ಕರ್ನಾಟಕದ ಆರ್ಥಿಕತೆಗೆ ಮತ್ತೊಂದು ಆತಂಕ: ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ

ಶಾಸಕ ಕೃಷ್ಣ ಭೈರೇಗೌಡ, ಕರ್ನಾಟಕದ ಹಣಕಾಸಿಗೆ ಮುಂದೆ ದೊಡ್ಡ ಗಂಡಾಂತರ ಬರಬಹುದು ‌ಎಂದು ಆತಂಕ ವ್ಯಕ್ತಪಡಿಸಿದರು

ಕರ್ನಾಟಕದ ಆರ್ಥಿಕತೆಗೆ ಮತ್ತೊಂದು ಆತಂಕ: ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ
ಶಾಸಕ ಕೃಷ್ಣಭೈರೇಗೌಡ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Edited By:

Updated on: Dec 23, 2021 | 9:01 PM

ಬೆಳಗಾವಿ: ವಿಧಾನಸಭೆಯಲ್ಲಿ ಗುರುವಾರ ಕರ್ನಾಟಕ ಧನ ವಿನಿಯೋಗ ವಿಧೇಯಕವನ್ನು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದರು. ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ನಾನೀಗ ಕೊರೊನಾ ಮತ್ತೊಂದು ಅಲೆಯ ಮಧ್ಯೆ ನಿಂತಿದ್ದೇನೆ. ಹಾಗೆಂದು ಕೇವಲ ಸಮಸ್ಯೆಯ ಬಗ್ಗೆ ನಾನು ಮಾತನಾಡುವುದಿಲ್ಲ. ನಾನು ಪರಿಹಾರ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ. ಜಿಎಸ್​ಟಿ ಸಭೆಯಲ್ಲಿ ಪಕ್ಷಾತೀತವಾಗಿ ಚರ್ಚೆ ಮಾಡುತ್ತೇವೆ. ರಾಜ್ಯದ ಹಿತಾಸಕ್ತಿ ಪರ ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.

ಕಲ್ಯಾಣ ಕರ್ನಾಟಕ ಭಾಗಕ್ಕೆ ನಮ್ಮ ಸರ್ಕಾರ ಹೆಚ್ಚು ಅನುದಾನ ನೀಡಿದೆ. ಒಟ್ಟು ₹ 882 ಕೋಟಿ ಖರ್ಚು ಮಾಡಲು ದುಡ್ಡಿದೆ. ಈವರೆಗೆ ಖರ್ಚು ₹ 707 ಕೋಟಿ ಖರ್ಚು ಮಾಡಿದ್ದೇವೆ. ಇನ್ನಷ್ಟು ಕೊಡಲು ಸಿದ್ಧ. ಆ ಭಾಗದ ಕೆಲವು ಶಾಸಕರನ್ನು ಕರೆದು ಮಾತಾಡಿದ್ದೇನೆ. ಕೆಲವೇ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಯ ಕೆಲಸವೂ ಸಾಗಿದೆ ಎಂದರು.

ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಬ್ಯಾಟರಾಯನಪುರ ಶಾಸಕ ಕೃಷ್ಣ ಭೈರೇಗೌಡ, ಕರ್ನಾಟಕದ ಹಣಕಾಸಿಗೆ ಮುಂದೆ ದೊಡ್ಡ ಗಂಡಾಂತರ ಬರಬಹುದು ‌ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯದ ಸರ್ಕಾರದ ಖರ್ಚುಗಳು ಹೆಚ್ಚಾಗಿದೆ, ಆದಾಯ ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಹಣಕಾಸು ಸ್ಥಿತಿಗೆ ದೊಡ್ಡ ಗಂಡಾಂತರ ಬರಬಹುದು. ಮದ್ಯದಿಂದ ಬರುವ ಸುಂಕದಿಂದ ಸರ್ಕಾರ ಕಟ್ಟೋದು ನ್ಯಾಯವೇ ಎಂದು ಪ್ರಶ್ನಿಸಿದರು.

ಸದನದ ಹೊರಗೆ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಸಂಪುಟ ಪುನಾರಚಣೆ ಬಗ್ಗೆ ಈಗ ನಾನೇನೂ ಮಾತನಾಡುವುದಿಲ್ಲ. ವರಿಷ್ಠರ ಜತೆ ಚರ್ಚಿಸದೇ ಈ ಬಗ್ಗೆ ಏನೂ ಹೇಳಲು ಆಗುವುದಿಲ್ಲ. ಪುನಾರಚನೆಯಾದರೆ ತಿಳಿಸುತ್ತೇನೆ. ಅಲ್ಲಿಯವರೆಗೆ ಕಾದುನೋಡಿ ಎಂದು ಪ್ರತಿಕ್ರಿಯಿಸಿದರು.

ಇದನ್ನೂ ಓದಿ: Karnataka Anti Conversion Bill 2021: ವಿಪಕ್ಷಗಳ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ
ಇದನ್ನೂ ಓದಿ: ಪರಿಷತ್‌ನಲ್ಲಿ ರಾಜ್ಯ ಆಯುಷ್ ವಿವಿ, ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿವಿ 2021 ತಿದ್ದುಪಡಿ ವಿಧೇಯಕ ಅಂಗೀಕಾರ

Published On - 9:01 pm, Thu, 23 December 21