ಮಂಗಳೂರು: ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉಗ್ರ ಪ್ರತಿಭಟನೆ ನಡೆಯುತ್ತಿತ್ತು. ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿತ್ತು. ಈ ವೇಳೆ ಪೊಲೀಸರ ಫೈರಿಂಗ್ನಿಂದ ಇಬ್ಬರು ಮೃತಪಟ್ಟಿದ್ದರು. ಇಂದು ಮಂಗಳೂರಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕಿಡಿಗೇಡಿಗಳು ಫೈರ್ ಆರ್ಮ್ಸ್ ಇದ್ದ ಕಟ್ಟಡದ ಗೋಡೆ ಒಡೆದು ನುಗ್ಗಲು ಯತ್ನಿಸಿದ್ರು. ಈ ವೇಳೆ ಪೊಲೀಸರು ಒಂದು ಕ್ಷಣ ತಡಮಾಡಿದ್ರೆ ದೊಡ್ಡ ದುರ್ಘಟನೆ ನಡೆಯುತ್ತಿತ್ತು. ಆಗ ಪೊಲೀಸರು ಕಿಡಿಗೇಡಿಗಳ ಮೇಲೆ ಫೈರಿಂಗ್ ನಡೆಸಿದ್ದಾರೆ. ಒಂದು ವೇಳೆ ಅಂದು ಕಿಡಿಗೇಡಿಗಳ ಕೈಗೆ ಶಸ್ತ್ರಾಸ್ತ್ರಗಳು ಸಿಕ್ಕಿದ್ರೆ ಏನಾಗುತ್ತಿತ್ತು? ಅಲ್ಲಿದ್ದ ಬಂದೂಕುಗಳನ್ನ, ಶಸ್ತ್ರಾಸ್ತ್ರಗಳನ್ನ ಬಳಸಿಕೊಂಡು ಆಗ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.