬೇಕೆ ಬೇಕು ಕಾವೇರಿ ನೀರು ಬೇಕು ಅಂತ ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು BWSSB ಮೂಲಕ ಜನರಿಗೆ ಉಚಿತವಾಗಿ ನೀರು ಕೊಡುತ್ತಿದೆ. ಆದರೆ ಆ ಟ್ಯಾಂಕರ್ಗಳ ಮೂಲಕ ವರ್ತೂರು, ಬೆಳ್ಳಂದೂರು ಸುತ್ತುಮುತ್ತಲಿನ ಏರಿಯಾಗಳಿಗೆ ಕೊಡ್ತಿರೋ ನೀರು ಬಳಸಲು ಯೋಗ್ಯವಾಗಿಲ್ಲ. ಕಲುಷಿತ ನೀರನ್ನ ಫಿಲ್ಟರ್ ಮಾಡಿ, ಸಪ್ಲೈ ಮಾಡ್ತಿದ್ದಾರೆಂದು ಜನರು ಆರೋಪಿಸಿದ್ದಾರೆ. ಇನ್ನು, 20 ದಿನಗಳಲ್ಲಿ 2 ಬಾರಿ ಮಾತ್ರ ನೀರು ನೀಡಲಾಗಿದೆ. ವಾಟರ್ ಮ್ಯಾನ್ಗಳು ಕಳ್ಳಾಟ ಆಡ್ತಾರೆ ಅಂತ ನಿವಾಸಿಗಳು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನೀರಿನ ಸಮಸ್ಯೆ: ಕನ್ನಡದಲ್ಲಿ ಟ್ವೀಟ್ ಮಾಡಿ ಪರಿಹಾರ ತಿಳಿಸಿದ ಮೆಗಾ ಸ್ಟಾರ್ ಚಿರಂಜೀವಿ
ಇನ್ನು, ನಗರದಲ್ಲಿ ಅಂತರ್ಜಲಮಟ್ಟ ಏರಿಕೆಗೆ ಜಲಮಂಡಳಿ ಹೊಸ ಸಾಹಸಕ್ಕೆ ಕೈಹಾಕಿದೆ. ವೃಷಭಾವತಿಯ ತ್ಯಾಜ್ಯ ನೀರನ್ನ ಸಂಸ್ಕರಿಸಿ ಈಗಾಗಲೇ ನಾಯಂಡಹಳ್ಳಿ ಕೆರೆಗೆ ಬಿಟ್ಟಿದ್ದರು. ಈಗ ಕೆಂಗೇರಿ ಕೆರೆಯನ್ನ ತುಂಬಿಸಲಾಗುತ್ತಿದೆ. ಹೀಗೆ 8 ಕೆರೆಗಳನ್ನ ತುಂಬಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.