ಮಾಲೀಕರಿಗೆ ತಿಳಿಯದಂತೆ ಐಷಾರಾಮಿ ಕಾರುಗಳನ್ನು ಬಾಡಿಗೆ, ಮಾರಾಟ ಮಾಡುತ್ತಿದ್ದ ಮೂವರು ಖದೀಮರು ಅರೆಸ್ಟ್

| Updated By: ಆಯೇಷಾ ಬಾನು

Updated on: Jul 14, 2021 | 2:26 PM

ಆರೋಪಿಗಳಿಂದ 3 ಕೋಟಿ ರೂಪಾಯಿ ಮೌಲ್ಯದ 19 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಕಾರು ಮಾರಾಟ ಮಾಡಿಸಿಕೊಡುವುದಾಗಿ ಪಡೆದು. ಮಾಲೀಕರ ಅನುಮತಿಯಿಲ್ಲದೆ ಬೇರೆಯವರಿಗೆ ಒತ್ತೆ ಇಡುತ್ತಿದ್ದರು.

ಮಾಲೀಕರಿಗೆ ತಿಳಿಯದಂತೆ ಐಷಾರಾಮಿ ಕಾರುಗಳನ್ನು ಬಾಡಿಗೆ, ಮಾರಾಟ ಮಾಡುತ್ತಿದ್ದ ಮೂವರು ಖದೀಮರು ಅರೆಸ್ಟ್
ನಸೀಬ್, ಮೊಹಮ್ಮದ್ ಅಜಂ, ಮಹೀರ್ ಖಾನ್ ಬಂಧಿತ ಆರೋಪಿಗಳು
Follow us on

ಬೆಂಗಳೂರು: ಐಷಾರಾಮಿ ಕಾರುಗಳ ಮಾಲೀಕರಿಗೆ ಕಾರು ಮಾರಾಟ ಮಾಡಿಕೊಡುವುದಾಗಿ ಹೇಳಿ ಮಾಲೀಕರಿಗೆ ತಿಳಿಯದಂತೆ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ಖದೀಮರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಸೀಬ್, ಮೊಹಮ್ಮದ್ ಅಜಂ, ಮಹೀರ್ ಖಾನ್ ಬಂಧಿತ ಆರೋಪಿಗಳು.

ಆರೋಪಿಗಳಿಂದ 3 ಕೋಟಿ ರೂಪಾಯಿ ಮೌಲ್ಯದ 19 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಕಾರು ಮಾರಾಟ ಮಾಡಿಸಿಕೊಡುವುದಾಗಿ ಪಡೆದು. ಮಾಲೀಕರ ಅನುಮತಿಯಿಲ್ಲದೆ ಬೇರೆಯವರಿಗೆ ಒತ್ತೆ ಇಡುತ್ತಿದ್ದರು. ಹಾಗೂ ಮಾಹಿತಿ ನೀಡದೆ ಕಾರುಗಳನ್ನು ಮಾರುತ್ತಿದ್ದರು. ಇದೇ ರೀತಿ ಭಟ್ಕಳ, ದಾವಣಗೆರೆ, ಚಿತ್ರದುರ್ಗ ಸೇರಿ ಹಲವೆಡೆ ಮಾರಾಟ ಮಾಡಿದ್ದಾರೆ. ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಕೇಸ್ ದಾಖಲಾಗಿದ್ದು ಸದ್ಯ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.

ಇನ್ನು ಮತ್ತೊಂದು ಕಡೆ ಬೆಂಗಳೂರಿನಲ್ಲಿ ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿಯನ್ನು ಬಂಧಿಸಲಾಗಿದೆ. ಕೆ.ಪಿ.ಅಗ್ರಹಾರ ಪೊಲೀಸರಿಂದ ಗೂಂಡಾ ಕಾಯ್ದೆಯಡಿ ರೌಡಿಶೀಟರ್ ಸಂಜಯ್(24) ನನ್ನು ಬಂಧಿಸಲಾಗಿದೆ. 2013ರಿಂದಲೂ ವಿವಿಧ ಅಪರಾಧ ಕೃತ್ಯಗಳಲ್ಲಿ ಆರೋಪಿ ಸಕ್ರಿಯನಾಗಿದ್ದ. ಈತನ ವಿರುದ್ಧ ಪಶ್ಚಿಮ ವಿಭಾಗದ ವಿವಿಧ ಠಾಣೆಗಳಲ್ಲಿ 19 ಪ್ರಕರಣಗಳಿದ್ದವು. ಜಾಮೀನು ಪಡೆದು ಹೊರಬಂದು ನಂತರವೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಹಿನ್ನೆಲೆಯಲ್ಲಿ ಕೆ.ಪಿ.ಅಗ್ರಹಾರ ಪೊಲೀಸರಿಂದ ಗೂಂಡಾ ಕಾಯ್ದೆಯಡಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ: ತುಂಡು ಭೂಮಿಗಾಗಿ ಶ್ಯೂರಿಟಿ ಹಾಕಿದ್ದವನನ್ನೇ ಕೊಂದ ಸ್ನೇಹಿತರು, ಐವರು ಆರೋಪಿಗಳು ಅರೆಸ್ಟ್