ಗೋಧ್ರಾ ಹತ್ಯಾಕಾಂಡದಂತೆ ಸುಟ್ಟುಹಾಕ್ತೀವಿ ಅಂತ ಹೇಳುವ ಮನಸ್ಥಿತಿ ಏಕಾಏಕಿ ಹುಟ್ಟಿರಲಾರದು: ಸಿಟಿ ರವಿ, ಬಿಜೆಪಿ ನಾಯಕ
ರಾಮನಗರದಲ್ಲೂ ವಕೀಲನೊಬ್ಬ ಗ್ಯಾನವಾಪಿ ಮಸೀದಿಗೆ ಸಂಬಂಧಿಸಿದಂತೆ ವಾರಣಾಸಿಯ ಕೋರ್ಟೊಂದು ನೀಡಿರುವ ತೀರ್ಪನ್ನು ಮನಬಂದಂತೆ ನಿಂದಿಸಿದ್ದಾನೆ. ಹಾಗಾಗಿ ಯಾವ ಪಿತೂರಿ ನಡೆಯುತ್ತಿದೆ, ಪಿತೂರಿಗಾರರ ಹುನ್ನಾರ ಏನು? ಅನ್ನೋದು ಗೊತ್ತಾಗಬೇಕು. ಯಾಕೆಂದರೆ ಈ ಎರಡು ಘಟನೆಗಳು ಬೇರೆ ಬೇರೆಯಾಗಿರುವುದು ಸಾಧ್ಯವಿಲ್ಲ, ಸಮಗ್ರ ತನಿಖೆಯಾಗಬೇಕು ಎಂದು ರವಿ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಮಾಜಿ ಶಾಸಕ ಸಿಟಿ ರವಿ (CT Ravi) ಹೊಸಪೇಟೆಯಲ್ಲಿ ರಾಮಭಕ್ತರಿಗೆ ಬೆದರಿಕೆ ಹಾಕಿದ ಪ್ರಕರಣದ ಸಮಗ್ರ ತನಿಖೆಯಾಯಾಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ವಿಶೇಷ ರೈಲೊಂದರಲ್ಲಿ ಅಯೋಧ್ಯೆಯಿಂದ ವಾಪಸ್ಸಾಗುತ್ತಿದ್ದ ರಾಮಭಕ್ತರಿಗೆ ಹೊಸಪೇಟೆಯಲ್ಲಿ ಮತಾಂಧನೊಬ್ಬ ಗೋಧ್ರಾ ಹತ್ಯಾಕಾಂಡದ (Godhra massacre) ಮಾದರಿಯಲ್ಲಿ ಸುಟ್ಟು ಹಾಕುತ್ತೇನೆ ಅಂತ ಬೆದರಿಸಿದ್ದಾನೆ. ಭಕ್ತರು ಅವನನ್ನು ಹಿಡಿದು ಪೊಲೀಸ ವಶಕ್ಕೆ ಒಪ್ಪಿಸಿದರೂ ತಪ್ಪಿಸಿಕೊಳ್ಳುವಲ್ಲಿ ಸಫಲನಾಗಿದ್ದಾನೆ. ನಂತರ ಸಿಸಿಟಿವಿ ಫುಟೇಜ್ (CCTV footage) ಆಧರಿಸಿ ಅವನನ್ನು ಬಂಧಿಸಲಾಗಿದೆ ಎಂದು ರವಿ ಹೇಳಿದರು. ಗೋಧ್ರಾದಂಥ ಹತ್ಯಾಕಾಂಡ ನಡೆಸುತ್ತೇವೆ ಎಂದು ಹೇಳುವ ಮನಸ್ಥಿತಿ ಅವನಲ್ಲಿ ಏಕಾಏಕಿ ಹುಟ್ಟಿರುವುದಿಲ್ಲ, ಇದರ ಹಿಂದಿನ ಪಿತೂರಿಯನ್ನು ಪೊಲೀಸರು ಬಯಲಿಗೆಳೆಯಬೇಕು. ರಾಮನಗರದಲ್ಲೂ ವಕೀಲನೊಬ್ಬ ಗ್ಯಾನವಾಪಿ ಮಸೀದಿಗೆ ಸಂಬಂಧಿಸಿದಂತೆ ವಾರಣಾಸಿಯ ಕೋರ್ಟೊಂದು ನೀಡಿರುವ ತೀರ್ಪನ್ನು ಮನಬಂದಂತೆ ನಿಂದಿಸಿದ್ದಾನೆ. ಹಾಗಾಗಿ ಯಾವ ಪಿತೂರಿ ನಡೆಯುತ್ತಿದೆ, ಪಿತೂರಿಗಾರರ ಹುನ್ನಾರ ಏನು? ಅನ್ನೋದು ಗೊತ್ತಾಗಬೇಕು. ಯಾಕೆಂದರೆ ಈ ಎರಡು ಘಟನೆಗಳು ಬೇರೆ ಬೇರೆಯಾಗಿರುವುದು ಸಾಧ್ಯವಿಲ್ಲ, ಸಮಗ್ರ ತನಿಖೆಯಾಗಬೇಕು ಎಂದು ರವಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ