TV9 Kannada: ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ಅಗ್ರಸ್ಥಾನ ಅಲಂಕರಿಸಿದ ಟಿವಿ9 ಕನ್ನಡ, ಸಮಸ್ತ ಕನ್ನಡಿಗರಿಗೆ ಧನ್ಯವಾದ
TV9 Kannada Digital: ಕೇವಲ ಸುದ್ದಿಗೆ ಮಾತ್ರ ಸೀಮಿತವಾಗದೇ ಮನರಂಜನೆ, ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮ, ಆರೋಗ್ಯ, ಜೀವನಶೈಲಿ, ಕ್ರೀಡೆ, ಶಿಕ್ಷಣ, ವಾಣಿಜ್ಯ, ತಂತ್ರಜ್ಞಾನ ಕ್ಷೇತ್ರಗಳ ಒಳನೋಟವನ್ನೂ ಕಟ್ಟಿಕೊಡುವ ಟಿವಿ9 ಕನ್ನಡ ಡಿಜಿಟಲ್ ರಾಜ್ಯದ ಎಲ್ಲಾ ಭಾಗದ ಹಾಗೂ ಎಲ್ಲಾ ವಯೋಮಾನದ ಓದುಗರನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
ಟಿವಿ9 ಕನ್ನಡ ಇದು ಕನ್ನಡಿಗರ ಪಾಲಿಗೆ ನಂಬಿಕೆಯ ಪ್ರತಿರೂಪ. 2006ರ ಡಿಸೆಂಬರ್ 9ರಂದು ಸುದ್ದಿಗೆಂದೇ ಮೀಸಲಾದ ಕರ್ನಾಟಕದ ಮೊಟ್ಟಮೊದಲ ವಾಹಿನಿಯಾಗಿ ಕಾಲಿಟ್ಟ ಟಿವಿ9 ಕನ್ನಡ (TV9 Kannada) ಅಂದಿನಿಂದ ಇಂದಿನ ತನಕವೂ ಕನ್ನಡಿಗರ ಮನಸ್ಸಿನಲ್ಲಿ ಹಾಗೂ ಸುದ್ದಿ ವಾಹಿನಿಗಳ ಸಾಲಿನಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಂಡು ಬಂದಿದೆ. ಇದೀಗ ಜಗತ್ತು ಡಿಜಿಟಲ್ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿರುವ ಹೊತ್ತಿನಲ್ಲಿ ಹೊಸ ಭರವಸೆಯೊಂದಿಗೆ, ಅತ್ಯುತ್ಸಾಹದೊಂದಿಗೆ ಹಾಗೂ ವಿಶ್ವಾಸಾರ್ಹತೆಯೊಂದಿಗೆ ಡಿಜಿಟಲ್ ಲೋಕಕ್ಕೆ ಕಾಲಿಟ್ಟ ಟಿವಿ9 ಕನ್ನಡ ಅದರಲ್ಲೂ ನಂಬರ್ 1 ಆಗಿ ಹೊರಹೊಮ್ಮಿದೆ. ಕನ್ನಡದ ಎಲ್ಲಾ ಸುದ್ದಿ ವೆಬ್ಸೈಟ್ಗಳಿಗಿಂತ (Kannada News Website) ಮುಂಚೂಣಿಯಲ್ಲಿರುವ ಟಿವಿ9 ಕನ್ನಡ ಡಿಜಿಟಲ್ ಓದುಗರ ಹೃದಯ ಗೆದ್ದಿದೆ. ವೆಬ್ಸೈಟ್, ಯೂಟ್ಯೂಬ್, ಸುದ್ದಿವಾಹಿನಿ ಹೀಗೆ ಎಲ್ಲಾ ಮೂರು ವಿಭಾಗಗಳಲ್ಲೂ ನಂಬರ್ 1 ಸ್ಥಾನವನ್ನು ಕಾಯ್ದುಕೊಂಡಿರುವ ಟಿವಿ9, ನಿರಂತರ ಸುದ್ದಿಯ ಜತೆಗೆ ನಿರಂತರವಾಗಿ ಓದುಗರನ್ನೂ, ನೋಡುಗರನ್ನೂ ಹಿಡಿದಿಟ್ಟುಕೊಂಡು ಅವರ ವಿಶ್ವಾಸ, ನಂಬಿಕೆಯ ಆಧಾರದ ಮೇಲೆಯೇ ಅಗ್ರಸ್ಥಾನವನ್ನು ಅಲಂಕರಿಸಿದೆ ಎಂದು ಹೇಳಲು ಹೆಮ್ಮೆಯಾಗುತ್ತದೆ.
ವೆಬ್ಸೈಟ್ಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ನೀಡುವ ಕಾಮ್ಸ್ಕೋರ್ (Comscore) ಪ್ರಕಟಿಸಿರುವ ಮಾಹಿತಿಯ ಅನ್ವಯ ಟಿವಿ9 ಕನ್ನಡ ಡಿಜಿಟಲ್ ಕಳೆದ ಮೇ ತಿಂಗಳಿನಲ್ಲಿ ಒಟ್ಟು 74 ಲಕ್ಷದ 70 ಸಾವಿರಕ್ಕೂ (7.74 Million) ಅಧಿಕ ಬಳಕೆದಾರರನ್ನು ತಲುಪಿದೆ. ಆ ಮೂಲಕ ಕನ್ನಡದ ಸುದ್ದಿ ಜಾಲತಾಣಗಳ ಪೈಕಿ ಎಲ್ಲರಿಗಿಂತ ಮುಂದೆ ನಿಂತು ನಂಬರ್ 1 ಸ್ಥಾನಕ್ಕೇರಿದೆ. ಇತ್ತೀಚೆಗಷ್ಟೇ ಪೂರ್ಣ ಪ್ರಮಾಣದಲ್ಲಿ ಆರಂಭವಾದ ಟಿವಿ9 ಕನ್ನಡ ಡಿಜಿಟಲ್ ಅತ್ಯಂತ ಕಡಿಮೆ ಅವಧಿಯಲ್ಲಿ ಮಾರುಕಟ್ಟೆಯ ಬಹುದೊಡ್ಡ ಭಾಗವನ್ನು ಆವರಿಸಿಕೊಂಡಿದ್ದು, ಇದು ಟಿವಿ9 ಸಂಸ್ಥೆಯ ಮೇಲೆ ಜನರಿಗೆ ಇರುವ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ.
ಟಿವಿ9 ಕನ್ನಡ ಡಿಜಿಟಲ್ನಲ್ಲಿ ಪ್ರಕಟವಾಗುವ ಸುದ್ದಿಗಳನ್ನು (TV9 Kannada News) ಓದಲೆಂದು ಮೇ ತಿಂಗಳಿನಲ್ಲಿ 74 ಲಕ್ಷದ 70 ಸಾವಿರಕ್ಕೂ ಅಧಿಕ ಓದುಗರು tv9kannada.comಗೆ ಭೇಟಿ ನೀಡಿದ್ದಾರೆ. ಸನಿಹದ ಪ್ರತಿಸ್ಪರ್ಧಿಗಿಂತ 10 ಲಕ್ಷ ಅಧಿಕ ಬಳಕೆದಾರರನ್ನು ಟಿವಿ9 ಕನ್ನಡ ಡಿಜಿಟಲ್ ಹೊಂದಿದೆ. ಎರಡನೇ ಸ್ಥಾನದಲ್ಲಿರುವ ವಿಜಯ ಕರ್ನಾಟಕ ಸುಮಾರು 64 ಲಕ್ಷದ 10 ಸಾವಿರ ಬಳಕೆದಾರರನ್ನೂ, ಮೂರನೇ ಸ್ಥಾನದಲ್ಲಿರುವ ಸುವರ್ಣ ನ್ಯೂಸ್ 62 ಲಕ್ಷದ 80 ಸಾವಿರ ಬಳಕೆದಾರರನ್ನೂ ಹೊಂದಿದೆ. ನಾಲ್ಕನೇ ಸ್ಥಾನದಲ್ಲಿರುವ ನ್ಯೂಸ್18 ಕನ್ನಡ 24 ಲಕ್ಷದ 40 ಸಾವಿರ ಬಳಕೆದಾರರನ್ನು ಹೊಂದಿದ್ದರೆ, ಐದನೇ ಸ್ಥಾನದಲ್ಲಿರುವ ಪ್ರಜಾವಾಣಿ 24ಲಕ್ಷದ 30 ಸಾವಿರ ಬಳಕೆದಾರರನ್ನು ಹೊಂದಿದೆ.
ಕೇವಲ ಸುದ್ದಿಗೆ ಮಾತ್ರ ಸೀಮಿತವಾಗದೇ ಮನರಂಜನೆ, ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮ, ಆರೋಗ್ಯ, ಜೀವನಶೈಲಿ, ಕ್ರೀಡೆ, ಶಿಕ್ಷಣ, ವಾಣಿಜ್ಯ, ತಂತ್ರಜ್ಞಾನ ಕ್ಷೇತ್ರಗಳ ಒಳನೋಟವನ್ನೂ ಕಟ್ಟಿಕೊಡುವ ಟಿವಿ9 ಕನ್ನಡ ಡಿಜಿಟಲ್ ರಾಜ್ಯದ ಎಲ್ಲಾ ಭಾಗದ ಹಾಗೂ ಎಲ್ಲಾ ವಯೋಮಾನದ ಓದುಗರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಪ್ರಮುಖ ಬೆಳವಣಿಗೆಗಳಿದ್ದಾಗ ಕ್ಷಣಕ್ಷಣಕ್ಕೂ ಲೈವ್ ಅಪ್ಡೇಟ್ಸ್, ವಿಶ್ಲೇಷಣೆ, ವಿಮರ್ಶೆಗಳೊಂದಿಗೆ ಘಟನೆಯ ಎಲ್ಲಾ ಆಯಾಮಗಳನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಿರುವ ಟಿವಿ9 ಕನ್ನಡ ಡಿಜಿಟಲ್, ಸರಳ ಹಾಗೂ ಸ್ಪಷ್ಟ ಕನ್ನಡದೊಂದಿಗೆ ಪ್ರಬುದ್ಧ ಓದುಗರ ಮನಸ್ಸು ಗೆದ್ದಿದೆ.
ಡಿಜಿಟಲ್ ಮಾಧ್ಯಮ ಕ್ಷೇತ್ರದ ಮುಂದಾಳತ್ವ ವಹಿಸಿಕೊಂಡಿರುವ ಟಿವಿ9 ಕನ್ನಡ ಪ್ರತಿ ಸುದ್ದಿಯನ್ನೂ ಅತ್ಯಂತ ನಿಖರವಾಗಿ, ಸ್ಪಷ್ಟವಾಗಿ ಅಷ್ಟೇ ವೇಗವಾಗಿ ಪ್ರಕಟಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದು ಈ ವಿಶ್ವಾಸವನ್ನು ಹೀಗೆಯೇ ಸದಾ ಉಳಿಸಿಕೊಳ್ಳುವ ಪಣ ತೊಟ್ಟಿದೆ. ಸಂಸ್ಥೆಯ ಈ ಬೆಳವಣಿಗೆ ಕುರಿತು ಟಿವಿ9 ಕರ್ನಾಟಕದ ವ್ಯವಸ್ಥಾಪಕ ಸಂಪಾದಕ ಆರ್.ಶ್ರೀಧರನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿಜಿಟಲ್ ವಿಭಾಗದ ಉಸ್ತುವಾರಿ ವಹಿಸಿಕೊಂಡಿರುವ ಟಿವಿ9 ಕನ್ನಡ ಡಿಜಿಟಲ್ನ ಸಂಪಾದಕ ಭಾಸ್ಕರ ಹೆಗಡೆ ತಂಡದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದು, ಟಿವಿ9ನ ಧ್ಯೇಯ ವಾಕ್ಯ ‘ಉತ್ತಮ ಸಮಾಜಕ್ಕಾಗಿ’ ಎಂಬ ನುಡಿಯನ್ನು ಸದಾ ನೆನಪಿನಲ್ಲಿಟ್ಟುಕೊಂಡು, ಪತ್ರಿಕಾ ರಂಗದ ತತ್ವಗಳಿಗೆ ಧಕ್ಕೆ ಉಂಟಾಗದಂತೆ ಕಾರ್ಯ ನಿರ್ವಹಿಸಲು ಕಿವಿಮಾತು ಹೇಳಿದ್ದಾರೆ. ಕ್ಷಣಕ್ಷಣಕ್ಕೂ ಪೈಪೋಟಿ ಒಡ್ಡುವ ಡಿಜಿಟಲ್ ಲೋಕದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡು ಮುನ್ನುಗ್ಗುವ ಸವಾಲನ್ನು ಹೀಗೆಯೇ ನಿಭಾಯಿಸುತ್ತೇವೆ ಎಂಬ ಅಚಲ ವಿಶ್ವಾಸದೊಂದಿಗೆ ನಮ್ಮನ್ನು ಅಗ್ರಸ್ಥಾನಕ್ಕೇರಿಸಿದ ಸಮಸ್ತ ಕನ್ನಡಿಗರಿಗೂ ಈ ಮೂಲಕ ಹೃದಯಾಂತರಾಳದ ವಂದನೆಗಳನ್ನು ಅರ್ಪಿಸುತ್ತಿದ್ದೇವೆ.
ಸುದ್ದಿ ಎಂದರೆ ಅವಸರದ ಸಾಹಿತ್ಯ ಹೌದಾದರೂ ಅದೆಷ್ಟೇ ಕಠಿಣ ವಿಚಾರವನ್ನೂ ಸರಳವಾಗಿ, ಸ್ಪಷ್ಟವಾಗಿ ಮತ್ತು ವೇಗವಾಗಿ ಸುದ್ದಿಯ ರೂಪದಲ್ಲಿ ಓದುಗರಿಗೆ ತಲುಪಿಸಬೇಕು ಎಂಬ ಗುರಿಯನ್ನು ಹೊತ್ತ ಟಿವಿ9 ಕನ್ನಡ ಡಿಜಿಟಲ್ ಇನ್ನು ಮುಂದೆಯೂ ಇದೇ ರೀತಿ ಅಚ್ಚುಕಟ್ಟಾಗಿ ನಿಮ್ಮನ್ನು ನಿರಂತರವಾಗಿ ತಲುಪಲಿದೆ. ಕಣ್ಣಿಗೆ ಹಿತವೆನಿಸುವ ವಿನ್ಯಾಸ, ಸರಳ ಭಾಷೆ, ಸ್ಪಷ್ಟ ನಿರೂಪಣೆಯೊಂದಿಗೆ ಹಳ್ಳಿಯಿಂದ ದಿಲ್ಲಿವರೆಗಿನ ಎಲ್ಲಾ ಸುದ್ದಿಗಳೊಂದಿಗೆ, ಮೊಗೆದಷ್ಟೂ ವಿಭಿನ್ನ ವಿಚಾರಗಳೊಂದಿಗೆ, ಅಚ್ಚರಿ ಮೂಡಿಸುವ ಹೊಸತನಗಳೊಂದಿಗೆ ನಿಮ್ಮನ್ನು ಎದುರಾಗಲಿದೆ. ನಿಮ್ಮ ಬೆಚ್ಚಗಿನ ಅಪ್ಪುಗೆ ನಮ್ಮ ಜತೆಗಿರಲಿ. ನಿಮ್ಮ ಸುದ್ದಿಯ ವಿಳಾಸ ಎಂದೆಂದಿಗೂ
Published On - 3:46 pm, Tue, 13 July 21