ಕರ್ನಾಟಕದಲ್ಲೂ ಶೀಘ್ರದಲ್ಲೇ ಜಾರಿಯಾಗಲಿದೆಯಾ ನೂತನ ಜನಸಂಖ್ಯಾ ನೀತಿ?- ಸಿ.ಟಿ.ರವಿ ಟ್ವೀಟ್​ನ ಅರ್ಥವೇನು !

| Updated By: Lakshmi Hegde

Updated on: Jul 13, 2021 | 3:37 PM

ಉತ್ತರ ಪ್ರದೇಶದಲ್ಲಿ ಇತ್ತೀಚೆಗಷ್ಟೇ 2021-2030ರ ಜನಸಂಖ್ಯಾ ನೀತಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅನಾವರಣಗೊಳಿಸಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಣ ಮತ್ತು ತಾಯಿ-ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶವನ್ನಿಟ್ಟುಕೊಂಡು ಈ ಹೊಸ ನೀತಿ ರೂಪಿಸಲಾಗಿದೆ.

ಕರ್ನಾಟಕದಲ್ಲೂ ಶೀಘ್ರದಲ್ಲೇ ಜಾರಿಯಾಗಲಿದೆಯಾ ನೂತನ ಜನಸಂಖ್ಯಾ ನೀತಿ?- ಸಿ.ಟಿ.ರವಿ ಟ್ವೀಟ್​ನ ಅರ್ಥವೇನು !
ಸಿಟಿ ರವಿ
Follow us on

ಬೆಂಗಳೂರು: ಉತ್ತರ ಪ್ರದೇಶ ಮತ್ತು ಆಸ್ಸಾಂ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ನೀತಿಯನ್ನು ಅನುಷ್ಠಾನಗೊಳಿಸುತ್ತಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಅಂಥದ್ದೊಂದು ನೀತಿ ಜಾರಿಗೊಳಿಸುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನ್ನಾಡಿದ್ದಾರೆ. ಸೀಮಿತವಾಗಿ ಇರುವ ನೈಸರ್ಗಿಕ ಸಂಪತ್ತಿನ ಮಧ್ಯೆ ಮಿತಿಮೀರುತ್ತಿರುವ ಜನಸಂಖ್ಯೆಯಿಂದ ಅನೇಕ ಸಮಸ್ಯೆಗಳು ಉಂಟಾಗುತ್ತಿರುವ ಬೆನ್ನಲ್ಲೇ ಜನಸಂಖ್ಯಾ ನಿಯಂತ್ರಣ ನೀತಿಯ ಉತ್ತರಪ್ರದೇಶ, ಅಸ್ಸಾಂ ಸೇರಿ ಕೆಲವು ರಾಜ್ಯಗಳು ಆಸಕ್ತಿ ತೋರುತ್ತಿವೆ. ಉತ್ತರ ಪ್ರದೇಶ ಸರ್ಕಾರ ಮಸೂದೆಯ ಒಂದು ಕರಡನ್ನೂ ಬಿಡುಗಡೆ ಮಾಡಿದ್ದು, ಸಾರ್ವಜನಿಕರಿಂದ ಆಕ್ಷೇಪ, ಪ್ರತಿಕ್ರಿಯೆಗಳನ್ನು ನಿರೀಕ್ಷೆ ಮಾಡಿದೆ.

ಬಿಜೆಪಿ ಸರ್ಕಾರವಿರುವ ಉತ್ತರಪ್ರದೇಶ ಮತ್ತು ಅಸ್ಸಾಂನಲ್ಲಿ ನೂತನ ಜನಸಂಖ್ಯಾ ನೀತಿ ಅನುಷ್ಠಾನಕ್ಕೆ ಬರುತ್ತಿರುವ ವಿಚಾರವಾಗಿ ಟ್ವೀಟ್ ಮಾಡಿರುವ ಸಿ.ಟಿ.ರವಿ, ಜನಸಂಖ್ಯೆ ಸ್ಫೋಟವಾದರೆ ಸೀಮಿತ ನೈಸರ್ಗಿಕ ಸಂಪತ್ತಿನಲ್ಲಿ ಪ್ರತಿಯೊಬ್ಬ ನಾಗರಿಕನ ಅಗತ್ಯಗಳನ್ನೂ ಪೂರೈಸುವುದು ತುಂಬ ಕಷ್ಟವಾಗುತ್ತದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಉತ್ತರಪ್ರದೇಶ ಮತ್ತು ಅಸ್ಸಾಂ ರಾಜ್ಯಗಳ ಮಾದರಿಯಲ್ಲೇ ಕರ್ನಾಟಕದಲ್ಲೂ ಹೊಸ ನೀತಿ ಅಳವಡಿಸಿಕೊಳ್ಳಲು ಇದು ಅತ್ಯಂತ ಸೂಕ್ತ ಕಾಲ ಎಂದು ಚಿಕ್ಕಮಗಳೂರು ಶಾಸಕರೂ ಆಗಿರುವ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ. ಅದಲ್ಲದೆ, ಈ ಬಗ್ಗೆ ಆಳ ಮತ್ತು ವಿಸ್ತೃತ ಚರ್ಚೆಯ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಇತ್ತೀಚೆಗಷ್ಟೇ 2021-2030ರ ಜನಸಂಖ್ಯಾ ನೀತಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅನಾವರಣಗೊಳಿಸಿದ್ದಾರೆ. ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಣ ಮತ್ತು ತಾಯಿ-ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡುವ ಉದ್ದೇಶವನ್ನಿಟ್ಟುಕೊಂಡು ಈ ಹೊಸ ನೀತಿ ರೂಪಿಸಲಾಗಿದೆ. ಹಾಗೇ, ಅಸ್ಸಾಂನಲ್ಲೂ ಜನಎರಡು ಮಕ್ಕಳ ನೀತಿಯನ್ನು ಶೀಘ್ರವೇ ಜಾರಿಗೊಳಿಸಲಾಗವುದು ಎಂದು ಹೇಳಲಾಗಿದೆ. ಜನಸಂಖ್ಯಾ ನೀತಿ ಪಾಲನೆ ಮಾಡದವರಿಗೆ ಸರ್ಕಾರಿ ಸೌಲಭ್ಯಗಳು ಸಿಗುವುದಿಲ್ಲ ಎಂಬುದನ್ನೂ ಎರಡೂ ರಾಜ್ಯ ಸರ್ಕಾರಗಳು ಹೇಳಿವೆ.

ಇದನ್ನೂ ಓದಿ: ಉತ್ತರ ಪ್ರದೇಶ ಜನಸಂಖ್ಯಾ ನೀತಿ ಬಿಡುಗಡೆ ಮಾಡಿದ ಯೋಗಿ ಆದಿತ್ಯನಾಥ; ಪ್ರತಿಯೊಂದು ಸಮುದಾಯದ ಬಗ್ಗೆ ಕಾಳಜಿ ವಹಿಸುವುದಾಗಿ ಭರವಸೆ

This In Correct time to Karnataka brings in new population policy Tweet By CT Ravi

Published On - 3:33 pm, Tue, 13 July 21