ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ಲ್ಯಾಪ್‌ಟಾಪ್ ಕಳ್ಳತನ ಮಾಡಿದ ಘಟನೆಯೊಂದು ಬೆಂಗಳೂರಿನ ವೀರನಪಾಳ್ಯದ ಸೋನಾ ಟವರ್ ಅಪಾರ್ಟ್‌ಮೆಂಟ್‌ನ ಮೊದಲನೇ ಮಹಡಿಯಲ್ಲಿ ನಡೆದಿದೆ. ಸ್ನೇಹಾ ಎಂಬುವವರಿಗೆ ಸೇರಿದ ಲ್ಯಾಪ್‌ಟಾಪ್ ಕಳ್ಳತನವಾಗಿದ್ದು, ಸೂಟು ಬೂಟು ಹಾಕಿಕೊಂಡು ಬಂದ ಕಳ್ಳ ಬಾಗಿಲು ಓಪನ್ ಇರುವುದನ್ನು ನೋಡಿ ಮನೆ ಒಳಗೆ ನುಗ್ಗಿ ಲ್ಯಾಪ್‌ಟಾಪ್ ಹೊತ್ತೋಯ್ದಿದ್ದಾನೆ. ಸದ್ಯ ಕಳ್ಳತನದ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವೀರನಪಾಳ್ಯದಲ್ಲಿರುವ ಸೋನಾ ಟವರ್ ಅಪಾರ್ಟ್‌ಮೆಂಟ್‌ನ 4 ಮಹಡಿ ಇಡೀ ಓಡಾಡಿದ್ದ ವ್ಯಕ್ತಿ, ಓಪನ್ ಇದ್ದ ಮನೆಗಳನ್ನೇ ಟಾರ್ಗೆಟ್ ಮಾಡಿದ್ದಾನೆ. ಬಾಗಿಲು ಓಪನ್ ಇಟ್ಟು ಬಾಲ್ಕನಿಯಲ್ಲಿ ಸ್ನೇಹ ನಿಂತಿದ್ದರು, ಇನ್ನು ಸ್ನೇಹ ತಾಯಿ ಬೆಡ್ ರೂಂನಲ್ಲಿ ಮಲಗಿದ್ದರು. ಆದರೆ ಈ ವೇಳೆ ಹಾಲ್ನಲ್ಲಿ ಯಾರು ಇರಲಿಲ್ಲ. ಇದನ್ನು ಕಿಟಕಿ ಮೂಲಕ ನೋಡಿ ಖಾತರಿ ಪಡಿಸಿಕೊಂಡ ಕಳ್ಳ, ನಂತರ ಒಳಗೆ ನುಗ್ಗಿ ಡೈನಿಂಗ್ ಟೇಬಲ್ನಲ್ಲಿ ಇದ್ದ ಲ್ಯಾಪ್‌ಟಾಪ್ ಕದ್ದು ಪರಾರಿಯಾಗಿದ್ದಾನೆ.
ಜುಲೈ 7 ರಂದು ಮಧ್ಯಾಹ್ನ 3 ಗಂಟೆ 50 ನಿಮಿಷ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ನಿನ್ನೆ ( ಜುಲೈ 10) ಕೂಡ ಸೋನ ಟವರ್ ಅಪಾರ್ಟ್ಮೆಂಟ್ನಲ್ಲಿ ಕಳ್ಳತನವಾಗಿದ್ದು, ಬೆಳಗಿನ ಜಾವ 5.30 ರ ಸುಮಾರಿಗೆ ಬಂದ ಕಳ್ಳರು, ಮೊಬೈಲ್ ಅನ್ನು ಕಳ್ಳತನ ಮಾಡಿದ್ದಾರೆ. ಸದ್ಯ ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೀರಗೊಂಡನಹಳ್ಳಿ ಕೊಟ್ಟಿಗೆಯಲ್ಲಿದ್ದ 2 ಹಸು ಕಳವು
ಕೊಟ್ಟಿಗೆಯಲ್ಲಿದ್ದ 2 ಹಸು ಕಳವಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೀರಗೊಂಡನಹಳ್ಳಿಯಲ್ಲಿ ನಡೆದಿದೆ. ರೈತ ಹರೀಶ್ ಕುಮಾರ್‌ಗೆ ಸೇರಿದ 2 ಸೀಮೆಹಸು ಕಳ್ಳತನವಾಗಿದೆ. ದಿನದಲ್ಲಿ 30 ಲೀಟರ್ ಹಾಲು ಕೊಡುತ್ತಿದ್ದ ಹಸುಗಳು ಇದಾಗಿದ್ದು, ಜೀವನಾಧಾರವಾಗಿದ್ದ ಹಸುಗಳನ್ನು ಕಳೆದುಕೊಂಡು ರೈತ ಹರೀಶ್ ಕಂಗಾಲಾಗಿದ್ದಾರೆ. ಸದ್ಯ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕಳ್ಳರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಇದನ್ನೂ ಓದಿ:
ಪೊಲೀಸ್ ಮನೆಯಲ್ಲೇ ಕಳ್ಳತನ ಮಾಡಿ ಕ್ಷಮೆ ಪತ್ರ ಬರೆದಿಟ್ಟ ಖದೀಮ; ಮತ್ತೊಂದೆಡೆ ಕಳ್ಳನಿಗೆ ಮನೆ ಮಾಲೀಕನ ಜಾಣ ಪತ್ರ!
ಯಾದಗಿರಿಯಲ್ಲಿ ಡಿಸೇಲ್ ಕಳವು; 30 ಮೀಟರ್ ದೂರದಿಂದಲೇ 5 ಸಾವಿರ ಲೀಟರ್ ಡಿಸೇಲ್ ಕಳ್ಳತನ
Published On - 9:41 am, Sun, 11 July 21