Kannada News Karnataka Thirty Five ips officers transferred in karnataka state government order
ಮೊನ್ನೆ 10, ಇಂದು 35; ರಾತ್ರೋರಾತ್ರಿ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ
ರಾಜ್ಯದ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಸ್ಥಳ ಕೂಡ ನಿಯೋಜನೆ ಮಾಡದೇ ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಖಡಕ್ ಆಫಿಸರ್ ಎಂದು ಹೆಸರುವಾಸಿಯಾಗಿದ್ದ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಮಂಗಳೂರು ಪೊಲೀಸ್ ಕಮಿಷನರ್ ಕುಲ್ದೀಪ್ ಕುಮಾರ್ ಜೈನ್ ಕೂಡ ವರ್ಗಾವಣೆಗೊಂಡಿದ್ದಾರೆ.
ಮಂಗಳೂರು, ಸೆ.05: ರಾಜ್ಯ ಸರ್ಕಾರ(State Government) ರಾತ್ರೋರಾತ್ರಿ ಪೊಲೀಸ್ ಇಲಾಖೆಯಲ್ಲಿ(Police Department) ಮೇಜರ್ ಸರ್ಜರಿ ಮಾಡಿದೆ. ಕಳೆದ ಎರಡು ದಿನಗಳ ಹಿಂದಷ್ಟೇ 2018, 2019 ಮತ್ತು 2020ರ ಬ್ಯಾಚ್‌ನ ಹತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಈಗ ಮತ್ತೆ ರಾಜ್ಯದ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಸ್ಥಳ ಕೂಡ ನಿಯೋಜನೆ ಮಾಡದೇ ವರ್ಗಾವಣೆ ಮಾಡಲಾಗಿದೆ. ಅಲ್ಲದೆ ಖಡಕ್ ಆಫಿಸರ್ ಎಂದು ಹೆಸರುವಾಸಿಯಾಗಿದ್ದ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಮಂಗಳೂರು ಪೊಲೀಸ್ ಕಮಿಷನರ್ ಕುಲ್ದೀಪ್ ಕುಮಾರ್ ಜೈನ್ ಕೂಡ ವರ್ಗಾವಣೆಗೊಂಡಿದ್ದು ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅನುಪಮ್ ಅಗರ್ವಾಲ್ ನೇಮಕಗೊಂಡಿದ್ದಾರೆ.
ವರ್ಗಾವಣೆ ವಿವರ ಹೀಗಿದೆ
ಅನುಪಮ್ ಅಗರ್ವಾಲ್-ಮಂಗಳೂರು ಸಿಟಿ ಕಮಿಷನರ್
ಡಾ.S.D.ಶರಣಪ್ಪ-ಡಿಐಜಿಪಿ & ಡೈರೆಕ್ಟರ್, ಪೊಲೀಸ್ ಅಕಾಡೆಮಿ, ಮೈಸೂರು
ವರ್ತಿಕಾ ಕಟಿಯಾರ್-ಎಸ್ಪಿ, ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋ
ಕಾರ್ತಿಕ್ ರೆಡ್ಡಿ-ಡಿಸಿಪಿ, ಬೆಂಗಳೂರು ಸಂಚಾರ ದಕ್ಷಿಣ ವಿಭಾಗ
ಕೆ.ಸಂತೋಷ್ ಬಾಬು-ಡಿಸಿಪಿ ಆಡಳಿತ ವಿಭಾಗ, ಬೆಂಗಳೂರು ನಗರ
ಯತೀಶ್ ಚಂದ್ರ-ಎಸ್ಪಿ, ಆಂತರಿಕ ಭದ್ರತಾ ವಿಭಾಗ
ಡಾ.ಭೀಮಾಶಂಕರ ಗುಳೇದ್-ಎಸ್ಪಿ, ಬೆಳಗಾವಿ
ನಿಕಂ ಪ್ರಕಾಶ್ ಅಮ್ರಿತ್-ಎಸ್ಪಿ, ವೈರ್ ಲೆಸ್
ರಾಹುಲ್ ಕುಮಾರ್ ಶಹಾಪುರವಾಡ್-ಡಿಸಿಪಿ, ಬೆಂಗಳೂರು ದಕ್ಷಿಣ ವಿಭಾಗ
ಡಿ.ದೇವರಾಜ್-ಡಿಸಿಪಿ, ಬೆಂಗಳೂರು ಪೂರ್ವ ವಿಭಾಗ
ಅಬ್ದುಲ್ ಅಹದ್-ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ
ಎಸ್.ಗಿರೀಶ್-ಡಿಸಿಪಿ, ಬೆಂಗಳೂರು ಪಶ್ಚಿಮ ವಿಭಾಗ
ಸಂಜೀವ್ ಎಂ. ಪಾಟೀಲ್-ಡಿಸಿಪಿ, ವೈಟ್ಫೀಲ್ಡ್ ವಿಭಾಗ
ಕೆ.ಪರಶುರಾಮ್-ಎಸ್ಪಿ, ಇಂಟೆಲಿಜೆನ್ಸ್ ವಿಭಾಗ
H.D.ಆನಂದ್ ಕುಮಾರ್-ಡೈರೆಕ್ಟೋರೆಟ್ ಸಿವಿಲ್ ರೈಟ್ಸ್, ಎನ್ಪೋರ್ಸ್ಮೆಂಟ್
ಡಾ.ಸುಮನ್ ಡಿ.ಪನ್ನೇಕರ್-ಎಐಜಿಪಿ, ಹೆಡ್ ಕ್ವಾರ್ಟರ್ಸ್-1
ಕಿಶೋರ್ ಬಾಬು- SP&ಪ್ರಿನ್ಸಿಪಲ್, ಪೊಲೀಸ್ ತರಬೇತಿ ಕೇಂದ್ರ, ಕಲಬುರಗಿ
ಡಾ.ಕೋನ ವಂಶಿಕೃಷ್ಣ-ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು
ಲಕ್ಷ್ಮಣ್ ನಿಂಬರಗಿ-ಎಸ್ಪಿ, ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋ
ಡಾ.ಕೆ.ಅರುಣ್-ಎಸ್ಪಿ, ಉಡುಪಿ
ಎಂ.ಎಸ್.ಮಹಮ್ಮದ್ ಸುಜೀತಾ-ಎಸ್ಪಿ, ಹಾಸನ
ಜಯಪ್ರಕಾಶ್-ಎಸ್ಪಿ, ಇಂಟೆಲಿಜೆನ್ಸ್ ವಿಭಾಗ
ಶೇಖರ್.ಹೆಚ್.ತೆಕ್ಕನ್ನವರ್, ಡಿಸಿಪಿ, ಸಿಸಿಬಿ ಬೆಂಗಳೂರು
ಸಾರಾ ಫಾತೀಮಾ-ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ
ಸೋನಾವಾನೆ ರಿಷಿಕೇಶ್ ಭಗವಾನ್-ಎಸ್ಪಿ, ವಿಜಯಪುರ
ಲೋಕೇಶ್ ಭರಮಪ್ಪ-ಎಸ್ಪಿ, ರಾಜ್ಯ ಪೊಲೀಸ್ ಅಕಾಡೆಮಿ, ಮೈಸೂರು
ಆರ್.ಶ್ರೀನಿವಾಸ್ ಗೌಡ-ಡಿಸಿಪಿ 2, ಸಿಸಿಬಿ ಬೆಂಗಳೂರು
ಪಿ.ಕೃಷ್ಣಕಾಂತ್-ಎಐಜಿಪಿ(ಆಡಳಿತ ವಿಭಾಗ)
ವೈ.ಅಮರನಾಥ್ ರೆಡ್ಡಿ-ಎಸ್ಪಿ, ಬಾಗಲಕೋಟ
ಹರಿರಾಮ್ ಶಂಕರ್-ಎಸ್ಪಿ, ಇಂಟೆಲಿಜೆನ್ಸ್ ವಿಭಾಗ
ಅದ್ದೂರು ಶ್ರೀನಿವಾಸುಲು-ಎಸ್ಪಿ, ಕಲಬುರಗಿ
ಅನ್ಶು ಕುಮಾರ್-ಎಸ್ಪಿ, ಕೋಸ್ಟಲ್ ಸೆಕ್ಯುರಿಟಿ ಪೊಲೀಸ್, ಉಡುಪಿ
ಕನ್ನಿಕಾ ಸಿಕ್ರಿವಾಲ್-ಡಿಸಿಪಿ, ಕಾನೂನು ಸುವ್ಯವಸ್ಥೆ, ಕಲಬುರಗಿ
ಕುಶಾಲ್ ಚೌಸ್ಕಿ-ಜಂಟಿ ನಿರ್ದೇಶಕ, ವಿಧಿವಿಜ್ಞಾನ ಪ್ರಯೋಗಾಲಯ, ಬೆಂಗಳೂರು
ರವೀಂದ್ರ ಕಾಶಿನಾಥ್ ಗಡದಿ-ಎಸ್ಪಿ, ಇಂಟೆಲಿಜೆನ್ಸ್ ವಿಭಾಗ
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ