CAA ವಿರುದ್ಧ ಸಿದ್ದರಾಮಯ್ಯ ಬೇಕಿದ್ದರೆ ಹಕ್ಕುಚ್ಯುತಿ ಮಂಡಿಸಲಿ: ಸಿ.ಸಿ.ಪಾಟೀಲ್
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ಯಾವ ನ್ಯೂನತೆ ಬಗ್ಗೆ ಮಾಜಿ ಸಿ ಎಂ ಸಿದ್ದರಾಮಯ್ಯನವರಿಗೆ ಯಾವ ಆಕ್ಷೇಪವಿದೆಯೋ ಗೊತ್ತಿಲ್ಲ. ಸಿದ್ದರಾಮಯ್ಯನವರಿಗೆ ಹಕ್ಕುಚ್ಯುತಿ ಮಂಡಿಸುವ ಹಕ್ಕು ಇದೆ. ಬೇಕಿದ್ದರೆ ಸಿದ್ದರಾಮಯ್ಯ ಹಕ್ಕುಚ್ಯುತಿಯನ್ನು ಮಂಡನೆ ಮಾಡಲಿ. ಆದರೆ ರಾಜ್ಯದ ಮುಗ್ಧ ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಬೆಂಗಳೂರಿನ BJP ಕಚೇರಿಯಲ್ಲಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ. ಪ್ರತಿಪಕ್ಷ ನಾಯಕರನ್ನು ಮಂಗಳೂರಿಗೆ ಹೋಗದಂತೆ ತಡೆದಿದ್ದು ಏಕೆ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ನಾನು ಈಗ ಉತ್ತರಿಸಲು ಹೋಗುವುದಿಲ್ಲ. ರಾಜ್ಯ ಸಹಜ […]
ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆಯಲ್ಲಿ ಯಾವ ನ್ಯೂನತೆ ಬಗ್ಗೆ ಮಾಜಿ ಸಿ ಎಂ ಸಿದ್ದರಾಮಯ್ಯನವರಿಗೆ ಯಾವ ಆಕ್ಷೇಪವಿದೆಯೋ ಗೊತ್ತಿಲ್ಲ. ಸಿದ್ದರಾಮಯ್ಯನವರಿಗೆ ಹಕ್ಕುಚ್ಯುತಿ ಮಂಡಿಸುವ ಹಕ್ಕು ಇದೆ. ಬೇಕಿದ್ದರೆ ಸಿದ್ದರಾಮಯ್ಯ ಹಕ್ಕುಚ್ಯುತಿಯನ್ನು ಮಂಡನೆ ಮಾಡಲಿ. ಆದರೆ ರಾಜ್ಯದ ಮುಗ್ಧ ಜನರ ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಬೆಂಗಳೂರಿನ BJP ಕಚೇರಿಯಲ್ಲಿ ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.
ಪ್ರತಿಪಕ್ಷ ನಾಯಕರನ್ನು ಮಂಗಳೂರಿಗೆ ಹೋಗದಂತೆ ತಡೆದಿದ್ದು ಏಕೆ ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ನಾನು ಈಗ ಉತ್ತರಿಸಲು ಹೋಗುವುದಿಲ್ಲ. ರಾಜ್ಯ ಸಹಜ ಪರಿಸ್ಥಿತಿಗೆ ಮರಳುತ್ತಿದೆ. ಜವಾಬ್ದಾರಿಯುತ ಮಂತ್ರಿ ಸ್ಥಾನದಲ್ಲಿರುವ ಕಾರಣಕ್ಕೆ ನಾನು ಬೇರೆ ಪಕ್ಷದವರಂತೆ ಮನಸ್ಸಿಗೆ ಬಂದಂತೆ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಸಚಿವ ಸಿ.ಸಿ. ಪಾಟೀಲ್ ತಿಳಿಸಿದರು.
Published On - 2:26 pm, Sat, 21 December 19